ನಿದ್ರೆಗೆ ಜಾರಿದಾಗ ದೇಹ ವಿಶ್ರಾಂತ ಸ್ಥಿತಿಯಲ್ಲಿರುತ್ತದೆ. ಆದರೆ, ಮನಸ್ಸು ಎಂದಿಗೂ ಮಲಗುವುದಿಲ್ಲ. ಅದು ನಮ್ಮೊಳಗಿನ ಭಾವನೆ, ನೆನಪು ಮತ್ತು ಆಲೋಚನೆಗಳನ್ನು ಚಿತ್ರಗಳ ರೂಪದಲ್ಲಿ ತೋರಿಸುತ್ತದೆ. ಅನೇಕ ಸಂದರ್ಭದಲ್ಲಿ ಕನಸಿನಲ್ಲಿ ಮನುಷ್ಯರು ಕಾಣಿಸಿಕೊಳ್ಳುತ್ತಾರೆ. ಕೆಲವರು ಪರಿಚಿತರು, ಕೆಲವರು ಅಪರಿಚಿತರಾಗಿರುತ್ತಾರೆ. ಹಾಗಾದರೆ ಕನಸಿನಲ್ಲಿ ಮನುಷ್ಯರು ಕಾಣಿಸಲು ಕಾರಣವೇನು ಎಂಬುದನ್ನು ನೋಡೋಣ.
.ಕನಸು ಬೀಳುವುದರ ಹಿಂದಿನ ರಹಸ್ಯವೇನು? ಇಲ್ಲಿದೆ ಮಾಹಿತಿ.ಗಿನ್ನೆಸ್ ದಾಖಲೆ ಕನಸಿನಲ್ಲಿ ಫರಾನ್.
ಕನಸಿನಲ್ಲಿನ ಮನುಷ್ಯರು ಕಾಣುವುದು ಮನಸ್ಸಿನ ಪ್ರತಿಬಿಂಬವಾಗಿದೆ. ಕನಸು ಎನ್ನುವುದು ಪರೋಕ್ಷ ಮನಸ್ಸಿನ ಕ್ರಿಯೆಯಾಗಿದ್ದು, ದಿನನಿತ್ಯ ಹೆಚ್ಚು ಯೋಚಿಸುವ, ಭಾವನಾತ್ಮಕವಾಗಿ ಹೊಂದಿಕೊಂಡಿರುವ ವ್ಯಕ್ತಿಗಳು ಕನಸುನಲ್ಲಿ ಕಾಣುತ್ತಾರೆ ಎಂದು ಮನೋವಿಜ್ಞಾನ ಹೇಳುತ್ತದೆ.

ತಾಯಿಯ ಮುಖ – ಕಾಳಜಿ, ಪ್ರೀತಿ ಅಥವಾ ಭದ್ರತೆಯ ಬಯಕೆ ತೋರಿಸುತ್ತದೆ.

ಶಿಕ್ಷಕರ ಮುಖ – ಮಾರ್ಗದರ್ಶನ.

ಸ್ನೇಹಿತನ ಮುಖ – ಒಂಟಿತನ ಅಥವಾ ನೆನಪುಗಳ ಹಚ್ಚಾಟ.

ಪ್ರಿಯವಲ್ಲದ ವ್ಯಕ್ತಿ – ಕೋಪ, ಆತಂಕ ಅಥವಾ ಭಯದ ಸಂಕೇತ.

ಸತ್ತವರು – ಅವರ ಜೊತೆಗಿನ ಅಪೂರ್ಣ ಮಾತುಗಳು ಅಥವಾ ಮನದ ಬಯಕೆ.

ಅಧಿಕಾರಿ ಅಥವಾ ಮುಖ್ಯಸ್ಥರು – ಅಧಿಕಾರದ ಒತ್ತಡ ಅಥವಾ ಗುರುತಿನ ಬಯಕೆ.

ಪ್ರಿಯ ವ್ಯಕ್ತಿ – ಆತ್ಮೀಯತೆಯ ತವಕ.

ಕನಸಿನ ಕುರಿತು ಮನೋವಿಜ್ಞಾನಿ ಫ್ರಾಯ್ಡ್ನ ವಿವರಣೆ:

ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ, ಕನಸು ಎನ್ನುವುದು ಮನಸ್ಸಿನೊಳಗಿನ ಬಯಕೆಗಳ ಸಂಕೇತಾತ್ಮಕ ಅಭಿವ್ಯಕ್ತಿಯಾಗಿದೆ. ದಿನನಿತ್ಯ ನಾವು ಒತ್ತಡದಿಂದ ಹೊರಬರುವಾಗ ಆಲೋಚನೆ ಮತ್ತು ಭಾವನೆಗಳು ಕನಸಿನ ರೂಪದಲ್ಲಿ ಹೊರಬರುತ್ತವೆ ಎಂದು ಹೇಳುತ್ತಾರೆ.

ಉದಾಹರಣೆ 1: ನಿಮಗೆ ತುಂಬ ಇಷ್ಟವಾದ ವ್ಯಕ್ತಿಯ ಮುಖ ಕಾಣಿಸುವುದು. – ನಿಜ ಜೀವನದಲ್ಲಿ ಅವರೊಂದಿಗೆ ಇರುವ ಬಯಕೆಯ ಪ್ರತೀಕ. ಕನಸಿನಲ್ಲಿ ಅವರ ಹತ್ತಿರ ಹೋಗುವ ಭಾವನೆ (affection or closeness desire.)

ಉದಾಹರಣೆ 2: ಯಾರಾದರೂ ನಮ್ಮ ಮೇಲೆ ಕೋಪದಿಂದಿರುವುದು ಕಾಣಿಸುವುದು. ಇದು ಒಳಗಿನ ಪಶ್ಚಾತ್ತಾಪದ ಪ್ರತಿಬಿಂಬವಾಗಿದೆ.

ಉದಾಹರಣೆ 3: ಸತ್ತವರನ್ನು ಕಾಣುವುದು. – ಅವರ ಬಗ್ಗೆ ಇರುವ ಪ್ರೀತಿ ಅಥವಾ ಅಪೂರ್ಣ ಮಾತುಗಳ ಸಂಕೇತ. ಫ್ರಾಯ್ಡ್ ಪ್ರಕಾರ, ಇದು ‘suppressed grief’ ಅನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ.

ಉದಾಹರಣೆ 4: ಅಪರಿಚಿತ ವ್ಯಕ್ತಿಯ ಕನಸು. – ನಮ್ಮೊಳಗಿನ ಅಜ್ಞಾತ ಭಾಗ, ಅಂದರೆ ನಾವು ಇನ್ನೂ ಅರಿಯದ ನಮ್ಮ ವ್ಯಕ್ತಿತ್ವದ ಒಂದು ಅಂಶ (unknown self).

ಉದಾಹರಣೆ 5: ವ್ಯಕ್ತಿ ಕನಸಿನಲ್ಲಿ ಸ್ನೇಹಿತನಂತೆ ವರ್ತಿಸುವುದು. – ಅದು ನಮ್ಮೊಳಗಿನ ‘conflict’ ಅಥವಾ ‘repressed emotion’ ನ ಸಂಕೇತವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.