ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರುದೋಸೆಗೂ ಬೇಕು ಮರುವಯ್‌ ಸುಕ್ಕ

Last Updated 13 ಜುಲೈ 2019, 10:49 IST
ಅಕ್ಷರ ಗಾತ್ರ

ಕುಂದಾಪುರ ಚಿಕನ್‌

ಬೇಕಾಗುವ ಸಾಮಗ್ರಿಗಳು:ತೊಳೆದಿಟ್ಟ ಚಿಕನ್ – 1 ಕೆ.ಜಿ., ಒಣಮೆಣಸು – 8 ರಿಂದ 10, ಕಾಳುಮೆಣಸು – ಸ್ವಲ್ಪ, ಕೊತ್ತಂಬರಿ – ಅರ್ಧ ಕಪ್, ಜೀರಿಗೆ – 1–2 ಚಮಚ, ಮೆಂತ್ಯ – 1 ರಿಂದ 2 ಚಮಚ, ಅರಿಸಿನ – ಸ್ವಲ್ಪ, ಬೆಳುಳ್ಳಿ – ಎಸಳು 10–12, ಗರಂ ಮಸಾಲ, ಎಣ್ಣೆ – 2 ಕಪ್, ಹುಣಸೆ – 1 ಉಂಡೆ(ಸಣ್ಣದು), ಕರಿಬೇವು – ಸ್ವಲ್ಪ, ಕಾಯಿ ತುರಿ 2–3 ಕಪ್, ಹೆಚ್ಚಿದ ಈರುಳ್ಳಿ – 1 ಕಪ್, ಹೆಚ್ಚಿದ ಟೊಮೆಟೊ – 1 ಕಪ್, ಕೊತ್ತಂಬರಿ ಸೊಪ್ಪು, ಹಸಿಮೆಣಸು ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ:ಮೊದಲಿಗೆ ಬಾಣಲೆಗೆ 10 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಮೆಂತ್ಯ ಸೇರಿಸಿ. ನಂತರ ಒಣಮೆಣಸು, ಕೊತ್ತಂಬರಿ ಬೀಜ, ಕಾಳುಮೆಣಸು, ಕರಿಬೇವು, ಜೀರಿಗೆ, ಅರಿಸಿನ, ಗರಂ ಮಸಾಲಾ, ಕಾಯಿ ತುರಿ ಹಾಕಿ ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಮಿಕ್ಸಿಯ ಜಾರಿಗೆ ಹುರಿದಿಟ್ಟ ಸಾಮಗ್ರಿಗಳೊಂದಿಗೆ ಹುಣಸೆರಸ ಬೆರೆಸಿಕೊಂಡು ನೀರು ಬೆರಸದೆ ರುಬ್ಬಿಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಶುಂಠಿ ಬೆಳ್ಳುಳಿ ಪೇಸ್ಟ್ , ಹಸಿಮೆಣಸನ್ನು ಕಂದು ಬಣ್ಣ ಬರುವವರೆಗೂ ಹುರಿಯಿರಿ. ಅದಕ್ಕೆ ಚಿಕನ್ ಹಾಕಿ ಅರಿಸಿನ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಈ ಮೊದಲೇ ತಯಾರಿಸಿದ ಮಸಾಲೆಯನ್ನು ಸೇರಿಸಿ ಅರ್ಧಗಂಟೆ ಕುದಿಸಿ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರ ಕುಂದಾಪುರ ಚಿಕನ್ ಸವಿಯಲು ರೆಡಿ. ಅನ್ನ, ಪರೋಟಾ, ಚಪಾತಿ, ಜೀರಾ ರೈಸ್‌ ಜೊತೆಗೆ ಕುಂದಾಪುರ ಚಿಕನ್ ಸವಿಯಬಹುದು.

ಗ್ರೀನ್ ಸ್ಟೀವ್

ಬೇಕಾಗುವ ಸಾಮಗ್ರಿಗಳು:ಚಿಕನ್ – 1 ಕೆ.ಜಿ., ತೆಂಗಿನ ತುರಿ – 3 ಕಪ್, ಅರಿಸಿನ – 1 ಚಮಚ, ಕೊತ್ತಂಬರಿ ಬೀಜ – 1 ಸಣ್ಣ ಕಪ್, ಕಾಳು ಮೆಣಸು – ಸ್ವಲ್ಪ, ಹುಳಿಗೆ ಸ್ವಲ್ಪ ವಿನೆಗರ್ ಅಥವಾ ಹುಣಸೆರಸ, ಲವಂಗ– 6, ಏಲಕ್ಕಿ – 2, ಹೆಚ್ಚಿದ ಹಸಿಮೆಣಸು – 1 ಕಪ್, ಟೊಮೆಟೊ – 1 ಕಪ್, ಈರುಳ್ಳಿ – 1 ಕಪ್, ಕೊತ್ತಂಬರಿ ಸೊಪ್ಪು –1 ಕಪ್, ಎಣ್ಣೆ 1–2 ಕಪ್, ಶುಂಠಿ– ಬೆಳ್ಳುಳ್ಳಿ ಪೇಸ್ಟ್ – 3–4 ಚಮಚ, ಬೆಳ್ಳುಳ್ಳಿ – 1 ಎಸಳು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲಿಗೆ ಕಾಯಿ ತುರಿಯೊಂದಿಗೆ ಲವಂಗ, ಏಲಕ್ಕಿ, ಕೊತ್ತಂಬರಿ ಬೀಜ, ಕಾಳುಮೆಣಸು, ಬೆಳುಳ್ಳಿ ಹಾಕಿ ನೀರನ್ನು ಬೆರೆಸಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ. ನಂತರ ಜರಡಿ ಹಾಕಿ ಮಿಕ್ಸಿ ಜಾರ್‌ಗೆ ಹಿಂಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಚಿಕನ್ ಮತ್ತು ನೀರನ್ನು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಈ ಮೊದಲೇ ತಯಾರಿಸಿದ ಕಾಯಿಹಾಲು ಮತ್ತು ನೆನೆಸಿಟ್ಟ ಹುಳಿ ಅಥವಾ ವಿನೆಗರ್(ಸ್ವಲ್ಪ), 1 ಚಿಟಿಕೆ ಅರಿಸಿನ ಹಾಕಿ ಅರ್ಧ ಗಂಟೆ ಕುದಿಸಿ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು ಮೇಲಕ್ಕೆ ಗ್ರೀನ್ ಸ್ಟೀವ್ ಸವಿಯಲು ಸಿದ್ದ. ಇದನ್ನು ಘೀ ರೈಸ್, ಚಪಾತಿಯೊಂದಿಗೆ ಸವಿಯಬಹುದು.

ಮರುವಯ್‌ ಸುಕ್ಕ
( ಚಿಪ್ಪು ಮೀನು)

ಬೇಕಾಗುವ ಸಾಮಗ್ರಿಗಳು:ಮರುವಯ್‌ – ಅರ್ಧ ಕೆ.ಜಿ., ಸಾಸಿವೆ – 1–2 ಚಮಚ, ಕರಿಬೇವು – 6, ಮೆಂತ್ಯ – 2 ಚಮಚ, ಒಣ ಮೆಣಸು –8–10 , ಕಾಳು ಮೆಣಸು – ಸ್ವಲ್ಪ, ತೆಂಗಿನ ತುರಿ – 3 ಕಪ್, ಬೆಳುಳ್ಳಿ – 1–2 ಎಸಳು, ಹೆಚ್ಚಿದ ಈರುಳ್ಳಿ – 1–2 ಕಪ್, ಟೊಮೆಟೊ – 1 ಕಪ್, ಹುಣಸೆಹುಳಿ – 1 ಉಂಡೆ, ಶುಂಠಿ – ಸ್ವಲ್ಪ, ಹಸಿಮೆಣಸು 5–6, ಕೊತ್ತಂಬರಿ ಸೊಪ್ಪು – 1ಕಪ್, ಅರಿಸಿನ – 1–2 ಚಮಚ, ಎಣ್ಣೆ – 1–2 ಕಪ್, ಶುಂಠಿ ಬೆಳ್ಳುಳಿ ಪೇಸ್ಟ್ – 3–4 ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲು ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ ಅದಕ್ಕೆ ಮೆಂತ್ಯ, ಕರಿಬೇವು, ಬೆಳುಳ್ಳಿ, ಒಣಮೆಣಸು, ಕಾಳುಮೆಣಸು, ಅರಿಸಿನ, ಕೊತ್ತಂಬರಿ ಬೀಜ, ಹುಳಿ, ಕಾಯಿ ತುರಿ ಹಾಕಿ ಚೆನ್ನಾಗಿ ಹುರಿಯಿರಿ. ಅದನ್ನು ಮಿಕ್ಸಿಗೆ ಹಾಕಿ (ನೀರನ್ನು ಸೇರಿಸಬಾರದು) ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ 4–5 ಚಮಚ ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ, ಕರಿಬೇವು, ಜಜ್ಜಿದ ಬೆಳುಳ್ಳಿ, ಹಸಿಮೆಣಸು, ಶುಂಠಿ, ಈರುಳ್ಳಿ, ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವಂತೆ ಹುರಿಯಿರಿ. ಅದಕ್ಕೆ ಮರುವಯ್‌ ಹಾಕಿ, ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಸ್ವಲ್ಪ ಕಾಲ ಬೇಯಿಸಿದ ಬಳಿಕ ಪುಡಿ ಮಾಡಿದ ಮಸಾಲೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಗುಚಿ ಅರ್ಧ ಗಂಟೆ ಬೇಯಲು ಬಿಟ್ಟರೆ ಮರುವಯ್‌ ಸುಕ್ಕ ರೆಡಿ. ಮರುವಯ್‌ ಸುಕ್ಕವನ್ನು ಅನ್ನ, ಚಪಾತಿ ಮತ್ತು ಪರೋಟಾದೊಂದಿಗೆ ಸವಿಯಬಹುದು.

ಬಂಗುಡೆ ಮಸಾಲಾ ಫ್ರೈ

ಬೇಕಾಗುವ ಸಾಮಗ್ರಿಗಳು:ಬಂಗುಡೆ ಮೀನು – 2, ಎಣ್ಣೆ – 2ಕಪ್, ಅರಿಸಿನ – 1 ಸಣ್ಣ ಚಮಚ, ಅಚ್ಚ ಖಾರದ ಪುಡಿ – 3–4 ಚಮಚ, ವಿನೆಗರ್ ಅಥವಾ ಲಿಂಬೆ ಹುಳಿ – ಸ್ವಲ್ಪ, ಸಾಸಿವೆ – 2 ಚಮಚ, ಶುಂಠಿ ಬೆಳುಳ್ಳಿ – ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಮೊದಲು ರೆಡಿ ಮಾಡಿಟ್ಟ ಮೀನಿಗೆ ಶುಂಠಿ ಬೆಳುಳ್ಳಿ ಪೇಸ್ಟ್, ಲಿಂಬೆ ರಸ ಅಥವಾ ವಿನೆಗರ್, ಅರಿಸಿನ ಮತ್ತು ಉಪ್ಪು ಹಾಕಿ ಅರ್ಧ ಗಂಟೆ ಬಿಡಿ. ನಂತರ ಅದನ್ನು 4–5 ಚಮಚ ಎಣ್ಣೆಯಲ್ಲಿ ಹುರಿದು ಬದಿಗಿಟ್ಟುಕೊಳ್ಳಿ. ಪ್ಯಾನಿಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಖಾರದ ಪುಡಿ, ಚಿಟಿಕೆ ಅರಿಸಿನ, ಶುಂಠಿ ಬೆಳುಳ್ಳಿ ಪೇಸ್ಟ್ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಸ್ವಲ್ಪ ಕುದಿಸಿ. ನಂತರ ಹುರಿದ ಮೀನಿಗೆ ಈ ಮಸಾಲಾ ಮೆತ್ತಿ ಸ್ವಲ್ಪ ಎಣ್ಣೆಗೆ 3 ನಿಮಿಷ ಹುರಿದರೆ ರುಚಿಯಾದ ಮಸಾಲಾ ಫ್ರೈ ಸವಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT