ಬುಧವಾರ, ಅಕ್ಟೋಬರ್ 28, 2020
18 °C

ಪಾಕ ವಿಧಾನ: ಫಿಶ್ ಮಂಚೂರಿಯನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಫಿಶ್ ಮಂಚೂರಿಯನ್‌

ಬೇಕಾಗುವ ಸಾಮಗ್ರಿಗಳು: ಮೀನು – 3‌ (ಸ್ವಚ್ಛ ಮಾಡಿ ಕತ್ತರಿಸಿಕೊಂಡಿದ್ದು), ಮೊಟ್ಟೆ – 1, ಕಾರ್ನ್ ಫ್ಲೋರ್ – 2 ಚಮಚ, ಕಾಳುಮೆಣಸಿನ ಪುಡಿ – 1 ಚಮಚ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಕೆಂಪುಮೆಣಸಿನ ಪುಡಿ – 2 ಚಮಚ, ಎಣ್ಣೆ – ಕರಿಯಲು, ಈರುಳ್ಳಿ – 1 ಮಧ್ಯಮ ಗಾತ್ರದ್ದು, ಹಸಿಮೆಣಸು – 2, ಸೋಯಾ ಸಾಸ್‌, ಕೆಚಪ್‌, ಬೆಳ್ಳುಳ್ಳಿ.

ತಯಾರಿಸುವ ವಿಧಾನ: ಪಾತ್ರೆಯೊಂದರಲ್ಲಿ ಮೀನಿನ ತುಂಡು, ಮೊಟ್ಟೆ, ಕಾರ್ನ್‌ಫ್ಲೋರ್‌, ಕಾಳುಮೆಣಸಿನ ಪುಡಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಕಲೆಸಿ. 20 ನಿಮಿಷಗಳ ಕಾಲ ನೆನೆಯಲು ಬಿಡಿ. ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ ಮೀನಿನ ತುಂಡುಗಳನ್ನು ಎಣ್ಣೆಯಲ್ಲಿ ಕರಿಯಿರಿ. ನಂತರ ಪ್ಯಾನ್‌ವೊಂದರಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜಜ್ಜಿಕೊಂಡ ಬೆಳ್ಳುಳ್ಳಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಸೋಯಾ ಸಾಸ್, ಕೆಚಪ್‌, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಯುತ್ತಿರುವಾಗ ಉಪ್ಪು ಸೇರಿಸಿ. ಮತ್ತೆ ನೀರು ಸೇರಿಸಿ ಕುದಿಸಿ. ಮಿಶ್ರಣ ಮಂದವಾದ ಮೇಲೆ ಹುರಿದಿಟ್ಟುಕೊಂಡ ಮೀನಿನ ತುಂಡು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ 3 ನಿಮಿಷಗಳ ಕಾಲ ಕೈಯಾಡಿಸಿ. ಈಗ ರುಚಿಯಾದ ಫಿಶ್ ಮಂಚೂರಿಯನ್ ತಿನ್ನಲು ಸಿದ್ಧ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು