ಅಂಗಾಂಗ ದಾನ ಎಂದರೆ ಒಬ್ಬ ವ್ಯಕ್ತಿಯು ತನ್ನ ಅಂಗಗಳನ್ನು ಅಥವಾ ಅಂಗಾಂಶಗಳನ್ನು ಇನ್ನೊಬ್ಬ ವ್ಯಕ್ತಿಗೆ ನೀಡುವ ಪ್ರಕ್ರಿಯೆ. ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಯ ಜೀವ ಉಳಿಸುವಲ್ಲಿ ಅಂಗಾಂಗ ದಾನವು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟವರ ಅಂಗಾಂಗಗಳನ್ನು ದಾನ ನೀಡಿ ಅಗತ್ಯ ಇರುವವರಿಗೆ ಸುಲಭವಾಗಿ ಕಸಿ ಮಾಡಿ ಅವರ ಜೀವ ಉಳಿಸಬಹುದು. ಆರೋಗ್ಯವಂತರೂ ತಮ್ಮ ಕೆಲ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ದಾನ ನೀಡಬಹುದು. ಆದರೆ, ಭಾರತದಲ್ಲಿ ಈ ಪರಿಕಲ್ಪನೆಯಾಗಲಿ ಅಥವಾ ಮನೋಭಾವನೆಯಾಗಲಿ ಹೆಚ್ಚು ಜನಪ್ರಿಯವಾಗಿಲ್ಲ.

ದೇಶದಲ್ಲಿ ಪ್ರತಿವರ್ಷ ಅಂಗಾಂಗ ಕಸಿ ಎದುರು ನೋಡುತ್ತಲೇ ಐದು ಲಕ್ಷದಷ್ಟು ಜನರು ಸಾವಿಗೆ ಶರಣಾಗುತ್ತಿದ್ದಾರೆ. ಇದೊಂದು ತಪ್ಪಿಸಬಹುದಾದ ದುರಂತವಾಗಿದೆ. ಅಂಗಾಂಗಗಳ ಅಗತ್ಯ ಹಾಗೂ ಅವುಗಳ ಲಭ್ಯತೆ ನಡುವೆ ಅತಿದೊಡ್ಡ ಕಂದರ ಇದೆ. ಈ ಅಂತರ ನಿವಾರಿಸುವುದು ಸದ್ಯದ ಜರೂರು ಆಗಿದೆ.

ಭಾರತದಲ್ಲಿ ಅಂಗಾಂಗ ದಾನ ನೀಡುವ ದರವು ಪ್ರತಿ 10 ಲಕ್ಷ ಜನಸಂಖ್ಯೆಗೆ ಕೇವಲ 0.65 ರಷ್ಟು ಇದೆ. ಇದು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಮಟ್ಟದ ದರವಾಗಿದೆ. ಸ್ಪೇನ್ ಹಾಗೂ ಕ್ರೊಯೆಷಿಯಾದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 32 ರಿಂದ 36 ಅಂಗಾಂಗ ದಾನಿಗಳು ಇದ್ದಾರೆ. ಭಾರತದಲ್ಲಿಯೂ ಈ ಮಟ್ಟ ತಲುಪಬೇಕಾಗಿದೆ. ಅಂಗಾಂಗ ದಾನದ ಮಹತ್ವದ ಬಗೆಗಿನ ತಿಳಿವಳಿಕೆಯು ನಮ್ಮಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿ ಇದೆ. ಅಂಗಾಂಗ ದಾನದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಅಗತ್ಯವು ಈಗ ಹಿಂದಿಗಿಂತಲೂ ಹೆಚ್ಚಿದೆ.

ಬಹುತೇಕ ಅಂಗಾಂಗ ದಾನಗಳು ಹಿಂಜರಿಕೆ ಪ್ರವೃತ್ತಿ ಮತ್ತು ಅದನ್ನು ಕಾರ್ಯಗತಗೊಳಿಸುವ ಹಂತದಲ್ಲಿ ಕಳೆದುಹೋಗುತ್ತಿವೆ.
ಸಾಮಾಜಿಕ ಸಂಗತಿಗಳು ಮತ್ತು ತಿಳಿವಳಿಕೆ ಕೊರತೆಯಿಂದ ನಮ್ಮ ಸಮಾಜದಲ್ಲಿ ಅಂಗಾಂಗ ದಾನಕ್ಕೆ ಹೆಚ್ಚಿನ ಅಡೆತಡೆಗಳಿವೆ.

ಹೃದಯ, ಯಕೃತ್ತು, ಮೂತ್ರಪಿಂಡಗಳು, ಶ್ವಾಸಕೋಶಗಳು, ಮೆದೊಜ್ಜೀರಕ ಗ್ರಂಥಿ ಮತ್ತು ಇತರ ಅಂಗಗಳ ದಾನದ ಮೂಲಕ ಒಬ್ಬ ಅಂಗಾಂಗ ದಾನಿಯು ತನ್ನ ಸಾವಿನ ನಂತರ ಎಂಟು ಜನರ ಜೀವಗಳನ್ನು ಉಳಿಸಬಹುದು ಎಂಬ ಕಟು ಸತ್ಯವು ಬಹುತೇಕ ಕುಟುಂಬಗಳಿಗೆ ತಿಳಿದಿಲ್ಲ. ಸಾವಿನ ನಂತರ ಅಂಗಗಳನ್ನು ದಾನ ನೀಡುವ ಅಥವಾ ಅಂಗಾಂಗ ಕಸಿ ಉದ್ದೇಶಕ್ಕೆ ಹೊರ ತೆಗೆಯುವುದರಿಂದ ದೇಹವನ್ನು ವಿರೂಪಗೊಳಿಸಲಾಗುತ್ತದೆ ಅಥವಾ ಅಂತಿಮ ವಿಧಿವಿಧಾನಗಳಿಗೆ ವ್ಯತ್ಯಯ ಉಂಟು ಮಾಡಲಿದೆ ಎಂಬುದು ಕುಟುಂಬ ಸದಸ್ಯರ ಆತಂಕವಾಗಿರುತ್ತದೆ. ವೈದ್ಯರು ನೋಂದಾಯಿತ ದಾನಿಗಳ ಜೀವ ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡದಿರಬಹುದು ಎಂಬ ಆಧಾರರಹಿತ ಭಯವು ಇನ್ನೂ ಕೆಲವರಲ್ಲಿ ಮನೆ ಮಾಡಿರುತ್ತದೆ. ಈ ತಿಳಿವಳಿಕೆಯ ಕೊರತೆ ಮತ್ತು ಸಾವಿನ ಸುತ್ತ ಆಳವಾಗಿ ಬೇರೂರಿರುವ ಕೆಲವು ನಂಬಿಕೆಗಳೊಂದಿಗೆ ತಳಕು ಹಾಕಿಕೊಂಡಿರುವರಿಂದ ಮೃತಪಟ್ಟವರ ಅಂಗಾಂಗ ದಾನ ದರವು ಕಡಿಮೆ ಪ್ರಮಾಣದಲ್ಲಿ ಇರುವುದಕ್ಕೆ ಮುಖ್ಯ ಕಾರಣವಾಗಿದೆ.

ಅಂಗಾಂಗ ದಾನದ ಸಕಾರಾತ್ಮಕ ಸಂಸ್ಕೃತಿ ರೂಪಿಸಲು ನಾವೆಲ್ಲ ಜೊತೆಯಾಗಿ ಮಿಥ್ಯೆಗಳನ್ನು ಜನರ ಮನಸ್ಸಿನಿಂದ ದೂರ ಮಾಡಬೇಕಾಗಿದೆ. ವ್ಯಕ್ತಿಯೊಬ್ಬನ ಸಾವಿನ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಗೆ ಜೀವ ನೀಡುವ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಬೇಕಾಗಿದೆ. ವಾಸ್ತವ ಸಂಗತಿ ಏನೆಂದರೆ, ʼಮಿದುಳು ನಿಷ್ಕ್ರಿಯಗೊಂಡಿರುವ' ಎಂದೂ ಕರೆಯಲ್ಪಡುವ ನರವೈಜ್ಞಾನಿಕ ಮಾನದಂಡಗಳನ್ನು ಬಳಸಿಕೊಂಡು ವ್ಯಕ್ತಿಯ ಮರಣವನ್ನು ದೃಢಪಡಿಸಿದ ನಂತರ ಮೃತ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಲಾಗುತ್ತದೆ.

ಆಸ್ಪತ್ರೆಯ ನೋಂದಾಯಿತ ವೈದ್ಯರ ಜೊತೆಗೆ ಮಿದುಳು ನಿಷ್ಕ್ರಿಯ ಸಾವನ್ನು ನಾಲ್ಕು ವೈದ್ಯರನ್ನು ಒಳಗೊಂಡಿರುವ ಸಮಿತಿಯು ನಿರ್ಧರಿಸುತ್ತದೆ. ಆರೋಗ್ಯ ಸೇವೆ ಒದಗಿಸುವವರ ಸಲಹೆಗಳು, ಧಾರ್ಮಿಕ ಮುಖಂಡರ ಬೋಧನೆ ಮತ್ತು ಸಮುದಾಯದ ಪ್ರಮುಖರ ಮನವೊಲಿಕೆಗಳು ಅಂಗಾಂಗ ದಾನವು ನೈತಿಕ ಮತ್ತು ಮಾನವೀಯತೆಯ ನಿರ್ಧಾರವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ನೆರವಾಗುತ್ತದೆ. ಪ್ರತಿಯೊಂದು ಪ್ರಮುಖ ಧರ್ಮವು ಜೀವ ಉಳಿಸುವುದನ್ನು ಅನುಮೋದಿಸುತ್ತದೆ. ಅಂಗಾಂಗ ದಾನ ಮಾಡುವುದನ್ನು ಸಾಮಾನ್ಯವಾಗಿ "ಬದುಕಿನ ಉಡುಗೊರೆ" ಎಂದೇ ಕರೆಯಲಾಗುತ್ತದೆ. ಮಿದುಳು ನಿಷ್ಕ್ರಿಯದಿಂದ ಉಂಟಾದ ಸಾವನ್ನು ವೈದ್ಯಕೀಯವಾಗಿ ವ್ಯಾಖ್ಯಾನಿಸಲಾದ ಜೀವನದ ಅಂತ್ಯ ಎಂದೇ ಪರಿಗಣಿಸಲಾಗುತ್ತಿದೆ. ಇಂತಹ ವ್ಯಕ್ತಿಗಳಿಂದ ಅಂಗಾಂಗ ಹೊರ ತೆಗೆಯುವುದು ಗೌರವಪೂರ್ವಕವಾಗಿ ಮತ್ತು ಕಾಳಜಿಯಿಂದ ನಡೆಸಲಾಗುತ್ತದೆ ಎಂಬ ತಿಳಿವಳಿಕೆಯನ್ನು ಜನಮಾನಸದಲ್ಲಿ ವ್ಯಾಪಕವಾಗಿ ಮೂಡಿಸಲು ಸಾರ್ವಜನಿಕ ಜಾಗೃತಿ ಅಭಿಯಾನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ.
ದಾನಿ ಕುಟುಂಬಗಳ ದುಃಖದ ಬಗ್ಗೆ ಅನುಕಂಪ ತೋರುವುದೂ ಸಹ ಮುಖ್ಯವಾಗಿರುತ್ತದೆ. ದುಃಖದ ಮಧ್ಯೆಯೂ ತಮ್ಮ ಪ್ರೀತಿಪಾತ್ರರ ಅಂಗಗಳನ್ನು ದಾನ ಮಾಡುವ ಅವರ ನಿರ್ಧಾರವು ಪರಹಿತಚಿಂತನೆಯ ವೀರೋಚಿತ ಪ್ರತಿಕ್ರಿಯೆಯಾಗಿದ್ದು ಅದನ್ನು ಗುರುತಿಸಲು ಮತ್ತು ಪ್ರಶಂಸಿಸಲು ಅರ್ಹವಾಗಿದೆ.

ಹುಟ್ಟಿನಿಂದಲೇ ಬಂದ ಅಪರೂಪದ ಕಾಯಿಲೆಯಿಂದ ಮೃತಪಟ್ಟ 39 ದಿನಗಳ ಮಗುವಿನ ಪೋಷಕರು ತಮ್ಮ ಹಸುಗೂಸಿನ ಅಂಗಗಳನ್ನು ದಾನ ಮಾಡಲು ಮತ್ತು ಇತರರ ಜೀವ ಉಳಿಸಲು ನಿರ್ಧರಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ʼಮನ್ ಕಿ ಬಾತ್ʼನಲ್ಲಿ ಶ್ಲಾಘಿಸಿದ್ದಾರೆ. ಸಾವಿನಲ್ಲೂ ಸಹ ನಮ್ಮಲ್ಲಿ ಪ್ರತಿಯೊಬ್ಬರಿಗೂ ಜೀವಗಳನ್ನು ಉಳಿಸುವ ಶಕ್ತಿ ಇದೆ ಎಂಬುದನ್ನು ಇಂತಹ ಘಟನೆಗಳು ನಮಗೆ ನೆನಪಿಸುತ್ತವೆ. ಪ್ರಧಾನ ಮಂತ್ರಿ ಅವರು ಇಂತಹ ಸಂಗತಿಗಳನ್ನು ಗಮನಿಸಿ ಶ್ಲಾಘಿಸಿರುವುದು ಮರಣದ ನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಲು ಇತರ ಅನೇಕರಿಗೆ ಪ್ರೇರಣೆ ನೀಡಲಿದೆ. ದಾನಿ ಕುಟುಂಬಗಳನ್ನು ಬಹಿರಂಗವಾಗಿ ಶ್ಲಾಘಿಸುವ ಮತ್ತು ಧನ್ಯವಾದ ಹೇಳುವ ಮೂಲಕ, ಅಂಗಾಂಗ ದಾನವು ಒಂದು ಮೌಲ್ಯಯುತ ಸಾಮಾಜಿಕ ಕೊಡುಗೆಯಾಗಿದೆ ಎಂಬ ಸ್ಪಷ್ಟ ಸಂದೇಶ ನೀಡಲಾಗಿದೆ.

ಅಂಗಾಂಗ ದಾನ ನೀಡುವ ಪ್ರವೃತ್ತಿಯು ವ್ಯಾಪಕವಾಗಿ ನಡೆಯುವುದರಿಂದ ಅದು ಸಾರ್ವಜನಿಕ ಆರೋಗ್ಯದ ಮೇಲೆ ಬೀರಲಿರುವ ಪರಿಣಾಮವು ಅಗಾಧವಾಗಿದೆ. ಪ್ರತಿಯೊಂದು ಅಂಗಾಂಗ ಕಸಿ ಯಶಸ್ವಿಯಾಗಿದೆ ಎಂದರೆ ಜೀವಮಾನವಿಡೀ ಡಯಾಲಿಸಿಸ್ಗೆ ಒಳಗಾಗುವ ಅಥವಾ ಹೃದಯ ಅಥವಾ ಯಕೃತ್ತಿಗಾಗಿ ಅನಿರ್ದಿಷ್ಟ ದಿನಗಳವರೆಗೆ ಕಾಯುವ, ಮರಣವನ್ನು ಎದುರು ನೋಡುತ್ತಿರುವ ಒಬ್ಬ ವ್ಯಕ್ತಿ ಕಡಿಮೆಯಾಗಿ ಆರೋಗ್ಯಕರ ಜೀವನಕ್ಕೆ ಮರಳುತ್ತಾನೆ. ಇದು ಕುಟುಂಬಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವೈದ್ಯಕೀಯ ವೆಚ್ಚ ಕಡಿಮೆಯಾಗುತ್ತದೆ. ಕಾಯಿಲೆಗಳ ಒಟ್ಟಾರೆ ಹೊರೆಯೂ ತಗ್ಗಲಿದೆ. ಅಂಗಾಂಗ ಕಸಿ ಕಾರ್ಯಕ್ರಮಗಳು ಯಾವುದೇ ಮುಂದುವರೆದ ಆರೋಗ್ಯ ವ್ಯವಸ್ಥೆಯ ಪ್ರಮುಖ ಅವಿಭಾಜ್ಯ ಅಂಗವಾಗಿದ್ದು, ಸಾವಿನ ಹೊಸ್ತಿಲಲ್ಲಿ ಇರುವವರ ಅಮೂಲ್ಯ ಜೀವ ಉಳಿಸಲು ನೆರವಾಗುತ್ತದೆ.
ಜನರ ಮನೋಭಾವ ಹಾಗೂ ಧೋರಣೆಗಳು ನಿಧಾನವಾಗಿ ಬದಲಾಗುತ್ತಿರುವ ಬಗ್ಗೆ ಉತ್ತೇಜಕರ ಬೆಳವಣಿಗೆಗಳು ನಡೆಯುತ್ತಿವೆ. ಜಾಗೃತಿ ಉಪಕ್ರಮಗಳು ಬದಲಾವಣೆ ತರಲು ಪ್ರಾರಂಭಿಸಿವೆ.

ಭಾರತದ ವಾರ್ಷಿಕ ಅಂಗಾಂಗ ದಾನಗಳು 2013 ರಲ್ಲಿ 5,000 ಕ್ಕಿಂತ ಕಡಿಮೆ ದಾಖಲಾಗಿದ್ದವು. 2022 ರ ವೇಳೆಗೆ 15,000 ಕ್ಕಿಂತ ಹೆಚ್ಚಿವೆ. ಆದರೆ, ನಾವು ಈ ನಿಟ್ಟಿನಲ್ಲಿ ಇನ್ನೂ ಬಹಳ ದೂರ ಸಾಗಬೇಕಾಗಿದೆ. ಪ್ರತಿ ವರ್ಷ ಆಚರಿಸಲಾಗುವ ರಾಷ್ಟ್ರೀಯ ಅಂಗಾಂಗ ದಾನ ದಿನವು ಚರ್ಚೆ ಹುಟ್ಟುಹಾಕಲು ಮತ್ತು ಜನರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದಕ್ಕೆ ಪ್ರತಿಜ್ಞೆ ಮಾಡಲು ಪ್ರೋತ್ಸಾಹಿಸುವ ಒಂದು ಶುಭ ಸಂದರ್ಭವಾಗಿದೆ. ಅಂಗಾಂಗ ದಾನವನ್ನು ಅಪರೂಪದ ಉದಾರತೆಯ ಕ್ರಿಯೆಯನ್ನಾಗಿ ನೋಡದೆ, ಸಾಮಾನ್ಯ ಸಾಮಾಜಿಕ ರೂಢಿಯನ್ನಾಗಿ ಮಾಡುವುದು ನಮ್ಮ ನಿಲುವಾಗಿದೆ. ರಕ್ತದಾನವು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿರುವಂತೆ, ಮರಣದ ನಂತರ ಅಂಗಾಂಗ ದಾನವು ಕೂಡ ಸಹಜ ನಿರ್ಧಾರವಾಗಬೇಕು. ಕುಟುಂಬಗಳು ಮುಂಚಿತವಾಗಿಯೇ ಚರ್ಚಿಸುವ ಮತ್ತು ದಯೆಯ ಪರಂಪರೆ ರೀತಿಯಲ್ಲಿ ಅದನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಬೇಕಾಗಿದೆ.

ಈ ಬದಲಾವಣೆ ಸಾಧಿಸಲು ನಾವು ವಿಭಿನ್ನ ನೆಲೆಗಳಲ್ಲಿ ನಿರಂತರ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಈ ಬಗ್ಗೆ ಜಾಗೃತಿ ಮೂಡಿಸಲು ಅಂಗಾಂಗ ದಾನವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬಹುದು. ಸಮುದಾಯ ಪ್ರತಿಜ್ಞೆ ಉಪಕ್ರಮಗಳು ದಾನಿಯಾಗಿ ನೋಂದಾಯಿಸಿಕೊಳ್ಳುವುದನ್ನು ಸುಲಭಗೊಳಿಸಬಹುದು. ಆಸ್ಪತ್ರೆಗಳು ಅಂಗಾಂಗ ದಾನಕ್ಕೆ ಸಂಬಂಧಿಸಿ ಜನರ ಮನವೊಲಿಸಲು ಮುಂದಾಗಬೇಕು. ಅಂಗಾಂಗ ದಾನವು - ವ್ಯಕ್ತಿಯ ಕೊನೆಗಾಲದಲ್ಲಿನ ವೈದ್ಯಕೀಯ ನೆರವಿನ ಭಾಗವಾಗಿ ಸೇರ್ಪಡೆ ಮಾಡಬೇಕು, ಇನ್ನೊಬ್ಬರ ಜೀವ ಉಳಿಸುವ ಮಾನವೀಯ ಆಯ್ಕೆಯ ಬಗ್ಗೆ ಕುಟುಂಬದ ಸದಸ್ಯರಿಗೆ ಸಹಾನುಭೂತಿಯಿಂದ ತಿಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅಂಗಾಂಗ ದಾನ ನೀಡುವ ಪ್ರತಿಜ್ಞೆ ಮಾಡುವ ಪ್ರಕ್ರಿಯೆಯನ್ನು ಸರಳವಾಗಿ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯ ಇರುವಂತೆ ಮಾಡಬೇಕು.

ನಷ್ಟವನ್ನು ಜೀವನದಿಂದ, ದುಃಖವನ್ನು ದಾನದಿಂದ ಮತ್ತು ಹಿಂಜರಿಕೆಯನ್ನು ಭರವಸೆಯಿಂದ ಬದಲಾಯಿಸುವುದು ನಮ್ಮ ಸಾಮೂಹಿಕ ಪ್ರತಿಜ್ಞೆಯಾಗಿರಬೇಕು. ನಾವೆಲ್ಲ ಒಟ್ಟಾಗಿ ಅಂಗಾಂಗ ದಾನವನ್ನು ರಾಷ್ಟ್ರೀಯ ಧ್ಯೇಯವನ್ನಾಗಿ ಪರಿವರ್ತಿಸಬಹುದು. ದೇಶದ ಯಾವುದೇ ಪ್ರಜೆಯು ಜೀವನದಲ್ಲಿ ಬದುಕುವ ಎರಡನೇ ಅವಕಾಶವನ್ನು ಎದುರು ನೋಡುತ್ತಲೇ ಸಾಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಲೇಖಕರು: ಅಪೊಲೊ ಹಾಸ್ಪಿಟಲ್ಸ್ ಗ್ರೂಪ್ನ ಸ್ಥಾಪಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.