ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಗೂನುಬೆನ್ನು ನಿವಾರಣೆಗೆ ಆಸನಗಳು

ಯೋಗಾ ಯೋಗ
Last Updated 19 ಜೂನ್ 2019, 16:44 IST
ಅಕ್ಷರ ಗಾತ್ರ

‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ನುಡಿಯಂತೆ ಮಕ್ಕಳ ಬಾಲ್ಯದ ದಿನಗಳನ್ನು ನಿರ್ಲಕ್ಷ್ಯ ತೋರದೆ ಕಾಳಜಿ ವಹಿಸಬೇಕು. ಮಕ್ಕಳ ಬೆಳವಣಿಗೆ ಹಂತದಲ್ಲಿ ಅವರು ಕತ್ತು ಬಗ್ಗಿಸಿ ಭುಜದ ಡುಬ್ಬ ಮೇಲ್ಮಾಡಿ ನಡೆಯುವುದು, ನಿಲ್ಲುವುದು ಮತ್ತು ಕುಳಿತುಕೊಳ್ಳುವ ರೀತಿ, ಹೆಚ್ಚು ಭಾರವಾಗದ ಪುಸ್ತಕದ ಚೀಲ(ಸ್ಕೂಲ್‌ ಬ್ಯಾಗ್‌) ಗಳನ್ನು ಹೊರುವುದು ಗೂನುಬೆನ್ನು ಉಂಟಾಗಲು ಪ್ರಮುಖ ಕಾರಣ.

ಆಟೋಟ ಹಾಗೂ ಇತರ ಕ್ರಿಯಾತ್ಮಕ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದ ಮಕ್ಕಳಲ್ಲಿ ಗೂನುಬೆನ್ನು ಕಾಣಿಸಿಕೊಳ್ಳುತ್ತದೆ. ವಂಶಾವಾಹಿಯಾಗಿ ಬಂದ ಕೆಲ ಅಂಶಗಳೂ ಬೆನ್ನು ಬಾಗಿ ಗೂನು/ಡುಬ್ಬು ಬೆನ್ನು ಉಂಟಾಗಲು ಕಾರಣವಾಗಿರಬಹುದು.

ಮಕ್ಕಳ ಭವಿಷ್ಯದ ದಿನಗಳು ಆರೋಗ್ಯವಂತ ದೇಹದಿಂದ ಕೂಡಿದ ಜೀವನವಾಗಿರಬೇಕು ಎನ್ನುವುದಾದರೆ ಆರಂಭದ ಹಂತದಲ್ಲೇ ದೈಹಿಕ ದೋಷಗಳನ್ನು ತಿದ್ದಿ ಸರಿಪಡಿಸಬೇಕು. ಶಾಲೆಗಳಿಗೆ ಹೆಚ್ಚು ಭಾರದ ಚೀಲಗಳನ್ನು ಹೊತ್ತೊಯ್ಯುತ್ತಿರುವ ಬಗ್ಗೆ ಗಮನಹರಿಸಿಬೇಕು.

ಗೂನುಬೆನ್ನು ನಿವಾರಣೆಗೆ ನೆರವಾಗುವ ಯೋಗಾಸನಗಳ ಪಟ್ಟಿ ಇಲ್ಲಿದೆ. ಇವುಗಳನ್ನು ಕ್ರಮವರಿತು ಅಭ್ಯಾಸಿಸಿದ್ದೇ ಆದಲ್ಲಿ ಉತ್ತಮ ಫಲ ಲಭಿಸುತ್ತದೆ.

1) ಉತ್ಥಿತ ಹಾಗೂ ಪರಿವೃತ್ತ ತ್ರಿಕೋನಾಸನ, ತಾಡಾಸನ, ವೀರಭದ್ರಾಸನ, ಪಾರ್ಶ್ವೋತ್ತಾನಾಸನ.

2) ಧನುರಾಸನ ಮತ್ತು ಮುಂದುವರಿದ ಹಂತಗಳು

3) ಮಕರಾಸನ

4) ಚತುರಂಗ ದಂಡಾಸನ

5) ಶಲಭಾಸನ

6) ಉಷ್ಟ್ರಾಸನ

7) ಪಾದಾಂಗುಷ್ಠಾಸನ

8) ಪಾದಹಸ್ತಾಸನ

9) ಜಾನುಶೀರ್ಷಾಸನ

10) ಮರೀಚ್ಯಾಸನ

11) ಭಾರದ್ವಾಜಾಸನ

12) ಬದ್ಧಪದ್ಮಾಸನ

13) ಪರ್ಯಂಕಾಸನ

14) ಊರ್ಧ್ವಧನುರಾಸನ

15) ಪಿಂಛಮಯೂರಾಸನ

16) ಅಧೋಮುಖ ವೃಕ್ಷಾಸನ

17) ದ್ವಿಪಾದ ವಿಪರೀತ ದಂಡಾನ

18) ಪರ್ವತಾಸನ

19) ಸುಪ್ತಪಾದಾಂಗುಷ್ಠಾಸನ

20) ಜಠರ ಪರಿವರ್ತನಾಸನ

ಈ ಆಸನಗಳ ಜತೆಗೆ ಇತರ ಆಸನಗಳು ಹಾಗೂ ಭುಜ ಮತ್ತು ಬೆನ್ನು, ಸೊಂಟಕ್ಕೆ ಹೆಚ್ಚು ವ್ಯಾಯಾಮ ಒದಗಿಸುವ ಆಟೋಟಗಳಲ್ಲಿ ತೊಡಗಿಕೊಳ್ಳುವ ಮೂಲಕ ಬೆನ್ನಿನ ದೋಷ ನಿವಾರಿಸಿಕೊಳ್ಳಬಹುದು.

ಸೂಚನೆ:

ಆಸನಗಳನ್ನು ತಪ್ಪಾಗಿ ಅಭ್ಯಾಸಿಸಬೇಡಿ. ಗುರುಮುಖೇನ ಕಲಿಯಿರಿ.

* ಯೋಗದ ಕುರಿತಾದ ಹೆಚ್ಚಿನ ಮಾಹಿತಿಗಾಗಿಇವನ್ನೂ ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT