ಬೆಂಗಳೂರು: ಬಾಲ್ಯದಲ್ಲಿನ ಸ್ಥೂಲಕಾಯ ಎಂಬುದು ಮುಂದುವರೆದ ರಾಷ್ಟ್ರಗಳಲ್ಲಿ ಹಾಗೂ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ.

ಆಹಾರದಲ್ಲಿನ ಅಸಮತೋಲನ, ದೈಹಿಕ ಚಟುವಟಿಕೆಗಳ ಕೊರತೆ, ಹೆಚ್ಚು ಫಾಸ್ಟ್ಫುಡ್ ಸೇವನೆ ಹಾಗೂ ಅನುವಂಶಿಕತೆ ಬಾಲ್ಯದಲ್ಲಿನ ಸ್ಥೂಲಕಾಯಕ್ಕೆ ಪ್ರಮುಖ ಕಾರಣವಾಗಿವೆ.

ಇದಲ್ಲದೇ ಇತ್ತೀಚೆಗೆ ಮಕ್ಕಳಲ್ಲಿ ಹೆಚ್ಚುತ್ತಿರುವ ಸ್ಕ್ರೀನ್ ಟೈಮ್ ಕೂಡ ಸ್ಥೂಲಕಾಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಹೊಸ ಸಂಶೋಧನಾ ವರದಿ ಹೇಳುವ ಪ್ರಕಾರ ಮಕ್ಕಳಲ್ಲಿ ಸ್ಕ್ರೀನ್ ಟೈಮ್ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಇದು ಬಹುಬೇಗನೆ ಬಾಲ್ಯದಲ್ಲಿನ ಸ್ಥೂಲಕಾಯಕ್ಕೆ ಅನುವು ಮಾಡಿಕೊಡುತ್ತಿದೆ ಎಂದು ಎಚ್ಚರಿಸಿದೆ.

ಶಾಲೆಗೆ ಹೋಗುವ ಮಕ್ಕಳು ಅಥವಾ 14 ವರ್ಷದೊಳಗಿನ ಮಕ್ಕಳು ದಿನದಲ್ಲಿ ಒಟ್ಟಾರೆ ಒಂದು ಗಂಟೆಗಿಂತ ಹೆಚ್ಚು ಸ್ಕ್ರೀನ್ ಟೈಮ್ ಹೊಂದಿರಬಾರದು ಎಂದು ಎಚ್ಚರಿಸಿದೆ. ಇದು ಒಂದು ಪ್ರಮಾಣಿತ ಅವಧಿಯಾಗಿರಬೇಕು. ಯಾವುದೇ ಕಾರಣಕ್ಕೂ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ವರದಿ ಹೇಳಿದೆ.

14 ವರ್ಷದೊಳಗಿನ ಮಕ್ಕಳು ಮೊಬೈಲ್, ಟಿ.ವಿ, ಕಂಪ್ಯೂಟರ್, ಇತರೆ ಎಲೆಕ್ಟ್ರಿಕ್ ಡಿವೈಸ್, ವಿಡಿಯೊ ಗೇಮ್ಗಳಿಂದ ದೂರ ಉಳಿಯುವುದು ಅಂದರೆ ಇವುಗಳನ್ನು ದಿನದಲ್ಲಿ ಒಟ್ಟಾರೆ ಒಂದು ಗಂಟೆಗಿಂತಲೂ ಹೆಚ್ಚು ಬಳಸಬಾರದು ಮತ್ತು ಕಡಿಮೆ ಕ್ಯಾಲೋರಿ ಇರುವು ಆಹಾರಗಳನ್ನು ಸೇವಿಸುವ ಮೂಲಕ, ಹೊರಾಂಗಣ ಆಟೋಟಗಳ ಮೂಲಕ ಬಾಲ್ಯದಲ್ಲಿನ ಸ್ಥೂಲಕಾಯ ತಡೆಗಟ್ಟಬಹುದು ಎಂದು ಹೇಳಿದೆ.

ಇಲ್ಲದಿದ್ದರೇ ಮಕ್ಕಳು ಹದಿಹರೆಯದ ವಯಸ್ಸಿನಲ್ಲೇ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
.ಆಂಡ್ರೋಪಾಸ್ ಪುರುಷರ `ಆ ದಿನಗಳು'.ಮಕ್ಕಳಲ್ಲಿಯೂ ಮಧುಮೇಹ: ಡಾ.ತಳ್ಳೊಳ್ಳಿ ಕಳವಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.