ಬಲು ಅಪರೂಪ ಇವ್ರ್ ಜೋಡಿ... ಎಂಥ ಟೈಮಲ್ಲೂ ತಿನ್ನೋಕೆ ರೆಡಿ
ಇತ್ತ ಕಡೆಯಿಂದ ಮೃದುವಾದ ಆಲೂ ಪಲ್ಯ... ಅತ್ತ ಕಡೆಯಿಂದ ಗರಿ ಗರಿ ದೋಸೆ...
ಇವೆರಡು ಕೂಡಿ... ಮಾಡುವುದು ಸಕತ್ ಮೋಡಿ.
ರುಚಿಗೆ ಸರಿ ಸಾಟಿ ಇಲ್ಲ... ಎಲ್ಲರಿಗೂ ಇಷ್ಟ ಅನ್ನೋದರಲ್ಲಿ ಸಂದೇಹನೆ ಇಲ್ಲ. ಮಾಡೋದು ಕಷ್ಟ ಅಲ್ಲ.. ಮಾಡಿದ್ ಮೇಲೆ ಉಳಿಯೋದೂ ಇಲ್ಲ. ಸೂತ್ರಧಾರಿ ಹಾಗೂ ಪಾತ್ರಧಾರಿ–ನಮ್ಮ ನಿಮ್ಮ ಸಿಹಿ ಕಹಿ ಚಂದ್ರು ಗರಿ ಗರಿಯಾಗಿ ಈ ಮಸಾಲ ದೋಸೆ ಮಾಡೋದನ್ನ ನೋಡಿರಿ ಕಲಿಯಿರಿ ಸವಿಯಿರಿ