ಒಂದು ಕಾಲದಲ್ಲಿ ಯೋಗ ಎಂದರೆ ಒಂದು ವಿಚಿತ್ರವಾದ ಅಭ್ಯಾಸ ಮತ್ತು ಅದು ಕೆಲವರಿಗೆ ಮಾತ್ರ ಸೇರಿದ್ದು ಎಂಬ ಭಾವನೆಯಿತ್ತು. ಆದರೆ ಇಂದು ಜಗತ್ತಿನ ಮೂರನೇ ಒಂದಕ್ಕಿಂತಲೂ ಹೆಚ್ಚು ಜನಸಂಖ್ಯೆ ಯೋಗಾಭ್ಯಾಸವನ್ನು ಮಾಡುತ್ತಿದೆ. ಹೆಚ್ಚು ಹೆಚ್ಚು ಜನರು ಯೋಗವನ್ನು ಜೀವನದ ಶೈಲಿಯ ಭಾಗವೆಂದು ಸ್ವೀಕರಿಸುವಂತೆ ಪ್ರೋತ್ಸಾಹಿಸಬೇಕು.

ಯೋಗದಿಂದ ನಾವು ಆರೋಗ್ಯವಾಗಿರುತ್ತೇವೆ, ಸಂತೋಷವಾಗಿರುತ್ತೇವೆ, ಶಾಂತಿಯಿಂದ ಇರುತ್ತೇವೆ. ಶಾಂತಿಯುತವಾದ ಸಮಾಜಕ್ಕಾಗಿ, ಶಾಂತಿಯುತವಾದ ಜಗತ್ತಿಗಾಗಿ ನಾವು ಶ್ರಮಿಸಬೇಕು. ಇದರ ಮೂಲವೆಂದರೆ ವೈಯಕ್ತಿಕ ಶಾಂತಿ. ಒಬ್ಬರು ಉದ್ರಿಕ್ತತೆಯಿಂದ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ, ಯೋಗವು ಈ ಸ್ಥಿತಿಯಿಂದ ಒಬ್ಬರನ್ನು ಉತ್ಥಾಪಿಸಬಲ್ಲದು. ಬಲಹೀನ ಸ್ಥಿತಿಯಿಂದ, ನಿರಾಶಾದಾಯಕವಾದ ಸ್ಥಿತಿಯಿಂದ ಸ್ಥಿರವಾದ, ಸಂತೋಷದಿಂದ ತುಂಬಿದಂತಹ ಸ್ಥಿತಿಗೆ ಒಬ್ಬರನ್ನು ಯೋಗವು ಕೊಂಡೊಯ್ಯುತ್ತದೆ. ಸಂತೋಷದಿಂದ ತುಂಬಿದ ವ್ಯಕ್ತಿಗಳಿಂದಾಗಿ ಉತ್ತಮ ಸಮುದಾಯಗಳುಂಟಾಗುತ್ತವೆ.

ಇಂದು ಜಗತ್ತಿನಲ್ಲಿ ಅತೀ ಸಂಕಷ್ಟಕರವಾದ ಸಮಯಗಳನ್ನು ಎದುರಿಸುತ್ತಿದೆ. ಸಾಂಕ್ರಾಮಿಕದ ನಂತರ ಯುದ್ಧ, ಹಣದುಬ್ಬರ, ಇವೆಲ್ಲವೂ ಜನರ ಜೀವನಗಳ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ಹೆಚ್ಚಿರುವ ಸಂಕಷ್ಟಗಳ ಸಮಯಗಳಲ್ಲಿ ಆಂತರಿಕ ಬಲವನ್ನು ಕಂಡುಕೊಳ್ಳುವ ದಾರಿಯೆಂದರೆ ಯೋಗ.

ಯೋಗದಿಂದ ಸಂಕಷ್ಟಕರವಾದ ಸಮಯವನ್ನು ದಾಟಬಹುದು. ಹೆಚ್ಚು ಸೃಜನಶೀಲರಾಗಬಹುದು. ಹೆಚ್ಚು ಉತ್ಪಾದನೆಯನ್ನು ಹೊರತರಬಹುದು. ಯೋಗದ ಲಾಭಗಳನ್ನು ಸಮಾಜದ ಎಲ್ಲಾ ವರ್ಗದವರೊಂದಿಗೂ, ಎಲ್ಲಾ ಕ್ಷೇತ್ರದವರೊಂದಿಗೂ ಹಂಚಿಕೊಳ್ಳೋಣ. ಎಲ್ಲರೂ ಹೆಚ್ಚು ಭಾಗವಹಿಸುವಂತೆ ಮಾಡೋಣ. ಒಂದು ಮುಖ್ಯವಾದ ವಿಷಯವೆಂದರೆ, ನೈಜ ಯೋಗದ ಅಭ್ಯಾಸವನ್ನೇ ಮಾಡೋಣ. ಇದರಿಂದ ಚೈತನ್ಯದ ಉನ್ನತ ಹಂತಗಳ ಬಾಗಿಲು ನಮಗೆಲ್ಲರಿಗೂ ತೆರೆಯುತ್ತದೆ. ಯೋಗವು ನಮಗೆ ಜ್ಞಾನದ ಅಪಾರ ಸಂಪತ್ತನ್ನು ಕೊಡುತ್ತದೆ. ಯೋಗವನ್ನು ಒಂದು ಕುಚೇಷ್ಟೆಯ ವ್ಯಾಯಾಮವಾಗಿ ಮಾಡುವುದು ಬೇಡ. ಯೋಗ ಎಂದರೆ ಒಂದು ರೀತಿಯ ವ್ಯಾಯಾಮವಲ್ಲ! ಯೋಗವು ದೈವತ್ವದೆಡೆಗೆ ನಾವು ಇಡುವ ಒಂದು ಹೆಜ್ಜೆ. ನಮ್ಮ ಊಹೆಗೂ ನಿಲುಕದಂತಹ ಜಗತ್ತಿನ ಬಾಗಿಲನ್ನು ತೆರೆದು, ಜೀವನಕ್ಕೆ ಹೊಸ ಆಯಾಮಗಳನ್ನು, ಸಂತೋಷವನ್ನು, ಪ್ರೇಮವನ್ನು, ಪ್ರಶಾಂತತೆಯನ್ನು ತಂದುಕೊಟ್ಟು, ಜೀವನದಲ್ಲಿ ಸಕಾರಾತ್ಮಕ ಕಂಪನಗಳನ್ನು ತರುತ್ತದೆ. ನಮ್ಮ ಊಹೆಗೂ ನಿಲುಕದಷ್ಟು ಲಾಭಗಳು ಯೋಗ ಎಲ್ಲರಿಗೂ ನೀಡುತ್ತದೆ.

ನಮ್ಮ ದೇಹ ಬಲಿಷ್ಠವಾಗುತ್ತವೆ. ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಓದುವುದು ಪ್ರಯತ್ನರಹಿತವಾದ ಕಾರ್ಯವಾಗುತ್ತದೆ. ಬುದ್ಧಿ ತೀಕ್ಷ್ಣವಾಗುತ್ತದೆ, ಹೊಳೆಯುತ್ತದೆ, ಸ್ಮೃತಿ ತೀಕ್ಷ್ಣವಾಗುತ್ತದೆ. ನಮ್ಮ ಕಂಪನಗಳು ಸಕಾರಾತ್ಮಕವಾಗುತ್ತವೆ. ಇಂದು ಜಗತ್ತಿನಲ್ಲಿರುವ ಒತ್ತಡದಿಂದಾಗಿ ಮಾನಸಿಕ ಆರೋಗ್ಯವು ದೊಡ್ಡ ಸವಾಲಾಗಿ ಪರಿಣಮಿಸಿದೆ. ಖಿನ್ನತೆ, ಆತಂಕ, ಭಯ ಈ ನಕಾರಾತ್ಮಕ ಭಾವನೆಗಳು ಮಾನವನ ಜೀವನವನ್ನು ಆವರಿಸಿಬಿಟ್ಟಿವೆ. ಯೋಗ ಮಾನವತೆಗೆ ಕೊಡಲಾಗಿರುವ ಒಂದು ಉಡುಗೊರೆ, ಒಂದು ವರ. ಯೋಗದಿಂದ ಸವಾಲಿನಿಂದ ಕೂಡಿರುವ ಸಮಯಗಳನ್ನು ದಾಟುವ ಬಲ ಬರುತ್ತದೆ. ಯಾವ ಪೂರ್ವಾಗ್ರಹಗಳು ಇಲ್ಲದೆಯೇ ಯೋಗದ ಅಭ್ಯಾಸವನ್ನು ಮಾಡಬೇಕು. ಯೋಗವು ಯಾವ ರೀತಿಯಲ್ಲೂ ಒಬ್ಬರ ನಂಬಿಕೆಗಳಿಗೆ ಅಡ್ಡಿಬರುವುದಿಲ್ಲ. ಒಂದು ಬರ್ಗರ್ ಅನ್ನು ತಿನ್ನುತ್ತಿದ್ದರೆ, ಅದು ನಿಮ್ಮ ಧರ್ಮಕ್ಕೆ ಅಡ್ಡಿ ಬರುವುದಿಲ್ಲ. ಒಂದು ಕಾರನ್ನು ಚಲಾಯಿಸುತ್ತಿದ್ದರೆ , ಅದು ಯಾವ ಬ್ರಾಂಡಿನ ಕಾರೇ ಆಗಿರಲಿ, ಅದು ನಿಮ್ಮ ಧರ್ಮಕ್ಕೆ ಅಡ್ಡಿಯಾಗಿ ಬರುವುದಿಲ್ಲ. ಯೋಗ ನಿಮ್ಮ ಧರ್ಮದೊಡನೆಯ ಕದನಕ್ಕಿಳಿಯುವುದಿಲ್ಲ. ಯೋಗವು ನಿಮ್ಮ ವಿಶ್ವಾಸವನ್ನು ಮತ್ತಷ್ಟು ದೃಢಪಡಿಸುತ್ತದೆ.

ಯೋಗವನ್ನು ಒಂದು ವಿಜ್ಞಾನದಂತೆ ಕಾಣಬೇಕು. ಯೋಗದಿಂದ ಜನರೊಡನೆ ನಮ್ಮ ಸಂಬಂಧ ಸುಧಾರಿಸುತ್ತದೆ. ಜನರೊಡನೆ ನಾವು ವರ್ತಿಸುವ ರೀತಿ ಬದಲಿಸುತ್ತದೆ. ಆದ್ದರಿಂದ ಯೋಗವು ಒಂದು ಮಾನಸಿಕ ವಿಜ್ಞಾನ, ವರ್ತನೆಯ ವಿಜ್ಞಾನ.

ನಮ್ಮ ಭಾವನೆಗಳು ಯೋಗದಿಂದ ಸ್ಥಿರವಾಗುತ್ತವೆ, ನಮ್ಮ ಸ್ವಯಂಸ್ಫುರಣಾ ಶಕ್ತಿಯು ಬಲಿಷ್ಠವಾಗುತ್ತಾ ಹೋಗುತ್ತದೆ. ಪ್ರತಿಯೊಂದು ವ್ಯಾಪಾರಿಗೂ, ಉದ್ಯಮಿಗೂ ಸ್ವಯಂಸ್ಫುರಣಾ ಶಕ್ತಿಯಿರಬೇಕು. ಯೋಗದಿಂದ ನಿಮಗೆ ಇದು ಸಿಗುತ್ತದೆ. ಯೋಗವು ಮಾನವತೆಗೆ ನೀಡಲಾಗಿರುವ ಒಂದು ವರ. ಯಾರೂ ಯೋಗದಿಂದ ವಂಚಿತರಾಗಿರಬಾರದು. ಎಲ್ಲರಿಗೂ ಸಂತೋಷವಾಗಿರುವ ಹಾಗೂ ಶಾಂತಿಯಿಂದಿರುವ ಹಕ್ಕಿದೆ. ಎಲ್ಲರಿಗೂ ಆಳವಾದ ಪ್ರೇಮದಲ್ಲಿರುವ ಹಕ್ಕಿದೆ. ಆರೋಗ್ಯದಿಂದಿರುವ ಹಕ್ಕಿದೆ. ನಾವೇ ಆಗಿರುವ ಪ್ರೇಮದ ಸಾಗರದೊಳಗೆ ಹೊಕ್ಕುವ ಹಕ್ಕಿದೆ. ನಿಜವಾದ ಯೋಗದ ಪರಂಪರೆಗಳ ಮೇಲೇ ನಮ್ಮ ಗಮನವಿರಲಿ. ಯೋಗದ ಒಳಿತು ಪ್ರತಿಯೊಬ್ಬರ ಮನೆಬಾಗಿಲಿಗೂ ತಲುಪುವಂತಾಗಲಿ. ಎಲ್ಲರೂ ಸಂತೋಷವಾಗಿರಲಿ. ಈ ಭೂಮಿಯ ನಾವು ಇರುವುದರ ಸಂಭ್ರಮವನ್ನು ಆಚರಿಸೋಣ. ವೈವಿಧ್ಯತೆಯಲ್ಲೂ ಸಾಮರಸ್ಯವಿರಲಿ. ನಾವೆಲ್ಲರೂ ವಿಭಿನ್ನರಾದವರು. ನಾವೆಲ್ಲರೂ ಬೇರೆ ಬೇರೆ ಭಾಷೆಗಳಿಗೆ ಸೇರಿದವರು, ವಿವಿಧ ಧೋರಣೆಗಳನ್ನುಳ್ಳವರು, ವಿವಿಧ ರೀತಿಯ ಇಷ್ಟವಾದ, ಇಷ್ಟವಿಲ್ಲದ ವಿಷಯಗಳನ್ನು ಹೊಂದಿರುವವರು. ಆದರೆ ಒಂದು ನಮ್ಮನ್ನು ಖಂಡಿತವಾಗಿಯೂ ಒಗ್ಗೂಡಿಸಬಲ್ಲದು. ಅದೇ ಮಾನವೀಯ ಮೌಲ್ಯಗಳು.

ಮಾನವೀಯ ಮೌಲ್ಯಗಳಲ್ಲಿ ನಾವು ಅರಳುವಂತೆ ಮಾಡುವ ಅತ್ಯುತ್ತಮ ಸಾಧನವೆಂದರೆ ಯೋಗ. ಯೋಗದಿಂದ ಒತ್ತಡ ಮುಕ್ತರಾಗುತ್ತೇವೆ, ದೈಹಿಕ ದಣಿವಿನ ನಿವಾರಣೆಯಾಗುತ್ತದೆ, ಭಾವನಾತ್ಮಕ ತಳಮಳದಿಂದ ಹೊರಬರುತ್ತೇವೆ ಮತ್ತು ಮಾನಸಿಕ ಸ್ಪಷ್ಟತೆಯನ್ನೂ ತರುತ್ತದೆ. ಎಲ್ಲಾ ಯೋಗದ ಶಿಕ್ಷಕರಿಗೂ ‘ಯೋಗ ದಿನಾಚರಣೆ‘ಯ ಶುಭಾಶಯಗಳು. ಇದು ನಿಮ್ಮ ದಿನ. ಜನಸಾಮಾನ್ಯರಿಗೂ ಯೋಗದ ಒಳಿತನ್ನು ತರಲು ಯೋಗ ಶಿಕ್ಷಕರಾದ ನೀವು ಶ್ರಮಿಸುತ್ತಿರುವಿರಿ. ಇದನ್ನು ಮುಂದುವರಿಸುತ್ತಿರಿ. ಹೆಚ್ಚು ಹೆಚ್ಚು ಜನರು ಯೋಗ ಶಿಕ್ಷಕರಾಗಿ, ಇನ್ನಷ್ಟು ಜನರೊಂದಿಗೆ ಯೋಗದ ಒಳಿತನ್ನು, ಜ್ಞಾನವನ್ನು ಎಲ್ಲರೊಂದಿಗೂ ಹಂಚಿಕೊಳ್ಳುವಂತಾಗಲಿ. ಎಲ್ಲರೂ ಒಂದಾಗಿ ಸೇರಿ ಒತ್ತಡ-ಮುಕ್ತ ಸಮಾಜವನ್ನು, ಸಂತೋಷದಿಂದ ತುಂಬಿರುವಂತಹ ಸಮಾಜವನ್ನು ಸೃಷ್ಟಿಸೋಣ. ಎಲ್ಲರಿಗೂ ಶುಭವಾಗಲಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.