ನವೀನನಿಗೆ ಹದಿನೆಂಟರ ಹರೆಯ. ಮನೆಯಂಗಳಕ್ಕೆ ಬೈಕ್ ಇಳಿದು ಓಡೋಡಿ ಬಂದ. 'ಡಾಕ್ಟ್ರೇ! ನನಗೆ ಕಿವಿ ಕೇಳ್ತಿಲ್ಲ!! ಕಿವಿಯೊಳಗೆ ಸದಾ ಕಾಲ ಸಾಗರದ ಅಲೆಗಳ ಭೋರ್ಗರೆತ. ಏನನ್ನೂ ಕೇಳಿಸಲಾಗದ ಸ್ಥಿತಿ.‘

ಆಗ ತಾನೇ ಕೊರೊನಾಯುಗ ಕಳೆದಿತ್ತು. ಆಗ ಅಂಟಿದ ಒಂದು ಚಪಲ, ಅವನ ಎರಡೂ ಕಿವಿಗಳ ಶ್ರವಣಶಕ್ತಿಯನ್ನು ಕಸಿದುಕೊಂಡಿತ್ತು. ಸದಾ ಕಾಲ ಕಿವಿಗಳಿಗೆ ಇಯರ್ ಫೋನ್, ಹೆಡ್ ಹಾಕಿ ಹಾಡುಗಳಿಗೋ, ಇನ್ನಿತರ ಸಂಗತಿಗೋ ಅಂಟಿಕೊಂಡ ಗೀಳು ನವೀನನ ನೂರ್ಕಾಲದ ಬದುಕಿಗೆ ಆಪತ್ತು ತಂದಿತ್ತು. ಆಯುರ್ವೇದದ ಒಂದು ಸಾದಾ ಮುನ್ನಚ್ಚರಿಕೆ. ಎಲ್ಲ ಇಂದ್ರಿಯಗಳಿಗೆ ಅನ್ವಯ. ಅತಿ, ಹೀನ, ಮಿಥ್ಯಾ ಮತ್ತು ಸಮ್ಯಗ್ಯೋಗ! ಕಿವಿಗಳಿಗೆ ಕೇಳುವ ಇತಿ ಮಿತಿ ಇದೆ. ಅದು ಸಹದ್ದು ಮೀರಿದರೆ ಅತಿಯೋಗ. ಗಟ್ಟಿ ಮತ್ತು ಕಿವಿತಮಟೆಗೆ ಸಮೀಪದ ಹೆಡ್ ಫೋನ್ ಅತಿ ಬಳಕೆ ಮಿಥ್ಯಾಯೋಗ. ಸುಶ್ರುತರಿಗೆ ಅಂದೇ ಅಂತಹ ಕಾಯಿಲೆಯ ಅರಿವಿತ್ತು; ಅದಕ್ಕೆ ‘ಪ್ರಣಾದ’ ಎಂಬ ಹೆಸರಿಟ್ಟರು.

ಅಥರ್ವವೇದದ ಸೊಲ್ಲು ಹೀಗಿದೆ: ‘ಪಶ್ಯೇಮ ಶರದ ಶತಂ ಜೀವೇಮ ಶರದ ಶತಂ ಶೃಣುಯಾಮ ಶರದ ಶತಂ ಪ್ರಬ್ರುವಾಮ ಶರದ ಶತಮ್’. ನೋಡುವ, ಕೇಳುವ, ಮಾತನಾಡುವ ನೂರ್ಕಾಲದ ಸಾರ್ಥಕ ಮತ್ತು ನಿರೋಗದ ಬದುಕು–ಸಾಧನೆಯ ಮಹತ್ವದ ವೇದಮಂತ್ರವಿದು. ಆಯುರ್ವೇದದ ಮೂಲ ಅಥರ್ವವೇದ. ಹೀಗೆ ವೇದಕಾಲದ ಶ್ರವಣಾರೋಗ್ಯ ಸಾಧನೆಯ ಸಂಗತಿ ಎಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಸುಶ್ರುತಸಂಹಿತೆಯಲ್ಲಿ ಇಪ್ಪತ್ತೆಂಟು ಪ್ರಕಾರದ ಕರ್ಣರೋಗಗಳ ವೈವಿಧ್ಯಮಯ ವಿಸ್ತಾರ ವಿವರಗಳಿವೆ. ರೋಗಕಾರಣ, ಸ್ವರೂಪ ಮತ್ತು ಚಿಕಿತ್ಸೆಯ ಒಳನೋಟಗಳಿವೆ. ಒಂದು ಸಂಗತಿ ನೆನಪಿಡಿ. ದೇಹದ ರಚನೆ ಹಾರ್ಡ್ವೇರ್ ಇಡೀ ಭೌತಿಕ ಶರೀರ. ಕುತ್ತಿಗೆಯ ಮೇಲಣ ಅವಯವಗಳಿಗೆ ಇ.ಎನ್.ಟಿ. ಎನ್ನುವೆವು. ಮೊದಲನೆಯ ಅಂಗ ಕಿವಿ. ಉಳಿದವು ಮೂಗು ಮತ್ತು ಗಂಟಲಿನ ರಚನೆ. ಇಡಿಯ ದೇಹದ ಸಾಫ್ಟ್ವೇರ್ ಮಿದುಳು! ಅದರ ಪಕ್ಕದ ರಚನೆಗಳು ಕಿವಿ. ಹೊರಗಿವಿಯ ಆಲಿಕೆ, ನಡುಗಿವಿ, ಒಳಗಿವಿ, ಪಟಲ(ಡ್ರಮ್) ತರಂಗಸೂಚಕ ದ್ರವ ಪದಾರ್ಥಗಳಂತಹ ಅತಿ ಸೂಕ್ಷ್ಮ ವಿವರಗಳು ಆಯುರ್ವೇದ ಸಂಹಿತೆಗಳ ಹೂರಣ.

ಕಿವಿಗಳು ವಾತಸ್ಥಾನ. ಹಾಗಾಗಿ ಕಿವಿಗೆ ಹದವಾಗಿ ಬಿಸಿಯಾಗಿರುವ ಬಿಲ್ವ ತೈಲದ ತೊಟ್ಟಿಕ್ಕಿಸಲಾದೀತು. ಬೆಳ್ಳುಳ್ಳಿ ಸಿದ್ಧ ಕಾಯಿಸಿದ ಕೊಬ್ಬರಿ ಎಣ್ಣೆ ಒಂದೆರಡು ಹನಿ ಬಿಟ್ಟಾಗ ಶಿಶುವಾಗಲಿ, ಹಿರಿಹರೆಯದವರಾಗಲೀ ಕಿವಿನೋವು ವಾಸಿ. ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯ ಸಂಗಡ ತುಪ್ಪವನ್ನು ಹದ ಬಿಸಿ ಮಾಡಿರಿ. ಸೌಟಲ್ಲಿ ಕಾದ ಈ ನೈಯೆಣ್ಣೆಯನ್ನು ಹದ ಬಿಸಿಯಾಗಿಯೇ ಹಿತವಾಗುವಂತೆ ನೆತ್ತಿಗೊತ್ತಿರಿ. ಐದೇ ನಿಮಿಷದಲ್ಲಿ ಮಿಂದು ಎಣ್ಣೆ ತೆಗೆದು ಸ್ನಾನ ಮುಗಿಸಿಬಿಡಿ. ಇಂತಹ ಮನೆ ಮದ್ದು ಸೈನಸೈಟಿಸ್, ಮೂಗು ಕಟ್ಟು, ಕಿವಿನೋವು, ಗಂಟಲ ಬೇನೆ, ನೋವು ಪರಿಹಾರಿ. ಕಿವಿಯ ಆರೋಗ್ಯಕ್ಕೆ ಪೂರಕ ಸಹ. ಎಳೆ ಹಸುಗೂಸಿನ ಕಿವಿಸೋರುವಿಕೆಗೆ ಬಾಣಂತಿಗೆ ದಶಮೂಲಾರಿಷ್ಟದ ಸೇವನೆಯಿಂದ ಲಾಭ. ಉಳಿದಂತೆ ಕೂಡ ಆಯುರ್ವೇದದ ಆ್ಯಂಟಿಬಯಾಟಿಕ್ ದಶಮೂಲಾರಿಷ್ಟ ಸೇವನೆಯಿಂದ ಮೂಗು, ಕಿವಿ, ಗಂಟಲ ಕಿರಿ ಕಿರಿ, ಮುಚ್ಚಿಕೊಳ್ಳುವ ಶೀತಬಾಧೆಗಿದು ಉತ್ತಮ ಪರಿಹಾರೋಪಾಯ. ರೋಗನಿರೋಧಕ ಕಸುವು ವರ್ಧಕ.

ಸುಶ್ರುತರ ಪ್ರಕಾರ ಕಿವಿಯ ಅರೋಗ್ಯಕ್ಕೆ ಘೃತಪಾನ ಮೊದಲ ಹೆಜ್ಜೆ. ತ್ರಿಫಲ ಘೃತಸೇವನೆಯಿಂದ ಅಂತಹ ಫಲ ಖಂಡಿತ. ರಸಾಯನ, ಅಂದರೆ ಚ್ಯವನಪ್ರಾಶ ಮುಂತಾದ ಲೇಹದ ಸೇವನೆಯಿಂದ ದೇಹಬಲ ಹೆಚ್ಚಳ. ಕರ್ಣಾರೋಗ್ಯ ಸಾಧಕ. ಬ್ರಹ್ಮಚರ್ಯದ ಎಚ್ಚರದ ನುಡಿಯೂ ಕಿವಿಯ ನೂರ್ಕಾಲ ಕೇಳುವಿಕೆಯ ಮೆಟ್ಟಲು. ಮಂಜು, ಮಳೆಹನಿ, ಬೀಸುಗಾಳಿಗೆ ಎದುರಾಗಿ ಜಾಗಿಂಗ್, ವಾಕಿಂಗ್ ಹೋಗುವ ಪರಿಪಾಠವು ಕಿವಿಕಾಯಿಲೆಗೆ ದಾರಿ ಎನ್ನುತ್ತದೆ, ಆಯುರ್ವೇದ. ಇಂಥಹ ಸಂದರ್ಭಗಳಲ್ಲಿ ಬೆಚ್ಚನೆಯ ಮುಚ್ಚುಟೋಪಿಯನ್ನು ಧರಿಸಬೇಕಾದೀತು.

ಕಿವಿಯನ್ನು ಚುಚ್ಚಿ ಆಭರಣ ಹಾಕುವ ಕರ್ಣವೇಧನ ಸಂಸ್ಕಾರವು ಸುಶ್ರುತೋಕ್ತ. ಮಿದುಳಿನ ಕೆಲವು ನರನಾಡಿಗಳನ್ನು ಉದ್ದೀಪಿಸಿ ದೀರ್ಘಜೀವನ ಸಾಧಿಸುವ ಹಂತಗಳಿವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.