ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೆಸಿಪಿ | ಮಳೆಗಾಲಕ್ಕೆ ಫಿಷ್‌, ಮಟನ್‌ ಸೂಪ್‌

Published : 20 ಮೇ 2022, 19:30 IST
ಫಾಲೋ ಮಾಡಿ
Comments

ಫಿಷ್‌ ಸೂಪ್
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ – 1 ಸಣ್ಣದು, ಬೆಳ್ಳುಳ್ಳಿ – 1 ಎಸಳು, ಖಾರದಪುಡಿ – 1 ಟೇಬಲ್ ಚಮಚ, ಚಿಕನ್ ಬ್ರಾಥ್‌ – 1/2 ಕಪ್‌, ಜೀರಿಗೆ – 1 ಟೀ ಚಮಚ, ಟೊಮೆಟೊ ರಸ – ಒಂದೂವರೆ ಕಪ್‌, ದೊಣ್ಣೆ ಮೆಣಸು – ಅರ್ಧ ಕಪ್‌, ಒಂದೆರಡು ಬಗೆಯ ಮೀನಿನ ತುಂಡು – 1/2 ಕಪ್‌ (ಮುಳ್ಳು ರಹಿತ ಮೀನಿನ ಮಾಂಸ).

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಸೇರಿಸಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಿ. ಅದಕ್ಕೆ ಬೆಳ್ಳುಳ್ಳಿ ಹಾಗೂ ಖಾರದಪುಡಿ ಸೇರಿಸಿ 2 ನಿಮಿಷ ಹುರಿಯಿರಿ.

ಅದಕ್ಕೆ ಚಿಕನ್ ಬ್ರಾಥ್‌, ಕಾಳುಮೆಣಸು, ಜೀರಿಗೆ ಸೇರಿಸಿ ಕೈಯಾಡಿಸಿ. ಇದನ್ನು ದೊಡ್ಡ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ ಉರಿ ಸಣ್ಣ ಮಾಡಿ 20 ನಿಮಿಷ ಕುದಿಸಿ. ಅದಕ್ಕೆ ಟೊಮೆಟೊ, ದೊಣ್ಣೆಮೆಣಸು ಹಾಗೂ ಮೀನಿನ ತುಂಡುಗಳನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಕುದಿಸಿ. ಪುನಃ ಮುಚ್ಚಳ ಮುಚ್ಚಿ 5 ನಿಮಿಷ ಕುದಿಸಿ. ಈಗ ನಿಮ್ಮ ಮುಂದೆ ಸ್ಪೆಷಲ್ ಫಿಷ್‌ ಸೂಪ್ ಸವಿಯಲು ಸಿದ್ಧ.

ಮಟನ್‌ ಸೂಪ್‌
ಬೇಕಾಗುವ ಸಾಮಗ್ರಿಗಳು:
ಮೂಳೆ ಸಹಿತ ಮಟನ್‌ – 250 ಗ್ರಾಂ, ಈರುಳ್ಳಿ – 1, ಟೊಮೆಟೊ – 1, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಅರಿಸಿನ ಪುಡಿ – ಕಾಲು ಚಮಚ, ಖಾರದಪುಡಿ – ಅರ್ಧ ಚಮಚ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ಎಣ್ಣೆ – 1 ಚಮಚ, ದಾಲ್ಚಿನ್ನಿ ಎಲೆ – 1, ಚಕ್ಕೆ – 1, ಲವಂಗ – 4, ಉಪ್ಪು – ರುಚಿಗೆ, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು – ಸ್ವಲ್ಪ

ತಯಾರಿಸುವ ವಿಧಾನ: ಮಟನ್ ತುಂಡುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ಕುಕ್ಕರ್‌ನಲ್ಲಿ ಹಾಕಿ. ಅದಕ್ಕೆ ಈರುಳ್ಳಿ, ಟೊಮೆಟೊ, ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ. ಶುಂಠಿ–ಬೆಳುಳ್ಳಿ ಪೇಸ್ಟ್ ಸೇರಿಸಿ. ಅದಕ್ಕೆ ಅರಿಸಿನ ಪುಡಿ, ಖಾರದಪುಡಿ ಹಾಗೂ ಉಪ್ಪು ಸೇರಿಸಿ. 5 ಗ್ಲಾಸ್‌ ನೀರು ಸೇರಿಸಿ. ದೊಡ್ಡ ಉರಿಯಲ್ಲಿ 4 ವಿಶಲ್ ಕೂಗಿಸಿ. ಈಗ ಉರಿ ಕಡಿಮೆ ಮಾಡಿ, ಪುನಃ 10 ರಿಂದ 12 ನಿಮಿಷ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣದಾಗ ಮೇಲೆ ಈ ಎಲ್ಲವನ್ನೂ ಸ್ಮ್ಯಾಶ್ ಮಾಡಿ (ನುಣ್ಣಗೆ ಮಾಡಬಾರದು).

ಪ್ಯಾನ್‌ವೊಂದನ್ನು ಬಿಸಿ ಮಾಡಿ ಅದಕ್ಕೆ ಚಕ್ಕೆ, ಲವಂಗ, ದಾಲ್ಚಿನ್ನಿ ಎಲೆ ಹಾಗೂ ಕರಿಬೇವು ಹಾಕಿ ಎಲ್ಲವನ್ನು ಹುರಿಯಿರಿ. ಅದಕ್ಕೆ ಮೊದಲೇ ಬೇಯಿಸಿಟ್ಟುಕೊಂಡ ಸೂಪ್ ಸೇರಿಸಿ. ಕಾಳುಮೆಣಸಿನ ಪುಡಿ ಸೇರಿಸಿ ಸ್ಟೌ ಆಫ್ ಮಾಡಿ. ಬಡಿಸುವ ಮೊದಲು ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಕುಡಿಯಲು ಕೊಡಿ.

ಸೀ ಫುಡ್‌ ಸೂಪ್‌
ಬೇಕಾಗುವ ಸಾಮಗ್ರಿಗಳು
: ಆಲಿವ್‌ ಎಣ್ಣೆ – 1 ಟೇಬಲ್ ಚಮಚ, ಈರುಳ್ಳಿ – 1 ಮಧ್ಯಮ ಗಾತ್ರದ್ದು (ಹೆಚ್ಚಿದ್ದು), ಕಾಳುಮೆಣಸಿನ ಪುಡಿ – ಚಿಟಿಕೆ, ಕ್ಯಾರೆಟ್‌ – 2 ಮಧ್ಯಮ ಗಾತ್ರದ್ದು, ಬೆಳ್ಳುಳ್ಳಿ – 1 ಎಸಳು, ಟೊಮೆಟೊ ಸಾಸ್‌ – ಸ್ವಲ್ಪ, ಟೊಮೊಟೊ ರಸ– ಸ್ವಲ್ಪ, ಚಿಕನ್‌ ಬ್ರಾಥ್‌ – ಮುಕ್ಕಾಲು ಕಪ್‌, ದಾಲ್ಚಿನ್ನಿ ಎಲೆ – 1, ಒಣ ಆರ್ಗೆನೋ ಪುಡಿ – 1/2 ಟೀ ಚಮಚ, ಸಾಲ್ಮನ್ ಮೀನಿನ ತುಂಡು – ಸ್ವಲ್ಪ, ಸಿಗಡಿ – ಕಾಲು ಕಪ್‌ (ಸಿಪ್ಪೆ ಸುಲಿದ್ದು ಕತ್ತರಿಸಿದ್ದು), ಕೊತ್ತಂಬರಿ ಸೊಪ್ಪು – 3 ಚಮಚ (ಸಣ್ಣಗೆ ಹೆಚ್ಚಿದ್ದು).

ತಯಾರಿಸುವ ವಿಧಾನ: ದಪ್ಪ ತಳದ ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಹಸಿಮೆಣಸು ಸೇರಿಸಿ ಹುರಿದುಕೊಳ್ಳಿ. ನಂತರ ಕ್ಯಾರೆಟ್ ಹಾಗೂ ಬೆಳ್ಳುಳ್ಳಿ ಸೇರಿಸಿ 3 ನಿಮಿಷ ದೊಡ್ಡ ಉರಿಯಲ್ಲಿ ಬೇಯಿಸಿ. ಅದಕ್ಕೆ ಟೊಮೆಟೊ ಸಾಸ್‌, ಟೊಮೆಟೊ ರಸ ಹಾಗೂ ಚಿಕನ್ ಬ್ರಾಥ್ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಉರಿ ಕಡಿಮೆ ಮಾಡಿ ಸಣ್ಣ ಉರಿಯಲ್ಲಿ 30 ನಿಮಿಷ ಕುದಿಸಿ. ಅದಕ್ಕೆ ಮೀನು, ಸಿಗಡಿ ಸೇರಿಸಿ 10 ನಿಮಿಷ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪು ಉದುರಿಸಿ ಕುಡಿಯಲು ಕೊಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT