ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಸ್ಪೆಷಲ್‌ ಪ್ರೂಟ್ಸ್‌ ಕೇಕ್‌

Last Updated 16 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌– ಹೊಸ ವರ್ಷಾಚರಣೆ ಸಂಭ್ರಮಕ್ಕೆ ಜೊತೆಯಾಗುವ ತಿನಿಸೆಂದರೆ ಅದು ಕೇಕ್‌. ಈಗ ತರಹೇವಾರಿ ಕೇಕ್‌ಗಳ ತಯಾರಿಗೆ ಸಿದ್ಧತೆ ನಡೆಯುತ್ತಿರುತ್ತದೆ. ಕೆಲವರಂತೂ ಪ್ರತಿ ವರ್ಷ ಹೊಸ ನಮೂನೆಯ ಕೇಕ್‌ಗಳನ್ನು ತಯಾರಿಸಲು ರೆಸಿಪಿಗಳಿಗಾಗಿ ಹುಡುಕಾಡುತ್ತಾರೆ. ಅಂಥ ಕೇಕ್‌ ಪ್ರಿಯರಿಗಾಗಿ ವಿವಿಧ ರೀತಿಯ ಫ್ರೂಟ್‌ ಕೇಕ್‌ಗಳ ರೆಸಿಪಿಗಳನ್ನು ಪರಿಚಯಿಸಿದ್ದಾರೆ ಕೆ.ವಿ.ರಾಜಲಕ್ಷ್ಮಿ.

ಡ್ರೈಫ್ರೂಟ್ಸ್ ಕೇಕ್

ಬೇಕಾಗುವ ಸಾಮಗ್ರಿ

ಸಣ್ಣ ರವೆ 1ಕಪ್, ಬೆಲ್ಲ 1 ಕಪ್, ಹಾಲು ಅರ್ಧ ಕಪ್‌, ಮೊಸರು ಕಾಲು ಕಪ್‌, ಅರ್ಧ ಕಪ್‌ ಅಡುಗೆ ಎಣ್ಣೆ, ಅಡುಗೆ ಸೋಡಾ ಒಂದು ಚಮಚ, ಸಣ್ಣಗೆ ಕತ್ತರಿಸಿದ ಒಣ ಹಣ್ಣುಗಳು (ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಇತ್ಯಾದಿ) ಕಾಲು ಕಪ್‌.

ಮಾಡುವ ವಿಧಾನ:ರವೆ, ಬೆಲ್ಲ, ಹಾಲು, ಮೊಸರು, ಅಡುಗೆ ಎಣ್ಣೆ, ಅಡುಗೆ ಸೋಡಾ ಎಲ್ಲವನ್ನೂ ಮಿಕ್ಸಿಯಲ್ಲಿ ರುಬ್ಬಿಕೊಂಡು, ಆ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ. ಒಣಹಣ್ಣುಗಳಲ್ಲಿ ಅರ್ಧದಷ್ಟನ್ನು ಈ ಮಿಶ್ರಣಕ್ಕೆ ಸೇರಿಸಿ, ತಟ್ಟೆ ಮುಚ್ಚಿಡಿ. ಒಲೆಯ ಮೇಲೆ ದಪ್ಪ ಕಡಾಯಿ ಇಟ್ಟು ಕೇಕ್ ಸ್ಟಾಂಡ್ ಅಥವಾ ಕುಕಿಂಗ್ ಪಾಟ್ ಸ್ಟಾಂಡ್ ಇಟ್ಟು ಕಡಾಯಿ ಮುಚ್ಚಿ. ಸಣ್ಣ ಉರಿಯಲ್ಲಿ ಪ್ರೀ ಹೀಟ್ ಮಾಡಿ. ನಂತರ ಕೇಕ್ ಪ್ಯಾನ್ ಒಳಗೆ ಎಣ್ಣೆ ಸವರಿ

ಬಟರ್ ಪೇಪರ್ ಇಟ್ಟು ಸ್ವಲ್ಪ ಜಿಡ್ಡು ಕಾಣಿಸಿ. ನಂತರ ಕೇಕ್ ಮಿಶ್ರಣವನ್ನು ಸುರಿದು, ಸಮವಾಗಿ ಹರಡಿಸಿ ಕಡಾಯಿಯಲ್ಲಿಟ್ಟು ಸಣ್ಣ ಉರಿಯಲ್ಲೇ ಬೇಯಲು ಬಿಡಿ. 20 ರಿಂದ 25 ನಿಮಿಷಗಳ ನಂತರ ಉಳಿದ ಒಣ ಹಣ್ಣುಗಳನ್ನು ಕೇಕ್ ಮೇಲೆ ಹರಡಿ. 15 ರಿಂದ 20 ನಿಮಿಷ ಅದೇ ಉರಿಯಲ್ಲಿ ಬೇಯಿಸಿ. ಫ್ರೂಟ್ ಪಿಕ್‌ನಲ್ಲಿ ಕೇಕಿನೊಳಗೆ ಚುಚ್ಚಿ ತೆಗೆದರೆ ಮಿಶ್ರಣ ಅಂಟುವುದಿಲ್ಲ ಎಂದರೆ ಕೇಕ್ ಸಿದ್ಧವಾಗಿದೆ ಎಂದು ಅರ್ಥ. ಸ್ಟವ್‌ ಆರಿಸಿ. ಕೇಕ್ ಪಾನ್ ಕೆಳಗಿರಿಸಿ. ತಣ್ಣಗಾದ ನಂತರ ಕತ್ತರಿಸಿ ಸವಿಯಬಹುದು.

**

ಡೇಟ್ಸ್ ಫಡ್ಜ್

ಬೇಕಾಗುವ ಸಾಮಗ್ರಿ: ಗೋಧಿ ಹಿಟ್ಟು ಕಾಲು ಕಪ್‌, ಚಿರೋಟಿರವೆ ಕಾಲು ಕಪ್‌, ಬೆಲ್ಲ ಅರ್ಧ ಕಪ್‌, ಶುಂಠಿ ಪುಡಿ ಅರ್ಧ ಚಮಚ, ಬೀಜರಹಿತ ಮೃದುವಾದ ಖರ್ಜೂರ 8 ರಿಂದ 10, ಚಿಟಿಕಿ ಉಪ್ಪು.

ಮಾಡುವ ವಿಧಾನ: ಗೋಧಿ ಹಿಟ್ಟು ಮತ್ತು ಚಿರೋಟಿರವೆಯನ್ನು ಸ್ವಲ್ಪ ತುಪ್ಪದೊಂದಿಗೆ ಬಿಡಿಬಿಡಿಯಾಗಿ ಹುರಿದುಕೊಳ್ಳಿ. ನಂತರ ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ. ಅದು ಕರಗುವಾಗ ಹುರಿದ ಗೋಧಿ ಹಿಟ್ಟು ರವೆ, ಉಪ್ಪು, ಶುಂಠಿ ಪುಡಿಯನ್ನು ಹಾಕಿ ಐದು ನಿಮಿಷ ಮಗುಚಿ. ಲೇಹ್ಯದ ಹದ ಬಂದಾಗ ಮಿಕ್ಸಿಂಗ್ ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ರುಬ್ಬಿಕೊಂಡ ಖರ್ಜೂರದ ಪೇಸ್ಟ್ ಸೇರಿಸಿ ಚೆನ್ನಾಗಿ ನಾದಿ, ಬೇಕಾದ ಆಕಾರಕ್ಕೆ ಕತ್ತರಿಸಿ. ಈಗ ಟೇಟ್ಸ್‌ ಫಡ್ಜ್‌ ರೆಡಿಯಾಯ್ತು.

**

ಚಾಕೊ ಫ್ರೂಟೀಸ್

ಬೇಕಾಗುವ ಸಾಮಗ್ರಿ:ಹುರಿಗಡಲೆ 1 ಕಪ್, ಮಿಲ್ಕ್ ಪೌಡರ್ ಅರ್ಧ ಕಪ್, ಬೆಲ್ಲ ಒಂದೂವರೆ ಕಪ್,ಗಸಗಸೆ ೧ ಚಮಚ, ಸಣ್ಣಗೆ ಕತ್ತರಿಸಿದ ದ್ರಾಕ್ಷಿ,ಗೋಡಂಬಿ,ಬಾದಾಮಿ,ಪಿಸ್ತಾ,ಖರ್ಜೂರ ಕಾಲು ಕಪ್, ಚಾಕೋಲೇಟ್ ಪೌಡರ್ 1 ಚಮಚ, ತುಪ್ಪ ಕಾಲು ಕಪ್.

ಮಾಡುವ ವಿಧಾನ:ಗಸಗಸೆಯನ್ನು ಜಿಡ್ಡು ಸೋಕಿಸದೆ ಹುರಿದು, ಹುರಿಗಡಲೆ, ಮಿಲ್ಕ್ ಪೌಡರ್ ನೊಂದಿಗೆ ಪುಡಿಮಾಡಿಕೊಳ್ಳಿ. ಹಿಂದೆಯೇ ಒಣ ಹಣ್ಣುಗಳನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಅರೆದುಕೊಳ್ಳಿ. ಬಾಣಲಿಯಲ್ಲಿ ಸ್ವಲ್ಪ ತುಪ್ಪ ಬಿಸಿಮಾಡಿ ಬೆಲ್ಲವನ್ನು ಕರಗಿ ನೊರೆನೊರೆಯಾಗುವಾಗ, ಚಾಕೊಲೇಟ್‌ ಪೌಡರ್, ಮತ್ತು ಅರೆದಿಟ್ಟು ಕೊಂಡ ಪುಡಿಗಳನ್ನು ಸೇರಿಸಿ ಚೆನ್ನಾಗಿ ಮಗುಚಿ, ಮಿಶ್ರಣ ಮೃದುವಾಗಿ ಬಾಣಲಿ ಬಿಡುವಾಗ ಒಂದು ತಟ್ಟೆಗೆ ವರ್ಗಾಯಿಸಿ. ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಬೇಕಾದ ಆಕಾರಕ್ಕೆ ಮೌಲ್ಡ್ ಗಳಿಗೆ ತುಂಬಿ ತೆಗೆದಿರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT