ಪ್ರಸ್ತುತ ದಿನಗಳಲ್ಲಿ ಅನೇಕರು ಬೆನ್ನು ಹಾಗೂ ಸೊಂಟದ ನೋವಿನ ಸಮಸ್ಯೆಯಿಂದ ಬಳಲುತ್ತಿರುವುದನ್ನು ಕಾಣಬಹುದು. ಅದಕ್ಕೆ ಅವರ ದಿನನಿತ್ಯದ ಅಭ್ಯಾಸಗಳು ಪ್ರಮುಖ ಕಾರಣ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಸ್ಪೈನ್ ಸರ್ಜನ್ ಡಾ. ಈಶ್ವರ್ ಕೀರ್ತಿಯವರು ಅಭಿಪ್ರಾಯಪಟ್ಟಿದ್ದಾರೆ. ಮಾತ್ರವಲ್ಲ ಅವರು ಈ ಸೊಂಟ ಹಾಗೂ ಬೆನ್ನು ನೋವಿಗೆ ಕೆಲವು ಕಾರಣಗಳು ಮತ್ತು ಪರಿಹಾರಗಳನ್ನು ಕೂಡ ನೀಡಿದ್ದಾರೆ. ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ.

ಬೆನ್ನು , ಸೊಂಟದ ನೋವಿನಿಂದ ಚಿಕಿತ್ಸೆಗೆ ಬರುವವರು ಅವರ ಸಮಸ್ಯೆಯನ್ನು ಗಾಯ ಎಂದು ಪರಿಗಣಿಸಿರುತ್ತಾರೆ. ಆದರೆ ಅವರ ಈ ಸಮಸ್ಯೆ ನಿತ್ಯದ ಅಭ್ಯಾಸಗಳಿಂದಲೇ ಆರಂಭವಾಗಿರುತ್ತದೆ. ಸ್ಪೈನ್ ಅಥವಾ ಬೆನ್ನು ಹುರಿ ನಮ್ಮ ದೇಹದ ರಚನೆ ಹಾಗೂ ದೇಹದ ಚಟುವಟಿಕೆಯ ಅಡಿಪಾಯ. ನಿತ್ಯ ನಾವು ಓಡಾಡುವ, ಕುಳಿತುಕೊಳ್ಳುವ , ಭಾರ ಎತ್ತುವ , ನಿದ್ದೆ ಮಾಡುವ ಭಂಗಿ ಹಾಗೂ ಮನೆ ಕೆಲಸ ಮಾಡುವ ರೀತಿ ಕೂಡ ನಿಧಾನವಾಗಿ ಬೆನ್ನು ಹುರಿಯ ಮೇಲೆ ವ್ಯತಿರಕ್ತ ಪರಿಣಾಮ ಬೀರುತ್ತವೆ. ಈ ಬಗ್ಗೆ ಅರಿವು, ಕೆಲವು ಬದಲಾವಣೆಯನ್ನು ಅಳವಡಿಸಿಕೊಳ್ಳುವ ಮೂಲಕ ಬೆನ್ನು ಹುರಿ ಹೆಚ್ಚು ಹಾನಿಯಾಗದಂತೆ ತಡೆಯಬಹುದು.

ನಿತ್ಯದ ಅಭ್ಯಾಸದಲ್ಲಿ ಮಾಡುವ ತಪ್ಪುಗಳು

ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು

ತಪ್ಪಾದ ಅಥವಾ ಸೂಕ್ತವಲ್ಲದ ಭಂಗಿಯಲ್ಲಿ ದೀರ್ಘಕಾಲದವರೆಗೆ ಕುಳಿತುಕೊಳ್ಳುವುದು ಬೆನ್ನು ಮತ್ತು ಸೊಂಟ ನೋವಿಗೆ ಸಾಮಾನ್ಯ ಕಾರಣವಾಗಿದೆ. ಫೋನ್ ಅಥವಾ ಕಂಪ್ಯೂಟರ್ ಪರದೆಯ ಕಡೆ ಬಾಗಿ ಕುಳಿತುಕೊಳ್ಳುವುದರಿಂದ ಸ್ಪೈನಲ್ ಡಿಸ್ಕ್ ಸಂಕುಚಿತಗೊಳ್ಳುವುದಲ್ಲದೆ ಸ್ನಾಯುಗಳ ಮೇಲೆ ಭಾರ ಹೆಚ್ಚುತ್ತದೆ.

ಪರಿಹಾರವೇನು?

ಬೆನ್ನಿಗೆ ಸರಿಯಾದ ನೆರವು ಅಥವಾ ಸಪೋರ್ಟ್ ಸಿಗುವಂತೆ ಕುಳಿತುಕೊಳ್ಳಿ.

ನಿಮ್ಮ ಕಂಪ್ಯೂಟರ್ ಪರದೆ ಕಣ್ಣಿನ ಸಮಕ್ಕೆ ಇರಲಿ

ಪ್ರತಿ 30-40 ನಿಮಷಕ್ಕೊಮ್ಮೆ 1-2 ನಿಮಿಷಗಳ ಸ್ಟ್ರೆಚ್ ಬ್ರೇಕ್ ತೆಗೆದುಕೊಳ್ಳಿ

“ಟೆಕ್ಸ್ಟ್ ನೆಕ್ “ ಫಿನೊಮೆನನ್

ಪದೇ ಪದೇ ಹೆಚ್ಚು ಸಮಯದವರೆಗೆ ಮೊಬೈಲ್ ಫೋನ್ ನೋಡುವ ಸಲುವಾಗಿ ಕುತ್ತಿಗೆಯನ್ನು ಬಾಗಿಸುವುದರಿಂದ ನಿಮ್ಮ ಸರ್ವೈಕಲ್ ಸ್ಪೈನ್ ಮೇಲೆ 25 ಕೆ.ಜಿಯಷ್ಟು ಒತ್ತಡ ಬೀಳುತ್ತದೆ. ಮೊದಲು ವಯಸ್ಕರಲ್ಲಿ ಕುತ್ತಿಗೆ ಸೆಳೆತ, ನೋವು ಕಂಡುಬರುತ್ತಿತ್ತು ಈಗ ಹದಿಹರೆಯದ ಮಕ್ಕಳಲ್ಲೂ ಈ ಸಮಸ್ಯೆ ಹೆಚ್ಚಾಗುತ್ತಿದೆ.

ಪರಿಹಾರವೇನು?

ಮೊಬೈಲ್ ಫೋನ್ ಬಳಸುವಾಗ ನಿಮ್ಮ ಕಣ್ಣಿನ ನೇರಕ್ಕೆ ಹಿಡಿದುಕೊಳ್ಳಿ. ಹಾಗೇ ಆಗಾಗೆ ಕುತ್ತಿಗೆಯನ್ನು

ನಿಧಾನವಾಗಿ ತಿರುಗಿಸುವ ವ್ಯಾಯಾಮ ಮಾಡಿ

ಬೆನ್ನು ನೋವಿಗೆ ಕಾರಣವಾಗುವ ಮನೆ ಕೆಲಸಗಳು

ಮನೆ ಕೆಲಸ ಮಾಡುವಾಗ ಅರಿವಿಲ್ಲದೆಯೇ ಕೆಲವು ಸೂಕ್ತವಲ್ಲದ ಭಂಗಿಯಲ್ಲಿ ಕೆಲಸ ಮಾಡುತ್ತಾರೆ. ಹಾಗೆ ಪದೇ ಪದೇ ಬಾಗಿ ಮಾಡುವ ಕೆಲಸಗಳು ಹೆಚ್ಚು. ನಿಮ್ಮ ಬೆನ್ನು ಮೂಳೆಯನ್ನು ನಾಣ್ಯದ ಸಾಲು ಎಂದು ಭಾವಿಸಿ ಕೆಲಸ ಮಾಡುವಾಗ ಈ ಸಾಲು ಬೀಳದಂತೆ, ಸಾಲು ತಪ್ಪದಂತೆ ಕಾಪಾಡಿಕೊಳ್ಳಬೇಕು ಎಂದು ಗಮನದಲ್ಲಿರಿಕೊಂಡು ಕೆಲಸ ಮಾಡಿ.

ಅಡುಗೆ ಮಾಡುವಾಗ ಪಾತ್ರೆ ತೊಳೆಯುವಾಗ ಸಿಂಕ್ ಅಥವಾ ಸ್ಟೌವ್ ಕಟ್ಟೆಗೆ ಹತ್ತಿರವಾಗಿ ನಿಂತುಕೊಳ್ಳಿ. ಒಂದು ಕಾಲನ್ನು ಸಣ್ಣ ಸ್ಟೂಲ್ ಮೇಲೆ ಇಟ್ಟು ನಿಲ್ಲಿ, ಮುಂದೆ ಬಾಗಿ ಕೆಲಸ ಮಾಡುವುದನ್ನು ತಪ್ಪಿಸಿ.

ನೆಲ ಒರೆಸುವಾಗ ಉದ್ದ ಹಿಡಿಕೆಯ ಸಾಧನ ಬಳಸಿ ಹಾಗೆ ನಿಯಮಿತವಾಗಿ ಎಡದಿಂದ ಬಲಕ್ಕೆ ಸಾಧನ ಬದಲಾಯಿಸುತ್ತಾ ಕೆಲಸ ಮಾಡಿ.

ಭಾರವಾದ ವಸ್ತು, ನೀರು ತುಂಬಿದ ಬಕೆಟ್ ಎತ್ತುವಾಗ ವಸ್ತುವನ್ನು ಹತ್ತಿರ ಇಟ್ಟುಕೊಂಡು ಮೊಣಕಾಲು ಬಾಗಿಸಿ ಭಾರ ಎತ್ತಿ, ಇದರಿಂದ ಸೊಂಟ ನೋವು ತಪ್ಪಿಸಬಹುದು.

ಹಾಸಿಗೆ ಸರಿಪಡಿಸುವಾಗ ಅಥವಾ ತಗ್ಗು ಪ್ರದೇಶ ಸ್ವಚ್ಛಗೊಳಿಸುವಾಗ ಸ್ಕ್ವಾಟ್ ಅಥವಾ ಮಂಡಿಯೂರಿ ಕೆಲಸ ಮಾಡಿ.

ಮಲಗುವ ಭಂಗಿ

ಬೆನ್ನು, ಸೊಂಟ ನೋವಿಗೆ ನಿದ್ದೆಯ ಭಂಗಿಯೂ ಕಾರಣವಾಗುತ್ತದೆ. ಸರಿಯಾದ ಸಪೋರ್ಟ್ ನೀಡದ ಹಾಸಿಗೆ ಮತ್ತು ದಿಂಬು ಬೆನ್ನು ಹುರಿಯ ಮೇಲೆ ಪರಿಣಾಮ ಬೀರುವ ಮೂಲಕ ಬೆಳಗಿನ ಸಮಯದಲ್ಲಿ ಬೆನ್ನು ನೋವಿಗೆ ಕಾರಣವಾಗುತ್ತವೆ. ಬೆಳಿಗ್ಗೆ ಏಳುವಾಗ ಕುತ್ತಿಗೆ ಅಥವಾ ಬೆನ್ನಿನಲ್ಲಿ ಸೆಳೆತ , ನೋವು ಇದ್ದಲ್ಲಿ ಹಾಸಿಗೆ ಅಥವಾ ದಿಂಬು ಕಾರಣವಾಗಿರಬಹುದು.

ಪರಿಹಾರವೇನು?

ಬೆನ್ನಿನ ಮೇಲೆ (ಅಂಗಾತ) ಅಥವಾ ಪಕ್ಕಕ್ಕೆ ಒರಗಿ ಮಲಗಿ, ಹೊಟ್ಟೆಯ ಮೇಲೆ ಭಾರ ಹಾಕಿ ಮಲಗಬೇಡಿ.

ದೇಹದ ರಚನೆಗೆ ಹೊಂದಿಕೆಯಾಗುವ ಹಾಗೂ ಬೆನ್ನಿಗೆ ಸೂಕ್ತ ಬೆಂಬಲ ನೀಡುವ ಹಾಸಿಗೆ ಆಯ್ಕೆ ಇರಲಿ

ನಿಮ್ಮ ಕುತ್ತಿಗೆ ದೇಹಕ್ಕೆ ಸಮನಾಗಿರಲಿ

ಸ್ನಾಯು ದುರ್ಬಲವಾದರೆ, ಬೆನ್ನು ಮೂಳೆಯೂ ದುರ್ಬಲ

ಬೆನ್ನುಮೂಳೆ ದೇಹದ ಸ್ನಾಯುವಿನ ಮೇಲೆ ಅವಲಂಬಿತವಾಗಿರುತ್ತದೆ. ಕೋರ್ ಮಸಲ್ ಅಥವಾ ಸ್ನಾಯುಗಳು ದುರ್ಬಲವಾದರೆ ದೇಹದ ಎಲ್ಲಾ ಭಾರವು ಬೆನ್ನು ಮೂಳೆ, ಡಿಸ್ಕ್ ಮೇಲೆ ಬೀಳುತ್ತದೆ.

ಪರಿಹಾರವೇನು?

* ಪ್ಲ್ಯಾಂಕ್ಸ್ - 30 ಸೆ. 3 ಬಾರಿ

ಬ್ರಿಡ್ಜ್ಸ್- 10 ಬಾರಿ – 3 ಸೆಟ್

ಬರ್ಡ್- ಡಾಗ್ ಸ್ಟ್ರೆಚ್ - 10 ಬಾರಿ – ಸೆಟ್

ಪೆಲ್ವಿಕ್ ಟಿಲ್ಟ್ಸ್ - 10 ನಿಧಾನ ಪುನರಾವರ್ತನೆ

ವಾರದಲ್ಲಿ ಒಂದು ಗಂಟೆ ವ್ಯಾಯಾಮ ಮಾಡುವುದಕ್ಕಿಂತ ನಿತ್ಯ 10 ನಿಮಿಷ ಮಾಡುವುದು ಉತ್ತಮ.

ನಿತ್ಯ ವ್ಯಾಯಾಮ ಯಾಕೆ ಅಗತ್ಯ?

ಬೆನ್ನುಮೂಳೆಗೆ ಚಟುವಟಿಕೆ ಅತ್ಯಗತ್ಯ. ವ್ಯಾಯಾಮ ಡಿಸ್ಕ್ ಆರೋಗ್ಯ ಕಾಪಾಡುವುದಲ್ಲದೇ, ಸ್ನಾಯುಗಳ ಬಲ ಹೆಚ್ಚಿಸುತ್ತದೆ.

ಯೋಗ : ದೇಹದ ನಮ್ಯತೆ ಹಾಗೂ ಭಂಗಿಯ ಅರಿವನ್ನು ಹೆಚ್ಚಿಸುತ್ತದೆ

ವೇಗದ ವಾಕಿಂಗ್ : ರಕ್ತ ಸಂಚಾರ ಹೆಚ್ಚಿಸುತ್ತದೆ

ಸ್ಟ್ರೆಚಿಂಗ್ - ದೀರ್ಘ ಕಾಳ ಕುಳಿತ ಬಳಿಕ ಸ್ನಾಯು ಸೆಳೆತ ತಡೆಗಟ್ಟಲು ನೆರವಾಗುತ್ತದೆ.

ಕೆಲಸದ ನಡುವೆ ಎದ್ದು ನಿಂತು, ಕೈ ಮೇಲೆತ್ತಿ ಸ್ಟ್ರೆಚ್ ಮಾಡುವುದು, ಭುಜ ತಿರುಗಿಸುವ ವ್ಯಾಯಾಮ ಹಾಗೂ ಪ್ರತಿ 1 ಗಂಟೆಗೆ 2 ನಿಮಿಷ ವಾಕಿಂಗ್ ಉತ್ತಮ ಅಭ್ಯಾಸ.

ಲಕ್ಷಣಗಳನ್ನು ಕಡೆಗಣಿಸಬೇಡಿ

ಬೆನ್ನುನೋವನ್ನು ಸಾಮಾನ್ಯ ಎಂದು ಕಡೆಗಣಿಸಬೇಡಿ. ಪದೇ ಪದೇ ಕಾಡುವ ಸೆಳೆತ, ಸೊಂಟದಿಂದ ಕಾಲಿಗೆ ಹರಡುವ ನೋವು ಡಿಸ್ಕ್ ಅಥವಾ ನೆರ ಸಂಬಂಧಿತ ಸಮಸ್ಯೆಯ ಆರಂಭಿಕ ಲಕ್ಷಣಗಳಾಗಿರಬಹುದು.

2 ವಾರಕ್ಕಿಂತ ಹೆಚ್ಚು ನೋವು ಮುಂದುವರೆದಲ್ಲಿ , ನೋವು ಕಾಲು ಮತ್ತು ಕೈಗೆ ಹರಡುತ್ತಿದ್ದಲ್ಲಿ, ಅಶಕ್ತತೆ, ಸ್ಪರ್ಶ ಜ್ಞಾನ ಇಲ್ಲದೇ ಇರುವುದು, ನಿದ್ದೆಗೆ ಸಮಸ್ಯೆ ಉಂಟಾದಲ್ಲಿ ತಕ್ಷಣ ವೈದ್ಯರನ್ನ ಭೇಟಿ ಮಾಡಿ.

ನಿತ್ಯದ ಅಭ್ಯಾಸ ಯಾಕೆ ಮುಖ್ಯವಾಗುತ್ತದೆ?

ಹಲವು ವರ್ಷದಿಂದ ಇರುವ ನೋವು ಡಿ–ಜನರೇಟಿವ್ ಡಿಸ್ಕ್ ರೋಗಕ್ಕೆ, ನರ ಸಂಕುಚಿತಗೊಳ್ಳುವ ಮತ್ತು ನಿರಂತರ ನೋವಿಗೆ ಕಾರಣವಾಗುತ್ತದೆ. ಆದರೆ ವರ್ಷದಿಂದ ಅಭ್ಯಾಸದಲ್ಲಿರುವ ವ್ಯಾಯಾಮ, ಸ್ಟ್ರೆಚಿಂಗ್ ಜೀವನಪರ್ಯಂತ ಉತ್ತಮ ಬೆನ್ನುಮೂಳೆ ಬಲವರ್ಧನೆಗೆ ಸಹಾಯಮಾಡುತ್ತದೆ. ನಿಮ್ಮ ನಿತ್ಯದ ಅಭ್ಯಾಸ ನಿಮ್ಮ ಬೆನ್ನುಮೂಳೆಯ ಆರೋಗ್ಯವನ್ನು ನಿರ್ಧರಿಸುತ್ತದೆ.

ನಿಮ್ಮ ದೇಹದ ಕೇಂದ್ರ ಭಾಗವಾಗಿರುವ ಬೆನ್ನುಮೂಳೆ ರಕ್ಷಣೆಗೆ ದುಬಾರಿ ವಸ್ತುಗಳ , ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಯ ಅಗತ್ಯವಿಲ್ಲ. ಕೇವಲ ಅರಿವು, ಉತ್ತಮ ಭಂಗಿ ಹಾಗೂ ನಿಯಮಿತ ಚಟುವಟಿಕೆಯ ಅಗತ್ಯವಿದೆ. ಸ್ನಾಯುಗಳನ್ನು ಬಲಪಡಿಸಿ, ಸಿರಯಾದ ಭಂಗಿಯಲ್ಲಿ ಕುಳಿತುಕೊಳ್ಳಿ ಹಾಗೂ ಸೂಕ್ತ ರೀತಿಯಲ್ಲಿ ನಿದ್ರಿಸಿ. ನಿಮ್ಮ ಬೆನ್ನುಮೂಳೆ ಜೀವನಪರ್ಯಂತ ನಿಮಗೆ ಬೆಂಬಲವಾಗಿರುತ್ತದೆ.

ಲೇಖಕರು: (ಕನ್ಸಲ್ಟೆಂಟ್ ಸ್ಪೈನ್ ಸರ್ಜನ್, ಕೆಎಂಸಿ ಆಸ್ಪತ್ರೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.