ಬುಧವಾರ, ಜುಲೈ 6, 2022
23 °C
ಮಳೆ ಹಾಡು

ಮೊದಲ ಆಲಿಕಲ್ಲು ಮಳೆ ನೆನಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಬಾಲ್ಯದ ನೆನಪದು. ನಾನು ನೋಡಿದ ಮೊದಲ ಆಲಿಕಲ್ಲಿನ ಮಳೆ ಅದು. ಶಾಲೆಯಿಂದ ಅಮ್ಮನ ಜೊತೆ ಬರುತ್ತಿದ್ದಾಗ ಆಕಾಶವೇ ತೂತಾಗಿ ನೀರೆಲ್ಲಾ ಚೆಲ್ಲಿಹೋಗುತ್ತಿದೆಯೆನೋ ಎಂಬಂತೆ ಧೋ ಎಂದು ಮಳೆ ಬೀಳುತ್ತಿತ್ತು.

ನನಗೆ ಮಳೆಯಲ್ಲಿ ನೆನೆದು ಕುಪ್ಪಳಿಸುವುದೆಂದರೆ ಇಷ್ಟ. ಅಮ್ಮನಿಗೋ ಮಗಳು ಹುಷಾರು ತಪ್ಪಿಬಿಟ್ಟರೆ ಎಂಬ ಭಯ. ಸುರಿಯುತ್ತಿದ್ದ ಮಳೆಯಲ್ಲಿ ರೈನ್ ಕೋಟ್ ಧರಿಸಿಕೊಂಡು ಬರುತ್ತಿದ್ದ ನನಗೆ ಯಾರೋ ಮಳೆಯಲ್ಲಿ ಜೋರಾಗಿ ಕಲ್ಲು ತೂರಿದಂತಾಯಿತು. ತಕ್ಷಣವೇ ನೆಲದ ಮೇಲೆ ಕಣ್ಣು ಹರಿಯಿತು. ಕಪ್ಪು ರಸ್ತೆಯ ಮೇಲೆ ಯಾರೋ ಮಂಜುಗಡ್ಡೆಗಳನ್ನು ಎರಚಿದ್ದಾರಲ್ಲಾ ಎಂದು ನೋಡುತ್ತಿದ್ದಂತೆ ಮೇಲಿಂದ ಮಂಜುಗಡ್ಡೆ ಬೀಳುತ್ತಿದ್ದನ್ನು ಕಂಡು ಯಾರು ಮೇಲಿನಿಂದ ಹಾಕುತ್ತಿದ್ದಾರೆ ಎಂದು ಆಶ್ಚರ್ಯವಾಯಿತು. ರಸ್ತೆಯಲ್ಲಿ ಬಿದ್ದಿದ್ದ ಆ ಮಂಜುಗಡ್ಡೆಯನ್ನು ಆಯ್ದು ನನ್ನ ಊಟದ ಡಬ್ಬಿಗೆ ತುಂಬುತ್ತಾ ಒಂದನ್ನು ಬಾಯಿಗೆ ಹಾಕಿಕೊಂಡೆ ಅದನ್ನು ಕಂಡ ಅಮ್ಮ ಬೈದಳು. ಇದು ಆಲಿಕಲ್ಲು ತಿನ್ನಬಾರದು ಆರೋಗ್ಯ ಹಾಳಾಗುತ್ತದೆ ಎಂದು ಗದರಿದಳು. ಅಲ್ಲಿಯವರೆಗೂ ಆಲಿಕಲ್ಲು ಮಳೆ ಎಂಬುದನ್ನೇ ಕೇಳಿರದ ನಾನು ಮೊದಲ ಬಾರಿ ನೋಡಿದ ಆಲಿಕಲ್ಲು ಮಳೆ ಅದಾಗಿತ್ತು.

ಕೈಯಲ್ಲಿ ಆಯ್ದ ಆ ಆಲಿಕಲ್ಲುಗಳನ್ನೆಲ್ಲಾ ಅಲ್ಲೇ ಬಿಟ್ಟೆ. ಕಾಲಿಗೆ ಸಿಕ್ಕ ಕೆಲ ಮಂಜುಗಡ್ಡೆಗಳನ್ನು ತುಳಿಯುತ್ತಾ ಮತ್ತೂ ಕೆಲವನ್ನೂ ಒದೆಯುತ್ತಾ ಮಳೆಯೊಂದಿಗೆ ಆಟವಾಡುತ್ತಾ ಬರುತ್ತಿದ್ದೆ. ಈಚೆಗೆ ಆಲಿಕಲ್ಲು ಮಳೆ ಬಂದಾಗ ಹಾಗೇ ಬಾಲ್ಯಕ್ಕೆ ಜಾರಿದೆ. ಅಡ್ಡ ಬಂದ ಬಸ್ ಹಾರನ್ ಮಾಡಿತು. ನಾನು ನನ್ನ ಬಾಲ್ಯದಿಂದ ವಾಪಸ್ ಬಂದು ಮನೆ ಕಡೆಗೆ ಬಸ್ ಹತ್ತಿದೆ.

–ಶಿಲ್ಪ ಶಿವಮಾದಯ್ಯ, ಹೆಚ್.ಎಸ್.ಆರ್. ಬಡಾವಣೆ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.