ಆಧುನಿಕ ಜೀವನ ಶೈಲಿಯ ಭಾಗವಾಗಿ ‘ಮೈಕ್ರೋವೇವ್ ಓವನ್’ ಒಂದು ಅಗತ್ಯ ಅಡುಗೆ ಸಾಧನವಾಗಿ ಮಾರ್ಪಟ್ಟಿದೆ. ಅಗತ್ಯಕ್ಕೆ ತಕ್ಕಂತೆ ವೇಗವಾಗಿ ಆಹಾರವನ್ನು ಬೆಚ್ಚಗಾಗಿಸುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಸಹಕಾರಿಯಾಗಲಿದೆ. ಆದರೆ ಮೈಕ್ರೋವೇವ್ ಓವನ್ನಲ್ಲಿ ತಯಾರಿಸಿದ ಅಥವಾ ಬೆಚ್ಚಗಾಗಿಸಿದ ಆಹಾರ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದು ಬಹಳ ಮುಖ್ಯ.

ಮೈಕ್ರೋವೇವ್ ಹಿಂದಿನ ವಿಜ್ಞಾನ:

ಮೈಕ್ರೋವೇವ್ ಓವನ್, ವಿದ್ಯುತ್ಕಾಂತೀಯ ತರಂಗಗಳ ಮೂಲಕ ಆಹಾರದಲ್ಲಿರುವ ನೀರಿನ ಅಣುಗಳನ್ನು ಕಂಪಿಸುವಂತೆ ಮಾಡುತ್ತದೆ. ಈ ಕಂಪನದಿಂದ ಉಷ್ಣತೆ ಉತ್ಪತ್ತಿಯಾಗಿ ಆಹಾರ ಬೆಚ್ಚಗಾಗುತ್ತದೆ. ಈ ಪ್ರಕ್ರಿಯೆಯು ಆಹಾರದ ರಾಸಾಯನಿಕ ಸಂಯೋಜನೆಯನ್ನು ಬದಲಾಯಿಸುವುದಿಲ್ಲ ಮತ್ತು ವಿಕಿರಣವನ್ನು ಆಹಾರದಲ್ಲಿ ಉಳಿಸುವುದಿಲ್ಲ. ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ, ಮೈಕ್ರೋವೇವ್ ಓವನ್ ಸುರಕ್ಷಿತ ಮತ್ತು ಪರಿಣಾಮಕಾರಿ ವಿಧಾನವಾಗಿದೆ.

ಪೌಷ್ಟಿಕಾಂಶಗಳ ಸಂರಕ್ಷಣೆ:

ಅನೇಕ ಅಧ್ಯಯನಗಳು ಮೈಕ್ರೋವೇವ್ ಓವನ್ ಪೌಷ್ಟಿಕಾಂಶ ವ್ಯಯವಾಗದಂತೆ ಉಳಿಸಿಕೊಳ್ಳುತ್ತದೆ ಎಂದು ತಿಳಿಸಿವೆ. ಸಾಂಪ್ರದಾಯಿಕ ಅಡುಗೆ ವಿಧಾನಗಳಿಗಿಂತ ಕಡಿಮೆ ಸಮಯ ಮತ್ತು ಕಡಿಮೆ ನೀರನ್ನು ಬಳಸುವುದರಿಂದ ಜೀವಸತ್ವ ಮತ್ತು ಖನಿಜಗಳು ಆಹಾರದಲ್ಲಿಯೇ ಉಳಿಯುತ್ತವೆ. ವಿಶೇಷವಾಗಿ ತರಕಾರಿಗಳಲ್ಲಿರುವ ವಿಟಮಿನ್ ಸಿ ಮತ್ತು ಬಿಗಳು ಉತ್ತಮವಾಗಿ ಸಂರಕ್ಷಿತವಾಗುತ್ತವೆ. ಆದಾಗ್ಯೂ, ಅತಿಯಾಗಿ ಬೆಚ್ಚಗಾಗಿಸಿದರೆ ಪೌಷ್ಟಿಕಾಂಶಗಳು ನಾಶವಾಗಬಹುದು ಎಂದು ಅಧ್ಯಯನಗಳು ಸೂಚಿಸುತ್ತದೆ.

ಆರೋಗ್ಯಕರ ಬಳಕೆಯ ಮಾರ್ಗಗಳು:

ಮೈಕ್ರೋವೇವ್ ಓವನ್ನಲ್ಲಿ ಅಡುಗೆ ತಯಾರಿಸುವಾಗ ಸೂಕ್ತ ಪಾತ್ರೆಗಳನ್ನು ಬಳಸುವುದು ಅತಿ ಮುಖ್ಯ. ಗಾಜಿನ ಮತ್ತು ಸೆರಾಮಿಕ್ ಪಾತ್ರೆಗಳು ಅತ್ಯುತ್ತಮವಾಗಿವೆ. ಪ್ಲಾಸ್ಟಿಕ್ ಪಾತ್ರೆ ಬಳಸುವುದರಿಂದ ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಸೇರುವ ಅಪಾಯವಿದೆ. ಆಹಾರವನ್ನು ಬೆಚ್ಚಗಾಗಿಸುವಾಗ ಮಧ್ಯೆ ಕಲಸಬೇಕು. ಇದರಿಂದ ಆಹಾರವು ಸಂಪೂರ್ಣವಾಗಿ ಬಿಸಿಯಾಗುತ್ತದೆ. ತಾಜಾ ತರಕಾರಿಗಳನ್ನು ಆವಿಯಲ್ಲಿ ಬೇಯಿಸಲು ಮೈಕ್ರೋವೇವ್ ಓವನ್ ಅತ್ಯುತ್ತಮ ಸಾಧನವಾಗಿದೆ.

ತಪ್ಪಿಸಬೇಕಾದ ವಿಷಯಗಳು:

ಲೋಹದ ಪಾತ್ರೆಗಳನ್ನು ಎಂದಿಗೂ ಬಳಸಬಾರದು.

ಮುಚ್ಚಿದ ಪಾತ್ರೆಗಳಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟಗೊಳ್ಳಬಹುದು.

ಮಗುವಿಗೆ ನೀಡುವ ಹಾಲನ್ನು ಮೈಕ್ರೋವೇವ್ ಓವನ್ನಲ್ಲಿ ಬೆಚ್ಚಗಾಗಿಸುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಕಾರಣ ಹಾಲು ಹೆಚ್ಚು ಬಿಸಿಯಾಗುವ ಸಾಧ್ಯತೆ ಇರುತ್ತದೆ.

ಆಹಾರವನ್ನು ಪದೇ ಪದೇ ಅತಿಯಾಗಿ ಬೆಚ್ಚಗಾಗಿಸುವುದು ಅಷ್ಟು ಸೂಕ್ತವಲ್ಲ. ಪೋಷಕಾಂಶಗಳ ನಷ್ಠದ ಸಾಧ್ಯತೆಯೂ ಇರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೈಕ್ರೋವೇವ್ನಲ್ಲಿ ಇಟ್ಟ ಆಹಾರವು ಸರಿಯಾದ ರೀತಿಯಲ್ಲಿ ಬಳಸಿದರೆ ಆರೋಗ್ಯಕರ ಮತ್ತು ಸುರಕ್ಷಿತವಾಗಿದೆ. ಸೂಕ್ತ ಪಾತ್ರೆಗಳನ್ನು ಬಳಸುವುದು, ಅತಿಯಾಗಿ ಬೆಚ್ಚಗಾಗಿಸದಿರುವುದು ಮತ್ತು ತಾಜಾ ಆಹಾರಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ.

ಲೇಖಕರು: ಡಾ. ಪೂಜಾ ಪಿಳ್ಳೈ, ಸಲಹೆಗಾರರು – ಇಂಟರ್ನಲ್ ಮೆಡಿಸಿನ್, ಆಸ್ಟರ್ CMI ಆಸ್ಪತ್ರೆ, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.