ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯ – ಈ ಎರಡೂ ಕರ್ಮಗಳನ್ನು ನಿರ್ವಹಿಸುವ ಇಂದ್ರಿಯ ಎಂದರೆ ಕಿವಿ. ಕಿವಿಯು ಶ್ರವಣೇಂದ್ರಿಯವೂ ಹೌದು, ಜೊತೆಗೆ ದೇಹದ ಸಮತೋಲನವನ್ನು ಕಾಪಾಡುವ ಅಂಗವೂ ಹೌದು. ಈ ಎರಡೂ ಕ್ರಿಯೆಗಳೂ ಸಮರ್ಪಕವಾಗಿ ನಡೆಯಲು ಆರೋಗ್ಯಕರವಾದ ಕಿವಿಯು ಆವಶ್ಯಕ. ಗಂಟಲಿನ ಅಂಗಾಂಗಗಳಿಂದಲೇ ಧ್ವನಿ ಹೊರಡುವುದು. ಆ ಹೊರಟ ಧ್ವನಿಯನ್ನು ಗ್ರಹಿಸುವುದು ಕಿವಿ. ಅಲ್ಲದೆ ಗರ್ಭದಲ್ಲಿ ಕಿವಿಯ ಭಾಗಗಳು ಉತ್ಪತ್ತಿಯಾಗುವುದೂ ಧ್ವನಿಪೆಟ್ಟಿಗೆಯ ಭಾಗಗಳಿಂದಲೇ. ಹಾಗಾಗಿ ಕೇಳುವ ಶಬ್ದಕ್ಕೂ, ಆಡುವ ಮಾತಿಗೂ ಅವಿನಾಭಾವ ಸಂಬಂಧ. ಮೂಗು, ಗಂಟಲಿಗೆ ಬರುವ ತೊಂದರೆಗಳು, ಆಗುವ ಕಫದ ಸಂಚಯವು ಕಿವಿಯ ರೋಗಕ್ಕೂ ಕಾರಣವಾಗಬಹುದು. ಎಷ್ಟೋ ಜನರಿಗೆ ನೆಗಡಿಯಾದಾಗ ಕಿವಿ ಕೇಳುವುದೂ ಮಂದವಾಗುತ್ತದೆ.

• ಇಂದ್ರಿಯಗಳ ಅತಿಯಾದ ಅಥವಾ ವಿಕೃತವಾದ ಅಥವಾ ಅತಿ ಕಡಿಮೆ ಉಪಯೋಗಗಳು ಆಯಾ ಇಂದ್ರಿಯಗಳ ರೋಗಗಳಿಗೆ ಕಾರಣವಾಗುತ್ತದೆ. ಹಾಗೆಯೇ ಅತಿಯಾದ, ಜೋರಾದ ಶಬ್ದಗಳ ನಿರಂತರ ಶ್ರವಣ, ನಿರಂತರವಾಗಿ ಕಿವಿಗೆ ಶಬ್ದಗ್ರಾಹಕಗಳನ್ನು (earphone) ಧರಿಸಿ ಅತಿ ಹತ್ತಿರದಿಂದ ಕೇಳುವುದು, ಧ್ವನಿಯನ್ನು ಜೋರಾಗಿರಿಸಿ ಕೇಳುವುದು, ವಿಕೃತವಾದ, ಅತಿ ಕರ್ಕಶವಾದ ಧ್ವನಿಗಳನ್ನು ನಿರಂತರವಾಗಿ ಆಲಿಸುವುದು, ಯಾವ ಧ್ವನಿಯನ್ನು ಕೇಳದೆ ಇರುವ ನಿರಂತರ ಏಕಾಂತವೂ ಕಿವಿ ಮತ್ತು ಮಾತಿನ ಮೇಲೆ ಪರಿಣಾಮವನ್ನು ಬೀರುತ್ತದೆ.

• ಅನೇಕ ಕಾರಣಗಳಿಂದ ಕಿವುಡುತನ ಉಂಟಾಗಬಹುದು. ಒಂದು ಹುಟ್ಟಿನಿಂದಲೇ ಬರುವ ಕಿವುಡುತನ. ಎರಡನೆಯದು ಕಾಲಾಂತರದಲ್ಲಿ ಉಂಟಾಗುವ ಕಿವುಡುತನ. ಹುಟ್ಟಿನಿಂದಲೇ ಬರುವ ಕಿವುಡುತನವು ತಂದೆ ಅಥವಾ ತಾಯಿಯ ವಂಶವಾಹಿಗಳ ವಿಕೃತಿಯಿಂದ ಬರಬಹುದು. ಗರ್ಭಿಣಿಗೆ ತಗಲುವ ಸರ್ಪಸುತ್ತು, ಕಾಮಾಲೆ, ರುಬೆಲ್ಲಾ, ಅಥವಾ ಅತಿಯಾದ ವಾಂತಿ, ಬಾಯಿ ರುಚಿಯೇ ಇಲ್ಲದೆ, ಸರಿಯಾಗಿ ಆಹಾರ ಸೇವಿಸದೆ ಪೊಷಕಾಂಶಗಳ ಕೊರತೆ ಉಂಟಾಗುವುದು, ಗರ್ಭಿಣಿಗೆ ಆಗುವ ಅಪಘಾತಗಳಿಂದ, ಪ್ರಸವಕಾಲದಲ್ಲಿ ಉಂಟಾಗುವ ತೊಂದರೆಗಳಿಂದಾಗಿ ಮಗುವಿನ ತಲೆಗೆ, ಅಥವಾ ನರಗಳಿಗೆ ಪೆಟ್ಟಾಗುವುದರಿಂದ, ಗರ್ಭಿಣಿಯು ಸೇವಿಸುವ ಕೆಲವು ತೀಕ್ಷ್ಣವಾದ ಔಷಧಗಳಿಂದ – ಹೀಗೆ ಅನೇಕ ಕಾರಣಗಳಿಂದ ಮಗುವಿನ ಇಂದ್ರಿಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಇದು ಕಿವಿಯ ಮತ್ತು ಕೇಳುವಿಕೆಗೆ ಸಂಬಂಧಿಸಿದ ಭಾಗಗಳಿಗೆ ಅಥವಾ ಅದಕ್ಕೆ ಸಂಬಂಧಿಸಿದ, ರಕ್ತನಾಳಗಳು ಅಥವಾ ನರಗಳ ಮೇಲೆ ಪರಿಣಾಮ ಬೀರಿದರೆ, ಅದರ ಪರಿಣಾಮ ಮಗುವಿನಲ್ಲಿ ಕಿವುಡುತನವನ್ನು ಉಂಟುಮಾಡುತ್ತದೆ.

• ಆಯುರ್ವೇದವು ಶಾರೀರಿಕವಾದ ಇಂದ್ರಿಯಗಳ ಪ್ರಾದುರ್ಭಾವ, ಬೆಳವಣಿಗೆ, ಮನಸ್ಸು ಬುದ್ಧಿಗಳೊಡನೆ ಸಂಬಂಧವನ್ನು ಬೆಳೆಸುವುದು ಇವೆಲ್ಲವೂ ಸುಮಾರು ನಾಲ್ಕರಿಂದ ಏಳನೇ ತಿಂಗಳ ಮಧ್ಯದಲ್ಲಿ ಉಂಟಾಗುತ್ತದೆ ಎಂದು ತಿಳಿಸುತ್ತದೆ. ಆದ್ದರಿಂದ ಗರ್ಭಿಣಿಯು ಇಂದ್ರಿಯಗಳ, ಮನಸ್ಸಿನ ಪ್ರಸನ್ನತೆಗೆ ಹೆಚ್ಚು ಗಮನ ಕೊಡಬೇಕು. ಆಕೆಯ ಪ್ರತಿಯೊಂದು ಪ್ರವೃತ್ತಿಯು ಮಗುವಿನ ಇಂದ್ರಿಯ, ಮನಸ್ಸು, ಬುದ್ಧಿಯ ಮೇಲೆ ಪರಿಣಾಮ ಬಿರುತ್ತದೆ. ಆ ಸಮಯದಲ್ಲಿ ಗರ್ಭವು ಕೇಳುವ ಶಬ್ದಗಳು ಮಗುವಿನ ಕಿವಿಯ ಬೆಳವಣಿಗೆ ಮತ್ತು ನರಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಗರ್ಭಿಣಿಯರು ಶಬ್ದಗ್ರಾಹಕಗಳನ್ನು ಧರಿಸಿ ಇಡೀ ದಿನ ಶಬ್ದಗಳನ್ನು ಕೇಳುವುದು, ಎತ್ತರದ ಧ್ವನಿಯ ಶಬ್ದಗಳನ್ನು ನಿರಂತರವಾಗಿ ಆಲಿಸುವುದು, ಕಿರುಚಿ ಮಾತನಾಡುವುದು, ಮಿತಿಯಿಲ್ಲದ, ಅತಿಯಾದ ಮಾತು, ವಿಕೃತವಾದ ಧ್ವನಿಗಳನ್ನು ಆಲಿಸುವುದು, ಇಂತಹ ಮಾತು ಮತ್ತು ಧ್ವನಿಯ ಏರಿಳಿತಗಳು ಮಗುವಿನ ಇಂದ್ರಿಯಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತವೆ. ಗರ್ಭಿಣಿಯು ಸ್ವೀಕರಿಸುವ ವಿರುದ್ಧಾಹಾರ, ವಿಕೃತಾಹಾರಗಳು ಮಗುವಿನ ಇಂದ್ರಿಯಗಳ ಬೆಳವಣಿಗೆಯ ಮೇಲೆ ಪರಿಣಾಮ ಬಿರುತ್ತವೆ. ಆದ್ದರಿಂದ ಸರಿಯಾದ ರೀತಿಯಲ್ಲಿ ಗರ್ಭಿಣಿಯ ಆರೈಕೆ ಅತ್ಯಗತ್ಯ.

• ಹಿರಿಯರಲ್ಲಿ ವಯಸ್ಸಿನ ಪರಿಣಾಮವಾಗಿ ಕೇಳುವ ಶಕ್ತಿಯು ಮಂದವಾಗುತ್ತದೆ. ವರ್ಷಾನುಗಟ್ಟಲೆ ನೆಗಡಿಯಿಂದ ಬಳಲುತ್ತಿದ್ದರೆ, ವಿಪರೀತವಾಗಿ ನೀರಿನಲ್ಲಿ ಆಡುತ್ತಿದ್ದರೆ, (ಈಜು ಮೊದಲಾದ ಜಲಕ್ರೀಡೆಗಳು) ಆಗಾಗ ಕಿವಿಯಲ್ಲಿ ನೆವೆಯಾಗುವುದು, ಸೋರುವುದು ಇದ್ದರೆ, ದೇಹಕ್ಕೆ ಒಗ್ಗದ ಆಹಾರಗಳನ್ನು ನಿರಂತರವಾಗಿ ಸೇವಿಸುತ್ತಿದ್ದರೆ, ಜೋರಾದ ಶಬ್ದಗಳನ್ನು ನಿರಂತರವಾಗಿ ಕೇಳುವುದರಿಂದ, ಕಿವಿಯಲ್ಲಿ ವಿಪರೀತ ಗುಗ್ಗೆ ಸೇರುವುದರಿಂದ, ಕಿವಿಯಲ್ಲಿ ಕೀವು ಗುಳ್ಳೆ ಆಗುವುದರಿಂದ, ಅರೆತಲೆನೋವಿನಿಂದ ಬಹಳ ಕಾಲ ಬಳಲುತ್ತಿದ್ದರೆ, ಗಂಟಲದಡಿಕೆ ರೋಗ ಬಂದಾಗ, ಸಿಡುಬು, ದಡಾರ ಮುಂತಾದ ರೋಗಗಳು ಬಂದಾಗ, ಡಾಕ್ಟರರ ಸಲಹೆ ಇಲ್ಲದೆ, ರಕ್ತಕ್ಕೆ ಸಂಬಂಧಿಸಿದ, ಅಥವಾ ನೋವಿನ ಔಷಧಗಳನ್ನು ನಿರಂತರವಾಗಿ ಬಳಸುತ್ತಿದ್ದರೆ, ಕಫ, ಪಿತ್ತ ಸಂಬಂಧಿ ರೋಗಗಳಲ್ಲಿ ರಕ್ತ ಹಾಳಾಗುತ್ತಿದ್ದರೆ, ಅಜೀರ್ಣ, ಗ್ರಹಣೀರೋಗ, ಅಮಶಂಕೆ ಇವುಗಳ ಪರಿಣಾಮ ಕಿವಿಯ ಭಾಗಗಳಿಗೆ ಆಗುತ್ತಿದ್ದರೆ, ಕಿವಿಯ ಶ್ರವಣಶಕ್ತಿ ಮಂದವಾಗುತ್ತದೆ; ಅಲ್ಲದೆ ಒಳಕಿವಿಯಲ್ಲಿ ಅನೇಕ ರೋಗಗಳು ಉತ್ಪನ್ನವಾಗುತ್ತವೆ. ಕಿವಿಯ ಶಬ್ದಗ್ರಾಹಕ ನರಗಳ ವಿಕೃತಿಯಿಂದಲೂ ಕಿವುಡುತನ ಬರಬಹುದು. ಇಂತಹ ಸಂದರ್ಭದಲ್ಲಿ ತಲೆ ಸುತ್ತುವುದು, ತಲೆನೋವು, ದೇಹದ ಸಮತೋಲನದ ವ್ಯತ್ಯಾಸ – ಹೀಗೆ ಬೇರೆ ಬೇರೆ ತೊಂದರೆಗಳೂ ಉಂಟಾಗಬಹುದು.

ಯಾವುದೇ ಕಾರಣದಿಂದ ಕಿವಿ ಕೇಳಿಸುವಿಕೆಯಲ್ಲಿ ವ್ಯತ್ಯಾಸವಾದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಇದರಿಂದ ಕಿವುಡಾಗುವುದನ್ನು ತಡೆಯಬಹುದು. ಕಿವಿ ಮತ್ತು ಕಿವಿಯ ಇತರೆ ಭಾಗಗಳಲ್ಲಿ ತೊಂದರೆಯಾಗುವುದನ್ನು ತಪ್ಪಿಸಲು ನಿತ್ಯವೂ ಶರೀರಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡಬೇಕು ಎಂದು ಆಯುರ್ವೇದ ತಿಳಿಸುತ್ತದೆ. ಕಡೇಪಕ್ಷ ತಲೆಗೆ, ಪಾದಕ್ಕೆ, ಮತ್ತು ಕಿವಿಗೆ ನಿತ್ಯವೂ ಎಣ್ಣೆ ಹಚ್ಚಬೇಕು. ಅಜೀರ್ಣ, ಅಮಶಂಕೆ, ಅತಂಕದಿಂದ ಉಂಟಾಗುವ ಅತಿಸಾರ, ಈ ಲಕ್ಷಣಗಳಿದ್ದರೆ ಕೂಡಲೇ ವೈದ್ಯರನ್ನು ಕಂಡು ಸರಿಯಾ ಚಿಕಿತ್ಸೆಯನ್ನು ಪಡೆಯಬೇಕು. ಮಕ್ಕಳಿಗೆ ಬರುವ ಜ್ವರ, ಬೇಧಿ, ನೆಗಡಿ, ಅಜೀರ್ಣ ಇವುಗಳು ಹೆಚ್ಚಾಗದಂತೆ, ಪದೇ ಪದೇ ಬರದಂತೆ ಜಾಗ್ರತೆಯನ್ನು ವಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.