ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!

7

ಯೋಗಾಸನಕ್ಕೂ, ವ್ಯಾಯಾಮಕ್ಕೂ ಇದೆ ವ್ಯತ್ಯಾಸ!

Published:
Updated:

ಸದೃಢ, ಸರ್ವಾಂಗ ಸುಂದರ ದೇಹವನ್ನು ಹೊಂದಬೇಕೆಂಬುದು ಎಲ್ಲರ ಹಂಬಲ. ಅದಕ್ಕಾಗಿ ಹಿಂದೆ ಗರಡಿಮನೆಯಲ್ಲಿ ಯುವಕರು ತಾಲೀಮು ನಡೆಸುತ್ತಿದ್ದರು. ಈಗ ಆಧುನಿಕ ಜಿಮ್‌ಗಳು ತಲೆಎತ್ತಿವೆ. ಅಂಗ ಸೌಷ್ಠವ ಪಡೆಯಲು ಯುವಕರು ಭಾರದ ವಸ್ತುಗಳೊಂದಿಗೆ ಕಸರತ್ತು ನಡೆಸುತ್ತಿದ್ದಾರೆ.

ನಾವೇನು ಕಮ್ಮಿ ಎಂದು ಯುವತಿಯರು, ಮಹಿಳೆಯರು ಜಿಮ್‌, ಫಿಟ್‌ನೆಸ್‌ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ದೇಹದಾರ್ಢ್ಯ ಪಟುವಾಗಬೇಕೆಂಬುದು ಯುವಕರ ಕನಸಾದರೆ, ಸ್ಲಿಮ್‌/ಝೀರೊ(0) ಸೈಜ್‌ಗೆ ದೇಹದ ತೂಕ ಇಳಿಸಿಕೊಳ್ಳಬೇಕೆಂಬುದು ಮಹಿಳೆಯರ ಕನಸು! ಯೋಗಾಸನ ಮತ್ತು ವ್ಯಾಯಾಮ ಎರಡರ ಉದ್ದೇಶವೂ ಆರೋಗ್ಯ ಸಾಧನೆ. ಇವುಗಳ ಮಧ್ಯೆ ಹಲವು ವ್ಯತ್ಯಾಸಗಳಿವೆ. ಅವುಗಳನ್ನು ತಿಳಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾದೆ.

ಯೋಗಾಸನ
* ಆಸನ ಅಭ್ಯಾಸ ನಿಧಾನವಾಗಿ ಮಾಡುವಂತಹದ್ದು.
* ಉಸಿರಾಟ ಪ್ರಕ್ರಿಯೆ ಜತೆ ಹೊಂದಾಣಿಕೆಯಾಗಿ ನಡೆಯುತ್ತದೆ.
* ದೇಹಕ್ಕೆ ಅಗತ್ಯವಿರುವ ಭಾರ ಮತ್ತು ಪ್ರತಿಭಾರವನ್ನು ದೇಹವೇ ಒದಗಿಸುತ್ತದೆ.
* ದೇಹದ ಪ್ರತಿ ಅಂಗ, ಸ್ನಾಯು, ನರ ಮತ್ತು ಗ್ರಂಥಿಗೆ ವ್ಯಾಯಾಮ ಸಿಗುತ್ತದೆ.
* ಅಸನ ಅಭ್ಯಾಸದಲ್ಲಿ ದೈಹಿಕ ಸಮತೋಲನ ಕಾಯುವ ಮೂಲಕ ಮಾನಸಿಕ ಸಮತೋಲನ ವೃದ್ಧಿಗೆ ನೆರವಾಗುವುದು.
* ಅಂತಿಮ ಸ್ಥಿತಿಯಲ್ಲಿ ಆಸನಗಳ ಕ್ಲಿಷ್ಟತೆಯನ್ನು ಆಧರಿಸಿ 15 ಸೆಕೆಂಡುಗಳಿಂದ ನಿಮಿಷಗಳ ವರೆಗೆ ನೆಲೆಸುತ್ತೇವೆ. ಇದರಿಂದ ಹೆಚ್ಚು ಪ್ರಯೋಜನ ಲಭಿಸುತ್ತದೆ.
* ದೈಹಿಕವಾಗಿ ಶಕ್ತಿ ಸಂಚಯನವಾಗುತ್ತದೆ.
* ಆಸನದಲ್ಲಿ ದೇಹ ಸ್ಥಿರಗೊಳ್ಳುವಂತೆ ಮನಸ್ಸೂ ಸ್ಥಿರಗೊಳ್ಳುತ್ತಾ ಸಾಗುತ್ತದೆ.
* ನರಗಳು ಮತ್ತು ಸ್ನಾಯುಗಳು ಸಳೆಯಲ್ಪಟ್ಟು ಅಭ್ಯಾಸ ನಡೆಯುತ್ತದೆ.
* ನೆಲಹಾಸಿನ ಮೇಲೆ ಅಭ್ಯಾಸ ಮಾಡುವುದು ಕಡ್ಡಾಯ.
* ಬೆಳಿಗ್ಗೆ ಸೂರ್ಯೋದಯ, ಸಂಜೆ ಸೂರ್ಯಾಸ್ತ ವೇಳೆ ಅಭ್ಯಾಸ ನಡೆಯುತ್ತದೆ.
* ದೇಹ ಸಡಿಲವಾಗಿದ್ದು ಅಭ್ಯಾಸ ನಡೆಯುತ್ತದೆ.
* ಹೆಚ್ಚು ವೆಚ್ಚವಿಲ್ಲದ, ವಿಸ್ತಾರ ಜಾಗವಿಲ್ಲದಿದ್ದರೂ ಅಭ್ಯಾಸಿಸಬಹುದು.
* ಮನಸ್ಸು-ಬುದ್ಧಿಯ ಮೇಲೆ ಹತೋಟಿ ಸಾಧ್ಯ.


ವ್ಯಾಯಾಮ
* ದೈಹಿಕವಾಗಿ ಶಕ್ತಿ ವ್ಯಯವಾಗುತ್ತದೆ; ಹೆಚ್ಚು ಸಮಯ ಅಭ್ಯಾಸ ಮುಂದುವರಿದಂತೆಲ್ಲ ದೇಹಕ್ಕೆ ಆಯಾಸ, ಬಳಲಿಕೆ ಎನಿಸುತ್ತದೆ.
* ಮಾಂಸಖಂಡಗಳು ದಷ್ಟ-ಪುಷ್ಟವಾಗಿ ಬೆಳೆದು ಭೀಮ ಬಲ ಸಾಧನೆ.
* ಉಸಿರಾಟದ ಕ್ರಮಬದ್ಧ ವಿಧಾನವಿಲ್ಲದೆ ಅಭ್ಯಾಸ ನಡೆಯುತ್ತದೆ.
* ಅತಿಯಾದ ಒತ್ತಡ, ಭಾರ ದೇಹದ ಮೇಲೆ ಬೀಳುತ್ತದೆ.
* ಅತಿಯಾದದ್ದನ್ನು ತಡೆಯವ ಶಕ್ತಿ ದೇಹಕ್ಕಿಲ್ಲ.
* ನೆಲಹಾಸು ಇಲ್ಲದೇ ಅಭ್ಯಾಸ ನಡೆಯುತ್ತದೆ.
* ದೈಹಿಕ ಕಸರತ್ತಿಗೆ ಒತ್ತು.
* ದೇಹ ಹೆಚ್ಚು ದಣಿಯುತ್ತದೆ.
* ಮಾಂಸಖಂಡಗಳ ವೃದ್ಧಿಗೆ ಒತ್ತು.
* ದೇಹಕ್ಕೆ ಹೆಚ್ಚು ಭಾರ ಹಾಕಿ ಅಭ್ಯಾಸ ನಡೆಸಿದಾಗ ನರಗಳು ತೊಡರುವ/ಹೊರಳುವ ಹಾಗೂ ಮೂಳೆ ಒಳಗೇ ತುಂಡಾಗುವ ಸಾಧ್ಯತೆಗಳಿರುತ್ತವೆ.
* ದೇಹ ಹೆಚ್ಚು ಬಿಗಿಯಾಗಿದ್ದು ಅಭ್ಯಾಸ ನಡೆಯುತ್ತದೆ.
* ಅಭ್ಯಾಸ ವೇಗವಾಗಿ ಏದುಸಿರಿನಿಂದ ನಡೆಯುತ್ತದೆ.
* ವೇಗ ಹಾಗೂ ಆವೇಶದಿಂದ ನಡೆಸುವ ಅಭ್ಯಾಸ ಮನಸ್ಸಿನ ಶಾಂತಿಯನ್ನು ಕದಡುತ್ತದೆ.
* ಜಿಮ್‌ಗಳಲ್ಲಿ ಹಾಗೂ ಇತರೆ ವ್ಯಾಯಾಮವನ್ನು ಬಿಡುವಿದ್ದಾಗ ಅಭ್ಯಾಸ ನಡೆಸುವ ಪರಿಪಾಟ ಬೆಳೆದಿದೆ.
* ಭಾರವಾದ ಸಾಧನಗಳನ್ನು ಬಳಸಿ ಅಭ್ಯಾಸ ನಡೆಯುತ್ತದೆ.
* ಹೆಚ್ಚು ವೆಚ್ಚದ ಸಾಧನ ಸಲಕರೆಣೆಗಳು ಬೇಕು.
* ಸಾಧನಗಳನ್ನು ಇರಿಸಲು ಹೆಚ್ಚು ಸ್ಥಳಾವಕಾಶದ ಅಗತ್ಯವೂ ಇದೆ.
* ಕಸರತ್ತಿನಲ್ಲಿ ನಿರ್ದಿಷ್ಟ ಅಂಗಕ್ಕೆ ವ್ಯಾಯಾಮ ಲಭ್ಯ.

* ಇದನ್ನೂ ಓದಿ...

ಯೋಗ ಶುರು ಮಾಡೋಣ...​

ಯೋಗಕ್ಕೂ ಮುನ್ನ ಮಾಡಿ ವಾರ್ಮ್‌ ಅಪ್​

ಸೂರ್ಯ ನಮಸ್ಕಾರ ಏಕೆ?​

ಸೂರ್ಯ ನಮಸ್ಕಾರದ ಲಾಭಗಳು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !