ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲ್ತ್ ಟಿಪ್ಸ್‌ | ಮಳೆಗಾಲದಲ್ಲಿ ಕಂದಮ್ಮನ ತ್ವಚೆಯ ಕಾಳಜಿ

Last Updated 7 ಆಗಸ್ಟ್ 2020, 19:31 IST
ಅಕ್ಷರ ಗಾತ್ರ

ಪುಟ್ಟ ಮಗುವಿನ ಚರ್ಮ ತುಂಬಾ ಸೂಕ್ಷ್ಮ. ಈ ಕಾರಣಕ್ಕೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ ಮಳೆಗಾಲದಲ್ಲಿ ದದ್ದು, ತುರಿಕೆಯಂತಹ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡು ಮಗುವಿಗೆ ಕಿರಿಕಿರಿ ಉಂಟುಮಾಡುತ್ತವೆ. ಅಂತಹ ಸಮಸ್ಯೆಗಳಾಗದಂತೆ ತಾಯಂದಿರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.

ಋತುಮಾನಕ್ಕೆ ತಕ್ಕಂತೆ ನಿಮ್ಮ ಮುದ್ದು ಮಗುವಿನ ತಚ್ಚೆ ರಕ್ಷಣೆಯ ದಿನಚರಿಯನ್ನು ಬದಲಿಸಬೇಕು. ಅಲ್ಲದೆ ಋತುಮಾನಕ್ಕೆ ಹೊಂದುವಂತಹ ಉತ್ಪನ್ನಗಳನ್ನು ಬಳಬೇಕು. ಸೌಮ್ಯ ಹಾಗೂ ಸುರಕ್ಷಿತ ಉತ್ಪನ್ನಗಳಿಂದ ತಲೆಯಿಂದ ಕಾಲಿನವರೆಗೂ ಮಗುವಿನ ಚರ್ಮವನ್ನು ರಕ್ಷಿಸುವುದು ತುಂಬಾ ಮುಖ್ಯ.

ಮಳೆಗಾಲದಲ್ಲಿ ಮಗುವಿನ ಚರ್ಮದ ರಕ್ಷಣೆ ಮಾಡುವ ಕೆಲವು ಉಪಾಯಗಳು ಇಲ್ಲಿವೆ.

* ಮಳೆಗಾಲದಲ್ಲಿ ಪ್ರತಿದಿನ ತಪ್ಪದೇ ಸ್ನಾನ ಮಾಡಿಸುವುದು, ತೊಟ್ಟಿಲಿನಲ್ಲಿ ಬಳಸುವ ಬಟ್ಟೆಗಳನ್ನು ಬದಲಿಸುವುದು, ಸ್ನಾನದ ನಂತರ ಚೆನ್ನಾಗಿ ಮೈ ಒರೆಸುವುದು ಅಗತ್ಯ.

* ಡಯಾಪರ್‌ನಿಂದಾಗುವ ದದ್ದುಗಳನ್ನು ತಡೆಯಲು ಮಳೆಗಾಲಕ್ಕೆ ಸೂಕ್ತವಾಗುವ ಬಟ್ಟೆಗಳನ್ನು ತೊಡಿಸುವುದು ಉತ್ತಮ.

* ಆಲಿವ್ ಎಣ್ಣೆ ಹಾಗೂ ಬಾದಾಮಿ ಎಣ್ಣೆ ಸಮೃದ್ಧವಾಗಿರುವ ಬೇಬಿ ಸೋಪ್‌ನಿಂದ ಸ್ನಾನ ಮಾಡಿಸಿ. ಬಾದಾಮಿ ಎಣ್ಣೆ ಚರ್ಮದಲ್ಲಿ ತೇವಾಂಶ ಉಳಿಯಲು ಸಹಾಯ ಮಾಡುತ್ತದೆ ಹಾಗೂ ಆಲಿವ್‌ ಎಣ್ಣೆ ಶುಷ್ಕತೆಯನ್ನು ದೂರ ಮಾಡಿ ಒಣ ಚರ್ಮದಿಂದ ಮುಕ್ತಿ ನೀಡುತ್ತದೆ.

* ದಾಸವಾಳ ಸೊಪ್ಪು ಹಾಗೂ ಕಡಲೆ ಹಿಟ್ಟು ಮುಂತಾದ ಅಂಶಗಳಿರುವ ಶಾಂಪೂವಿನಿಂದ ಮಗುವಿನ ಕೂದಲ ಆರೈಕೆ ಮಾಡಿ. ದಾಸವಾಳ ಕೂದಲಿನಲ್ಲಿ ತೇವಾಂಶ ಹೆಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ಇದು ಕೂದಲ ಪೋಷಣೆಗೂ ಸಹಕಾರಿ.

* ಮಗುವಿಗೆ ಸ್ನಾನ ಮಾಡಿಸಿದ ಮೇಲೆ ಚೆನ್ನಾಗಿ ಒರೆಸುವುದು ಅತೀ ಅವಶ್ಯ. ಅದರಲ್ಲೂ ಚರ್ಮ ಮಡಿಕೆಯಾಗುವ ಗಲ್ಲದ ಕೆಳಗೆ, ಕುತ್ತಿಗೆ, ಮಂಡಿಯ ಕೆಳಗೆ ನೀರನ್ನು ಚೆನ್ನಾಗಿ ಒರೆಸಬೇಕು.

* ಒದ್ದೆ ನ್ಯಾಪ್‌ಕಿನ್‌ನಿಂದ ದದ್ದುಗಳಾಗುವುದು ಸಾಮಾನ್ಯ. ಇದರಿಂದ ಮಕ್ಕಳಿಗೆ ಕಿರಿಕಿರಿಯಾಗಬಹುದು. ಹಾಗಾಗಿ ದದ್ದು ನಿವಾರಿಸಲು ಬಾದಾಮಿ ಎಣ್ಣೆ ಬಳಸುವುದು ಉತ್ತಮ.

* ಹಗುರವಾಗಿರುವ ಹಾಗೂ ಪೂರ್ತಿ ಮೈ ಮುಚ್ಚುವ ಬಟ್ಟೆ ತೊಡಿಸುವುದು ಅಗತ್ಯ. ಅದರಲ್ಲೂ ಕಾಟನ್ ಬಟ್ಟೆಯನ್ನೇ ತೊಡಿಸಬೇಕು. ಮಗುವಿಗೆ ಉಸಿರುಗಟ್ಟುವಷ್ಟು ಬಟ್ಟೆ ತೊಡಿಸುವುದಕ್ಕಿಂತ ಹಗುರ ಎನ್ನಿಸುವ ಜಾಕೆಟ್‌ ಹಾಗೂ ಬ್ಲಾಂಕೆಟ್ ಹೊದೆಸಿ.

* ಮಳೆಗಾಲದಲ್ಲಿ ಹೆಚ್ಚು ಕಾಡುವ ಸಮಸ್ಯೆ ಎಂದರೆ ಸೊಳ್ಳೆಗಳ ಕಾಟ. ಆ ಕಾರಣಕ್ಕೆ ಮನೆ ಹಾಗೂ ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ. ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದ ಸೊಳ್ಳೆ ಹಾಗೂ ಕೀಟಗಳು ಕಡಿಯದಂತೆ ಕಾಪಾಡಬಹುದು. ಜೊತೆಗೆ ಸೊಳ್ಳೆ ಪರದೆಗಳನ್ನು ಬಳಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT