ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಸಂಪೂರ್ಣ ನಿರ್ನಾಮ: ಔಷಧ ಪ್ರಯೋಗ ಯಶಸ್ವಿ

ಅಕ್ಷರ ಗಾತ್ರ

ವಾಷಿಂಗ್ಟನ್‌: ಪ್ರಪಂಚದಲ್ಲಿ ಕ್ಯಾನ್ಸರ್‌ ಎಂದರೆ ಭಯಾನಕ ಕಾಯಿಲೆ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಶೀಘ್ರದಲ್ಲೇ ಈ ಮನೋಭಾವವನ್ನುತೊಡೆದುಹಾಕಲು ಸಾಧ್ಯವಾಗಲಿದೆ ಎಂದು ಅಮೆರಿಕದ ವಿಜ್ಞಾನಿಗಳು ಹೇಳಿದ್ದಾರೆ.

ಹೌದು, ಜಗತ್ತಿನಲ್ಲಿ ಇದೇ ಮೊದಲ ಬಾರಿಗೆಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣ ಮುಖವಾಗುವಔಷಧಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಔಷಧ ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಮ್ಯಾನಹಟನ್‌ ಮಹಾನಗರದಲ್ಲಿರುವ ಮೆಮೊರಿಯಲ್‌ ಸ್ಲೋನ್‌ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ವಿಜ್ಞಾನಿಗಳು ಔಷಧಿ ತಯಾರಿಸಿ, ಪ್ರಾಯೋಗಿಕ ಪರೀಕ್ಷೆ ನಡೆಸಿದ್ದಾರೆ.

ಕ್ಯಾನ್ಸರ್‌ ಕಣಗಳು
ಕ್ಯಾನ್ಸರ್‌ ಕಣಗಳು

ವಿಜ್ಞಾನಿಗಳುದೊಸ್ಟಾರ್ಲಿಮ್ಯಾಬ್ (dostarlimab) ಎಂಬ ಔಷಧಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಮೊದಲ ಹಂತದಲ್ಲಿಸಣ್ಣ ಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿದೆ. ವಿಕಿರಣ ಚಿಕಿತ್ಸೆ, ಸರ್ಜರಿ, ಕಿಮೋಥೆರಪಿಮಾಡದೇ ಈ ಔಷಧಿ ಮೂಲಕ ಕ್ಯಾನ್ಸರ್‌ ಅನ್ನು ಶೇ.100 ರಷ್ಟು ನಿರ್ಮೂಲನೆ ಮಾಡಬಹುದು ಎಂಬ ಭರವಸೆ ಮೂಡಿದೆ ಎಂದು ತಜ್ಞರು ಹೇಳಿದ್ದಾರೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ಒಬ್ಬ ಭಾರತೀಯ ಸೇರಿದಂತೆ ಗುದನಾಳ ಕ್ಯಾನ್ಸರ್‌ ಇರುವ 18 ರೋಗಿಗಳಿಗೆದೊಸ್ಟಾರ್ಲಿಮ್ಯಾಬ್ ಔಷಧಿ ನೀಡಲಾಗಿತ್ತು. ಇದರಿಂದಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಅವರಿಗೆ ಮತ್ತೆ ಎಂಡೋಸ್ಕೋಪಿ, ಪಿಇಟಿ ಅಥವಾ ಎಂಆರ್‌ಐ ಸ್ಕ್ಯಾನ್‌ ಮಾಡಿದರೂ ಅವರಲ್ಲಿ ಕ್ಯಾನ್ಸರ್‌ ಕಣಗಳು (ಗಡ್ಡೆ) ಪತ್ತೆಯಾಗಲಿಲ್ಲ.ರೋಗಿಗಳು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಕ್ಯಾನ್ಸರ್‌ ಸಂಪೂರ್ಣ ಗುಣಮುಖವಾಗುವ ಯಾವುದೇ ಔಷಧಿಗಳ ಬಗ್ಗೆ ಅಧ್ಯಯನಗಳಲ್ಲಿ ನಾನು ತಿಳಿದಿಲ್ಲ, ಆದರೆ ಕ್ಯಾನ್ಸರ್‌ ಇತಿಹಾಸದಲ್ಲೇ ಈ ಔಷಧಿ ಮೊದಲು ಎಂದು ನಂಬುತ್ತೇನೆ‘ ಎಂದುಮೆಮೊರಿಯಲ್‌ ಸ್ಲೋನ್‌ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ವಿಜ್ಞಾನಿ ಡಾ.ಲೂಯಿಸ್ ಡೆಯಾಜ್ ಹೇಳಿದ್ದಾರೆ. ‘ಪ್ರತಿಯೊಬ್ಬ ಕ್ಯಾನ್ಸರ್‌ ರೋಗಿಯು ಗುಣಮುಖರಾಗುತ್ತಾರೆಎಂಬುದು ಇದೇ ಮೊದಲು‘ ಎಂದು ಮತ್ತೊಬ್ಬ ವಿಜ್ಞಾನಿಡಾ.ಅಲನ್ ಪಿ.ವೆನೂಕ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಪ್ರಯೋಗಕ್ಕೆ ಒಳಪಟ್ಟ ಎಲ್ಲ ರೋಗಿಗಳು ಕ್ಯಾನ್ಸರ್‌ನ ಒಂದೇ ಹಂತದಲ್ಲಿ ಇದ್ದರು. ಅವರು ಈ ಔಷಧ ಪಡೆಯುವ ಮೊದಲು ಕಿಮೋಥೆರಪಿ, ವಿಕಿರಣ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಅವರು ಮುಂದಿನ ಹಂತಕ್ಕೆ ಹೋಗುವ ಬದಲುದೊಸ್ಟಾರ್ಲಿಮ್ಯಾಬ್ ಔಷಧ ಪಡೆದರು. ಪರಿಣಾಮವಾಗಿ ಅವರಲ್ಲಿದ್ದ ಕ್ಯಾನ್ಸರ್‌ ಗಡ್ಡೆಗಳು ಕರಗಿ ಹೋಗಿದ್ದು ಅವರು ಚೇತರಿಸಿಕೊಂಡಿದ್ದಾರೆ.

ಔಷಧ ಹೇಗೆ ಕೆಲಸ ಮಾಡುತ್ತದೆ?

ದೊಸ್ಟಾರ್ಲಿಮ್ಯಾಬ್ ಔಷಧವನ್ನು 6 ತಿಂಗಳವರೆಗೂಮೂರು ವಾರಗಳಿಗೆ ಒಮ್ಮೆ ನೀಡಲಾಗಿತ್ತು. ಇವು ಕ್ಯಾನ್ಸರ್‌ ಕಣಗಳನ್ನು ನಾಶ ಮಾಡಿದ್ದು, ಯಾವುದೇ ಅಡ್ಡ ಪರಿಣಾಮ ಉಂಟು ಮಾಡಿಲ್ಲ. ಹಾಗೇ ಕ್ಯಾನ್ಸರ್‌ ದೇಹದ ಬೇರೆ ಭಾಗಗಳಿಗೂ ವ್ಯಾಪಿಸಿಲ್ಲ ಎಂಬುದು ಪ್ರಾಯೋಗಿಕ ಪರೀಕ್ಷೆ ಮೂಲಕ ಖಚಿತವಾಯಿತು. ಈ ಔಷಧಿ ಕ್ಯಾನ್ಸರ್‌ ಕಣಗಳನ್ನು ಮಾತ್ರ ನಾಶಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಔಷಧ ವೆಚ್ಚ ಎಷ್ಟು?

ಸರ್ಕಾರಗಳು ಈ ಔಷಧಿ ಬಳಕೆಗೆ ಅನುಮತಿ ನೀಡಿದರೆ, ಇದರ ವೆಚ್ಚ ದುಬಾರಿಯಾಗಲಿದೆ. ಒಂದು ಡೋಸ್‌ದೊಸ್ಟಾರ್ಲಿಮ್ಯಾಬ್ ಔಷಧಿಗೆ ₹ 8.55 ಲಕ್ಷ (11,000 ಅಮೆರಿಕ ಡಾಲರ್‌) ವೆಚ್ಚವಾಗಲಿದೆ. ಒಂದು ಅಂದಾಜಿನ ಪ್ರಕಾರ ಇಡೀ ಚಿಕಿತ್ಸೆಗೆ ₹ 70 ಲಕ್ಷ ಖರ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕವಾಗಿ ಔಷಧಿ ಬಳಕೆ ಯಾವಾಗ?

ಸದ್ಯ ಸಣ್ಣ ಪ್ರಮಾಣದಲ್ಲಿ ಔಷಧಿಯನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ಚೇತರಿಸಿಕೊಂಡಿರುವ ರೋಗಿಗಳ ಆರೋಗ್ಯವನ್ನುಮುಂದಿನ ಹಂತಗಳಲ್ಲಿ ಅಧ್ಯಯನ ಮಾಡಬೇಕು. ನಂತರ ದೊಡ್ಡ ಪ್ರಮಾಣದಲ್ಲಿ ಮತ್ತಷ್ಟು ಪ್ರಯೋಗಗಳನ್ನು ನಡೆಸಿ ದತ್ತಾಂಶಗಳನ್ನು ಸಂಗ್ರಹಿಸಬೇಕು. ನಂತರ ಬಳಕೆಗೆ ಯೋಗ್ಯ ಎಂದು ತಜ್ಞರು ಒಪ್ಪಿದ ನಂತರವೇ ಸಾರ್ವಜನಿಕಬಳಕೆಗೆ ನೀಡಲಾಗುವುದು ಎಂದು ಮೆಮೊರಿಯಲ್‌ ಸ್ಲೋನ್‌ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT