ಮಗನಿಗೆ 14 ವರ್ಷ. ಗಂಡ– ಹೆಂಡತಿ ಇಬ್ಬರೂ ಸಾಫ್ಟ್‌ವೇರ್ ಕೆಲಸದಲ್ಲಿದ್ದೇವೆ. ಈಗೀಗ ಮಗನ ನಡವಳಿಕೆಯ ಬಗ್ಗೆ ಚಿಂತೆ ಆಗಿದೆ. ಆತ ಬಾತ್‌ರೂಂಗೆ ಹೋದರೆ ಒಂದು ಗಂಟೆಯಾದರೂ ಹೊರಗೆ ಬರುವುದಿಲ್ಲ. ಶಾಲಾ ಚಟುವಟಿಕೆಗೆಂದು ಮೊಬೈಲ್ ಬಳಸುತ್ತಾನೆ. ಆದರೆ, ಎಲ್ಲದರಲ್ಲಿಯೂ ಗೂಗಲ್ ಹಿಸ್ಟರಿ, ಸರ್ಚ್ ಹಿಸ್ಟರಿಯನ್ನು ಡಿಲೀಟ್ ಮಾಡುತ್ತಾನೆ. ಆತ ಅಶ್ಲೀಲ ವಿಡಿಯೊಗಳನ್ನು ನೋಡುವ ಚಟ ಹತ್ತಿಸಿಕೊಂಡಿದ್ದಾನೆ ಎಂದು ಮನಸ್ಸು ಬಲವಾಗಿ ಹೇಳುತ್ತಿದೆ. ಒಂದೊಮ್ಮೆ ಅಪರೋಕ್ಷವಾಗಿ ಸಿಕ್ಕಿಬಿದ್ದಿದ್ದಾನೆ. ಗಲಾಟೆ ಮಾಡಿ, ಅವನ ಮನಸ್ಸನ್ನು ಗಾಸಿಗೊಳಿಸಲು ಇಷ್ಟವಿಲ್ಲ. ಈ ಬಗ್ಗೆ ಅವನಲ್ಲಿ ಮುಕ್ತವಾಗಿ ಮಾತನಾಡುವುದು ಹೇಗೆ ಎಂಬುದು ತೋಚುತ್ತಿಲ್ಲ. ಅವನನ್ನು ಆ ಚಟದಿಂದ ಹೊರತರುವುದು ಹೇಗೆ?