ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್ಮಸ್‌ಗೆ ಹಾಲಿನ ಕೇಕ್‌, ಮಲೈ

Published 15 ಡಿಸೆಂಬರ್ 2023, 22:25 IST
Last Updated 15 ಡಿಸೆಂಬರ್ 2023, 22:25 IST
ಅಕ್ಷರ ಗಾತ್ರ

ಮಿಲ್ಕ್ ಕೇಕ್

ಬೇಕಾಗುವ ಸಾಮಗ್ರಿ:  ಸಣ್ಣ ರವೆ 1ಕಪ್, ಹಾಲು ಕಪ್, ಮಿಲ್ಕ್ ಪೌಡರ್ 1/4 ಕಪ್,ಸಕ್ಕರೆ 1 ಕಪ್, ಅಡುಗೆ ಸೋಡಾ 1ಚಮಚ, ಗೋಡಂಬಿ-ಬಾದಾಮಿ,8-10.

ಮಾಡುವ ವಿಧಾನ: ಹಾಲನ್ನು ಚೆನ್ನಾಗಿ ಕಾಯಿಸಿ, ಬಿಸಿಯಿರುವಾಗಲೇ ಒಂದು ಪಾತ್ರೆಗೆ ಸುರುವಿಕೊಳ್ಳಿ. ಇದಕ್ಕೆ ಸಕ್ಕರೆಯನ್ನು ಸೇರಿಸಿ ಕರಗುವವರೆಗೆ ಕಲಕಿ. ನಂತರ ರವೆ ಮಿಲ್ಕ್ ಪೌಡರ್ ಹಾಕಿ, ಮಿಶ್ರಣ ಮಾಡಿ, ತಟ್ಟೆ ಮುಚ್ಚಿ ಹತ್ತು ನಿಮಿಷದವರೆಗೆ ನೆನೆಸಿ. ಒಲೆಯ ಮೇಲೆ ದಪ್ಪ ಕಡಾಯಿ ಇಟ್ಟು ಕೇಕ್ ಸ್ಟಾಂಡ್ ಅಥವಾ ಕುಕಿಂಗ್ ಪಾಟ್ ಸ್ಟಾಂಡ್ ಇಟ್ಟು ಕಡಾಯಿ ಮುಚ್ಚಿ ಸಣ್ಣ ಉರಿಯಲ್ಲಿ ಪ್ರೀ ಹೀಟ್ ಗೆ ಇಡಿ. ಕೇಕ್ ಪ್ಯಾನ್ ಒಳಗೆ ಎಣ್ಣೆ ಸವರಿ ಬಟರ್ ಪೇಪರ್ ಇಟ್ಟು ಸ್ವಲ್ಪ ಜಿಡ್ಡು ಸವರಿಟ್ಟುಕೊಳ್ಳಿ. ಇದರೊಳಗೆ, ಮಂದವಾಗಿ ಇಡ್ಲಿ ಹಿಟ್ಟಿನ ಹದಕ್ಕೆ ಬಂದಿರುವ ಕೇಕ್ ಮಿಶ್ರಣವನ್ನು ಮತ್ತೊಮ್ಮೆ ಕೈಯಾಡಿ ಸುರಿದು ಮೇಲೆ ಒಣಹಣ್ಣುಗಳನ್ನು ಹರಡಿ , ಕಡಾಯಿಯಲ್ಲಿಟ್ಟು ಸಣ್ಣ ಉರಿಯಲ್ಲೇ 45-50ನಿಮಿಷ ಅದೇ ಉರಿಯಲ್ಲಿ ಬೇಯಿಸಿ. ಫ್ರೂಟ್ ಪಿಕ್ ನಲ್ಲಿ ಕೇಕಿನೊಳಗೆ ಚುಚ್ಚಿ ತೆಗೆದರೆ ಮಿಶ್ರಣ ಅಂಟಬಾರದು-ಅಲ್ಲಿಗೆ, ಕೇಕ್ ಸಂಪೂರ್ಣವಾಗಿ ಬೆಂದಿರುತ್ತದೆ. ಉರಿ ಆರಿಸಿ ಕೇಕ್ ಪಾನ್ ಕೆಳಗಿರಿಸಿ ತಣಿಸಿ ನಂತರ ಬೇರೊಂದು ತಟ್ಟೆಗೆ ವರ್ಗಾಯಿಸಿ. ಮಿಲ್ಕ್ ಕೇಕ್ ಸವಿಯಲು ರೆಡಿ.

ಚಿಲ್ಡ್ ಬ್ರೆಡ್ ಮಲೈ

ಚಿಲ್ಡ್ ಬ್ರೆಡ್ ಮಲೈ

ಚಿಲ್ಡ್ ಬ್ರೆಡ್ ಮಲೈ

ಬೇಕಾಗುವ ಸಾಮಗ್ರಿ: ಬ್ರೆಡ್ 4 ಹೋಳು, ಹಾಲು 1 ಕಪ್, ಕಂಡೆನ್ಸ್ಡ್ ಮಿಲ್ಕ್ ಎರಡು ಚಮಚ, ಕತ್ತರಿಸಿದ ಒಣದ್ರಾಕ್ಷಿ,ಗೋಡಂಬಿ,ಪಿಸ್ತಾ,ಬಾದಾಮಿ ತುಂಡುಗಳು 10-15.

ಮಾಡುವ ವಿಧಾನ: ಬ್ರೆಡ್ ಹೋಳುಗಳ ಕಂದುಬಣ್ಣದ ಅಂಚು ತೆಗೆದು ತ್ರಿಕೋನಾಕಾರಕ್ಕೆ ಕತ್ತರಿಸಿ ತುಪ್ಪದಲ್ಲಿ ಹಗುರವಾಗಿ ರೋಸ್ಟ್ ಮಾಡಿಟ್ಟುಕೊಳ್ಳಿ. ಮತ್ತೊಂದು ಪಾತ್ರೆಗೆ ಉಗುರುಬೆಚ್ಚಗಿನ ಹಾಲಿಗೆ ಕಂಡೆನ್ಸ್ಡ್ ಮಿಲ್ಕ್, ಒಣಹಣ್ಣುಗಳನ್ನು ಸೇರಿಸಿ ಮಲೈ ರೆಡಿಮಾಡಿ ಫ್ರಿಜ್ ನಲ್ಲಿ ತಂಪಾಗಿಸಿ. ಬೇಕೆನಿಸಿದಾಗ ಸರ್ವಿಂಗ್ ಬೌಲ್ ನಲ್ಲಿ ರೋಸ್ಟ್ ಮಾಡಿದ ಬ್ರೆಡ್ ಹೋಳುಗಳ ಮೇಲೆ ತಂಪಾದ ಮಲೈ ಮಿಶ್ರಣ ಹಾಕಿ ಸವಿಯಿರಿ.

ಬ್ರೆಡ್ ಫ್ರೈಡ್ ರೈಸ್

Actions Imageಬ್ರೆಡ್ ಫ್ರೈಡ್ ರೈಸ್

Actions Image

ಬ್ರೆಡ್ ಫ್ರೈಡ್ ರೈಸ್

ಬೇಕಾಗುವ ಸಾಮಗ್ರಿ: ಉದುರುದುರು ಅನ್ನ 1 ಕಪ್,ಸಣ್ಣದಾಗಿ ಕತ್ತರಿಸಿದ ಈರುಳ್ಳಿ, ಕಾಪ್ಸಿಕಮ್ 1/4 ಕಪ್, ಒಣದ್ರಾಕ್ಷಿ 8-10, ಬ್ರೆಡ್ ಹೋಳು 1, ಹಸಿರುಮೆಣಸಿನಕಾಯಿ ಒಂದು,ಚಿಟಿಕಿ ದಾಲ್ಚಿನಿ ಪುಡಿ, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಬ್ರೆಡ್ ಹೋಳಿನ ಅಂಚು ತೆಗೆದು ತುಪ್ಪ ಸವರಿ ತವಾ ಮೇಲೆ ಮೈಲ್ಡ್ ರೋಸ್ಟ್ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ, ಕಾಪ್ಸಿಕಮ್,ಸೀಳಿದ ಹಸಿರುಮೆಣಸಿನಕಾಯಿ, ದಾಲ್ಚಿನಿ ಪುಡಿ,ಉಪ್ಪುಹಾಕಿ ಚೆನ್ನಾಗಿ ಬಾಡಿಸಿ ಉರಿ ಆರಿಸಿ, ರೋಸ್ಟೆಡ್ ಬ್ರೆಡ್ಡನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಒಣದ್ರಾಕ್ಷಿಯೊಂದಿಗೆ ಸೇರಿಸಿ ಮಿಶ್ರಣ ಮಾಡಿ, ಬಿಸಿ ಅನ್ನವನ್ನು ಹರಡಿ ಮೇಲೆ ಒಂದು ಚಮಚ ತುಪ್ಪ ಹಾಕಿ ಹದವಾಗಿ ಬೆರೆಯುವಂತೆ ಮೃದುವಾಗಿ ಕೈಯಾಡಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT