ಮಂಗಳವಾರ, ಮಾರ್ಚ್ 28, 2023
30 °C

ಕೋವಿಡ್‌ನಿಂದ ಗುಣವಾಗಲು ನೆರವಾಗುವುದೇ ಅಶ್ವಗಂಧ? ಭಾರತ, ಬ್ರಿಟನ್‌ ಜಂಟಿ ಅಧ್ಯಯನ  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವುದನ್ನು ಉತ್ತೇಜಿಸುವಲ್ಲಿ ಅಶ್ವಗಂಧದ ಬಳಕೆಯ ಕುರಿತು ಅಖಿಲ ಭಾರತ ಆಯುರ್ವೇದ ಸಂಸ್ಥೆ ಮತ್ತು ಬ್ರಿಟನ್‌ನ ‘ಲಂಡನ್‌ ಸ್ಕೂಲ್‌ ಆಫ್‌ ಹೈಜೀನ್‌ ಆ್ಯಂಡ್‌ ಟ್ರೋಪಿಲ್‌ ಮೆಡಿಸಿನ್‌‘ ಜಂಟಿಯಾಗಿ ಅಧ್ಯಯನ ನಡೆಸಲಿವೆ. ಈ ಮೂಲಕ ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಯು ಮಹತ್ತರ ಮೈಲಿಗಲ್ಲು ಸಾಧಿಸಿದೆ. 

ಅಧ್ಯಯನದ ಒಪ್ಪಂದಕ್ಕೆ  ಅಖಿಲ ಭಾರತ ಆಯುರ್ವೇದ ಸಂಸ್ಥೆ ಮತ್ತು ಬ್ರಿಟನ್‌ನ ‘ಲಂಡನ್‌ ಸ್ಕೂಲ್‌ ಆಫ್‌ ಹೈಜೀನ್‌ ಆ್ಯಂಡ್‌ ಟ್ರೋಪಿಲ್‌ ಮೆಡಿಸಿನ್‌‘ ಸಂಸ್ಥೆಗಳೆರಡೂ ಒಡಂಬಡಿಕೆ ಮಾಡಿಕೊಂಡಿವೆ. ಬ್ರಿಟನ್‌ನ ಲೀಸೆಸ್ಟರ್, ಬರ್ಮಿಂಗ್‌ಹ್ಯಾಮ್‌ ಮತ್ತು ಲಂಡನ್‌ನಲ್ಲಿ (ಸೌಥಾಲ್ ಮತ್ತು ವೆಂಬ್ಲೆ) 2,000 ಜನರ ಮೇಲೆ ಅಶ್ವಗಂಧದ ವೈದ್ಯಕೀಯ ಪ್ರಯೋಗಗಳು ನಡೆಯಲಿವೆ ಎಂದು ಆಯುಷ್‌ ಇಲಾಖೆ ತಿಳಿಸಿದೆ.

ಅಶ್ವಗಂಧ (ವಿಥಾನಿಯಾ ಸೊಮ್ನಿಫೆರಾ), ಸಾಂಪ್ರದಾಯಿಕ ಭಾರತೀಯ ಮೂಲಿಕೆಯಾಗಿದ್ದು, ದೇಹದ ಶಕ್ತಿಯನ್ನು ವೃದ್ಧಿಸಲು, ಒತ್ತಡವನ್ನು ತಗ್ಗಿಸಲು, ಪ್ರತಿರೋಧ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ.

ಎರಡೂ ಸಂಸ್ಥೆಗಳು ನಡೆಸುತ್ತಿರುವ ಈ ಪ್ರಯೋಗವೇನಾದರೂ ಯಶಸ್ವಿಯಾದರೆ ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಯ ಮೂಲಿಕೆಯೊಂದಕ್ಕೆ ವೈಜ್ಞಾನಿಕ ಮಾನ್ಯತೆ ದೊರೆತಂತಾಗುತ್ತದೆ. ವಿವಿಧ ಕಾಯಿಲೆಗಳಲ್ಲಿ ಅಶ್ವಗಂಧದ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಹಲವಾರು ಅಧ್ಯಯನಗಳು ನಡೆದಿವೆ. ಕೋವಿಡ್ -19 ರೋಗಿಗಳ ಮೇಲೆ ಅದರ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಲು ಆಯುಷ್‌ ಸಚಿವಾಲಯವು ಇದೇ ಮೊದಲ ಬಾರಿಗೆ ವಿದೇಶಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಅಶ್ವಗಂಧವು (ವಿಥಾನಿಯಾ ಸೊಮ್ನಿಫೆರಾ) ಭಾರತದ ಸಾಂಪ್ರದಾಯಿಕ ಗಿಡಮೂಲಿಕೆಯಾಗಿದೆ. ಇದು ದೇಹದ ಶಕ್ತಿ ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ವೃದ್ದಿಗೊಳಿಸುತ್ತದೆ ಮತ್ತು ಒತ್ತಡವನ್ನು ತಗ್ಗಿಸಲು ಸಹಕಾರಿಯಾಗಿದೆ. ಒಂದು ವೇಳೆ ಈ ಪ್ರಯೋಗ ಸಫಲವಾದರೆ, ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಯ ಮೂಲಿಕೆಯೊಂದಕ್ಕೆ ವೈಜ್ಞಾನಿಕ ಮಾನ್ಯತೆ ದೊರೆತಂತಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು