ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಸಸ್ವಾದ: ಹಾಲಿನಿಂದ ಸ್ವಾದಿಷ್ಟ ತಿನಿಸುಗಳು

Published 17 ಮೇ 2024, 23:30 IST
Last Updated 17 ಮೇ 2024, 23:30 IST
ಅಕ್ಷರ ಗಾತ್ರ
ಹಾಲಿನಿಂದ ತಯಾರಿಸಬಹದಾದ ತಿನಿಸುಗಳ ರೆಸಿಪಿ ನೀಡಿದ್ದಾರೆ ವೇದಾವತಿ ಎಚ್. ಎಸ್.

ಶಾಹಿ ತುಕ್ಡಾ.
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಒಂದು ಪ್ಯಾಕ್, ತುಪ್ಪ 4 ಟೇಬಲ್ ಚಮಚ. ರಬ್ಡಿ ತಯಾರಿಸಲು: ಹಾಲು 1 ಲೀಟರ್, ಹಾಲಿನ ಪುಡಿ 1/4 ಕಪ್, ಕಂಡೆನ್ಸ್ದ್ ಮಿಲ್ಕ್ 200 ಗ್ರಾಂ, ಏಲಕ್ಕಿ ಪುಡಿ 1/4 ಟೀ ಚಮಚ, ಕೇಸರಿದಳಗಳು ಸ್ವಲ್ಪ, ಪಿಸ್ತಾ ಸ್ವಲ್ಪ. ಸಕ್ಕರೆ ಪಾಕ: 1/2 ಕಪ್ ಸಕ್ಕರೆ, 1/2 ಕಪ್ ನೀರು, ಸ್ವಲ್ಪ ಕೇಸರಿ ದಳಗಳು.

ತಯಾರಿಸುವ ವಿಧಾನ: ಬ್ರೆಡ್ ಅನ್ನು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಬ್ರೆಡಿನ ಬಿಳಿಯ ಭಾಗ ಮಾತ್ರವಿರಲಿ. ಈ ಬ್ರೆಡ್ ಅನ್ನು ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಕೆಂಬಣ್ಣ ಬರುವರೆಗೆ ಟೋಸ್ಟ್ ಮಾಡಿ. ಸಕ್ಕರೆಯನ್ನು ಎಳೆ ಪಾಕ ಮಾಡಿಕೊಳ್ಳಿ. ಕೇಸರಿ ದಳಗಳನ್ನು ಸಕ್ಕರೆ ಪಾಕಕ್ಕೆ ಸೇರಿಸಿ. ಬಾಣಲೆಯಲ್ಲಿ ಹಾಲನ್ನು ಹಾಕಿ ಕುದಿಸುತ್ತಾ ಹೋಗಿ. ಆಗ ಹಾಲು ಬಾಣಲೆಯ ಸುತ್ತಲೂ ಕೆನೆ ಕಟ್ಟಲು ಪ್ರಾರಂಭವಾಗುತ್ತದೆ. ಸ್ವಲ್ಪ ಕೇಸರಿದಳಗಳನ್ನು ಕುದಿಯುತ್ತಿರುವ ಹಾಲಿಗೆ ಸೇರಿಸಿ. ಹಾಲು ದಪ್ಪವಾಗಿ ಗಟ್ಟಿಯಾಗುತ್ತ ಬರುವಾಗ ಹಾಲಿನ ಪುಡಿಗೆ ಸ್ವಲ್ಪ ಬಿಸಿ ಹಾಲನ್ನು ಸೇರಿಸಿ ಪೇಸ್ಟ್ ಮಾಡಿ ಗಂಟಾಗದ ರೀತಿಯಲ್ಲಿ ಮಿಶ್ರಣ ಮಾಡಿ. ಪುನಃ ಕುದಿಸಿ. ಈಗ ಕಂಡೆನ್ಸ್ದ್ ಮಿಲ್ಕ್ ಅನ್ನು ಸೇರಿಸಿ. ಇದು ದಪ್ಪವಾಗಿ ಬರುವಾಗ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ ಒಲೆಯಿಂದ ಇಳಿಸಿ. ಈಗ ರಬ್ಡಿ ರೆಡಿ. ಈ ರಬ್ಡಿಯನ್ನು ಸ್ವಲ್ಪ ಸಮಯ ತಯಾರಿಸಿದ ಫ್ರೀಜ್ಜ್ನಲ್ಲಿ ತಣ್ಣಗಾಗಲು ಬಿಡಿ. ಬ್ರೆಡ್‌ಅನ್ನು ಸಕ್ಕರೆ ಪಾಕದಲ್ಲಿ ಅದ್ದಿ ಅದನ್ನು ಒಂದು ತಟ್ಟೆಯಲ್ಲಿ ಇಡಿ. ನಂತರ ಒಂದು ಪ್ಲೇಟ್‌ನಲ್ಲಿ ತಯಾರಿಸಿದ ರಬ್ಡಿಯನ್ನು ಬ್ರೆಡ್ ಮೇಲೆ ಹಾಕಿ. ಅಲಂಕಾರ ಮಾಡಲು ಪಿಸ್ತಾವನ್ನು ಅದರ ಮೇಲೆ ಹಾಕಿ. ರುಚಿಕರವಾದ ಶಾಹಿ ತುಕ್ಡಾ ತಯಾರಿಸಿ ಸವಿಯಿರಿ.

ಹಾಲಿನ ಪುಡಿಯ ಉಂಡೆ

ಹಾಲಿನ ಪುಡಿಯ ಉಂಡೆ

ಹಾಲಿನ ಪುಡಿಯ ಉಂಡೆ

ಬೇಕಾಗುವ ಸಾಮಾಗ್ರಿಗಳು: ಹಾಲಿನ ಪುಡಿ 1 ಕಪ್ ಒಣಕೊಬ್ಬರಿ ತುರಿಯ ಬಿಳಿಯ ಭಾಗ ಅಥವಾ ರೆಡಿಮೇಡ್ ಒಣ ಕೊಬ್ಬರಿ ತುರಿ 1/2 ಕಪ್ ಸಕ್ಕರೆ 1/4 ಕಪ್ ತಣ್ಣನೆಯ ಹಾಲು 1/4 ಕಪ್ ಏಲಕ್ಕಿ ಪುಡಿ 1/4 ಟೀ ಚಮಚ ತುಪ್ಪ 2 ಚಮಚ.ತಯಾರಿಸುವ ವಿಧಾನ:ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಹಾಲು ಮತ್ತು ಹಾಲಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಸಣ್ಣ ಉರಿಯಲ್ಲಿ ಒಲೆಯ ಮೇಲಿಟ್ಟು ಗಂಟ್ಟಾಗದ ರೀತಿಯಲ್ಲಿ ಕೈಯಾಡಿಸುತ್ತಾ ಇರಿ. ಒಂದು ನಿಮಿಷಕ್ಕೆ ಮಿಶ್ರಣವು ಗಟ್ಟಿಯಾಗುತ್ತದೆ. ಆಗ ಸಕ್ಕರೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿ ಅದರಲ್ಲಿ ಸೇರಿಸಿ. ಪುಡಿ ಮಾಡಿ ಹಾಕುವುದರಿಂದ ಬೇಗ ಕರಗುತ್ತದೆ. ಸಕ್ಕರೆ ಕರಗಿ ಪಾಕ ಬರುತ್ತದೆ. ಹೀಗಾಗಲು ಒಂದು ನಿಮಿಷ ಸಾಕು. ನಂತರ ಒಣ ಕೊಬ್ಬರಿ ತುರಿಯನ್ನು ಸೇರಿಸಿ. ಒಂದು ನಿಮಿಷ ಮಿಶ್ರಣ ಮಾಡಿ. ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈಗ ಮುಟ್ಟಿದರೆ ಕೈಗೆ ಅಂಟುವುದಿಲ್ಲ. ನಂತರ ಒಲೆಯಿಂದ ಇಳಿಸಿ. ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಗಳನ್ನು ಮಾಡಿ ಕೊಬ್ಬರಿ ತುರಿಯಲ್ಲಿ ಉರುಳಿಸಿ. ರುಚಿಯಾದ ಹಾಲಿನ ಪುಡಿಯ ಉಂಡೆಗಳನ್ನು ತಯಾರಿಸಿ ಸವಿಯಿರಿ.

ಇನ್‌ಸ್ಟೆಂಟ್ ಗಿಣ್ಣು

ಇನ್‌ಸ್ಟೆಂಟ್ ಗಿಣ್ಣು

ಇನ್‌ಸ್ಟೆಂಟ್ ಗಿಣ್ಣು

ಬೇಕಾಗುವ ಸಾಮಾಗ್ರಿಗಳು: ಹಾಲು 2 ಕಪ್ ಹಾಲಿನ ಪುಡಿ 1 ಕಪ್ ಮೊಸರು 2 ಕಪ್ ಕಂಡೆನ್ಸ್ಡ ಮಿಲ್ಕ್ 2 ಕಪ್ ಏಲಕ್ಕಿ ಪುಡಿ 1/2 ಟೀ ಚಮಚ.ತಯಾರಿಸುವ ವಿಧಾನ:ಒಂದು ಪಾತ್ರೆಯಲ್ಲಿ ಹಾಲು ಮತ್ತು ಹಾಲಿನ ಪುಡಿಯನ್ನು ಹಾಕಿ ಗಂಟಿಲ್ಲದAತೆ ಮಿಶ್ರಣ ಮಾಡಿ. ಇವುಗಳ ಜೊತೆಗೆ ಮೊಸರು ಮತ್ತು ಕಂಡೆನ್ಸ್ಡ ಮಿಲ್ಕ್ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಹಬೆ ಮಡಿಕೆಯ ತಳಕ್ಕೆ ನೀರನ್ನು ಹಾಕಿ ಅದರಲ್ಲಿ ಈ ಮಿಶ್ರಣವನ್ನು ಇಟ್ಟು ಒಂದು ತಟ್ಟೆಯನ್ನು ಮುಚ್ಚಿ ಅರ್ಧ ಗಂಟೆ ಬೇಯಿಸಿ. ಬೆಂದ ನಂತರ ರಿಫ್ರೇಜೇಟರ್ ನಲ್ಲಿ ಒಂದು ಗಂಟೆ ಇಟ್ಟು ನಂತರ ಹೊರಗೆ ತೆಗೆದು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ರುಚಿಕರವಾದ ಇನ್‌ಸ್ಟೆಂಟ್ ಗಿಣ್ಣನ್ನು ಮನೆಯಲ್ಲೇ ತಯಾರಿಸಿ ಸವಿಯಿರಿ.

ಮಿಲ್ಕ್ ಕೇಕ್/ ಕಲಾಖಂಡ್

ಮಿಲ್ಕ್ ಕೇಕ್/ ಕಲಾಖಂಡ್

ಮಿಲ್ಕ್ ಕೇಕ್/ ಕಲಾಖಂಡ್

ಬೇಕಾಗುವ ಸಾಮಗ್ರಿಗಳು: ಕೆನೆಭರಿತ ಗಟ್ಟಿಯಾದ ಹಾಲು 3 ಲೀಟರ್ ಒಂದು ಚಿಕ್ಕ ಗಾತ್ರದ ನಿಂಬೆಹಣ್ಣಿನ ರಸ ಅಥವಾ 1/2 ಟೇಬಲ್ ಚಮಚ ನಿಂಬೆರಸ ಸಕ್ಕರೆ 400 ಗ್ರಾಂ ತುಪ್ಪ 80 ಗ್ರಾಂ ಏಲಕ್ಕಿ ಪುಡಿ 1/ 2ಟೀ ಚಮಚ ಪಿಸ್ತಾ ಸ್ವಲ್ಪ.ತಯಾರಿಸುವ ವಿಧಾನ: ಬಾಣಲೆಯಲ್ಲಿ ಹಾಲನ್ನು ಹಾಕಿ ಮಧ್ಯಮ ಉರಿಯಲ್ಲಿ ಕುದಿಸಿ. ಹಾಲು ಅರ್ಧ ಆಗುವರೆಗೆ ಕುದಿಸುತ್ತಾ ಇರಿ. ನಂತರ ನಿಂಬೆರಸ ಸೇರಿಸಿ. ಈಗ ಅದು ಪನ್ನೀರ್ ರೀತಿಯಲ್ಲಿ ತಯಾರಾಗುತ್ತದೆ. ನೀರು ಮತ್ತು ಪನ್ನೀರ್ ಬೇರೆ ಬೇರೆ ಆಗುತ್ತಾ ಬರುವಾಗ ಸ್ವಲ್ಪ ಸ್ವಲ್ಪವೇ ಸಕ್ಕರೆಯನ್ನು ಸೇರಿಸುತ್ತಾ ಬನ್ನಿ. ಚೆನ್ನಾಗಿ ಕೈಯಾಡಿಸುತ್ತಾ ಇರಿ. ಸಕ್ಕರೆ ಕರಗಿ ಪಾಕ ಬರಲು ಪ್ರಾರಂಭವಾದಾಗ ತುಪ್ಪವನ್ನು ಸೇರಿಸಿ. ಮಿಶ್ರಣವು ಗಟ್ಟಿಯಾಗುತ್ತಾ ಬಾಣಲೆಯ ತಳ ಬಿಟ್ಟು ಬರುವಾಗ ತುಪ್ಪ ಸವರಿದ ದುಂಡನೆಯ ಪಾತ್ರೆ ಅಥವಾ ತುಪ್ಪ ಸವರಿದ ತಟ್ಟಗೆ ದಪ್ಪವಾಗಿ ಹಾಕಿ. ಇದು ಗಟ್ಟಿಯಾಗಲು 3 ರಿಂದ 4 ಗಂಟೆಯ ಬೇಕಾಗುತ್ತದೆ. ಗಟ್ಟಿಯಾದ ಬಳಿಕ ಕತ್ತರಿಸಿ ಪಿಸ್ತಾದಿಂದ ಅಲಂಕರಿಸಿ. ಈಗ ಮಿಲ್ಕ್ ಕೇಕ್ ಸವಿಯಲು ಸಿದ್ಧ.

ದಿಡೀರ್ ಸಂದೇಶ್ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಪನ್ನೀರ್ 400 ಗ್ರಾಂ ಸಕ್ಕರೆಯ 250 ಗ್ರಾಂ. (ಪುಡಿ ಮಾಡಿ ಕೊಳ್ಳಿ) ಏಲಕ್ಕಿ ಪುಡಿ 1 ಟೀ ಚಮಚ ಪಿಸ್ತಾ ಚೂರುಗಳು ಸ್ವಲ್ಪ.ತಯಾರಿಸುವ ವಿಧಾನ:ಮೊದಲು ಪನ್ನೀರ್‌ಅನ್ನು ಕೈಯಲ್ಲಿ ಪುಡಿ ಮಾಡಿಕೊಳ್ಳಿ. ನಂತರ ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಪುಡಿ ಮಾಡಿದ ಪನ್ನೀರ್‌ಅನ್ನು ಬಾಣಲೆಯಲ್ಲಿ ಹಾಕಿ. ಪುಡಿ ಮಾಡಿಕೊಂಡ ಸಕ್ಕರೆಯನ್ನು ಪನ್ನಿರ್ ಜೊತೆಗೆ ಸೇರಿಸಿ ಕೈಯಲ್ಲಿ ಎರಡನ್ನೂ ಚೆನ್ನಾಗಿ ಸೇರಿಕೊಳ್ಳುವ ರೀತಿಯಲ್ಲಿ ಮಿಶ್ರಣ ಮಾಡಿ. ನಂತರ ಮಧ್ಯಮ ಉರಿಯಲ್ಲಿ ಮಗುಚಿ. ಏಲಕ್ಕಿ ಪುಡಿಯನ್ನು ಸೇರಿಸಿ. ಈಗ ತಯಾರಿಸಿದ ಪನ್ನೀರ್ ಸಕ್ಕರೆಯೊಂದಿಗೆ ಉಂಡೆ ಪಾಕದ ಹದಕ್ಕೆ ಬಂದಾಗ ಒಲೆಯಿಂದ ಇಳಿಸಿ ಒಂದು ತಟ್ಟೆಯಲ್ಲಿ ಹಾಕಿ. ಇದು ಸ್ವಲ್ಪ ತಣ್ಣಗಾದ ನಂತರ ನಿಮಗೆ ಬೇಕಾದ ಗಾತ್ರದಲ್ಲಿ ಉಂಡೆಗಳನ್ನು ಮಾಡಿಕೊಳ್ಳಿ. ನಂತರ ಉಂಡೆಗಳನ್ನು ಬೆರಳಿನಿಂದ ಸ್ವಲ್ಪ ಒತ್ತಿ ಅದರ ಮೇಲೆ ಪಿಸ್ತಾ ಚೂರುಗಳಿಂದ ಅಲಂಕರಿಸಿ. ರುಚಿಕರವಾದ ಬೆಂಗಾಲಿ ಸಿಹಿ ತಿಂಡಿ ಸಂದೇಶ್ ತಯಾರಿಸಿ ಸವಿಯಿರಿ ತಯಾರಿಸಿ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT