ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದದ ಅಂದಕ್ಕೆ ಮನೆಯಲ್ಲೇ ಪೆಡಿಕ್ಯೂರ್‌

Last Updated 17 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

‌‌‌‌ಹೆಣ್ಣುಮಕ್ಕಳಿಗೆ ಸೌಂದರ್ಯವೆಂದರೆ ಕೇವಲ ಮುಖ ಮಾತ್ರವಲ್ಲ. ಕೂದಲು, ಕೈ–ಕಾಲು, ಉಗುರು ಇವೆಲ್ಲವನ್ನೂ ಅಂದವಾಗಿರಿಸಿಕೊಳ್ಳುವುದು ಅವರಿಗೆ ಇಷ್ಟ.ಮೊದಲೆಲ್ಲಾ ತಿಂಗಳಿಗೊಮ್ಮೆ ಬ್ಯೂಟಿಪಾರ್ಲರ್‌ಗೆ ಹೋಗಿ ಪೆಡಿಕ್ಯೂರ್, ಮೆನಿಕ್ಯೂರ್ ಮಾಡಿಸುವ ಮೂಲಕ ಕೈ–ಕಾಲುಗಳ ಅಂದವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ, ಕೊರೊನಾ ಬಂದ ಮೇಲೆ ಬ್ಯೂಟಿಪಾರ್ಲರ್ ಕಡೆ ಮುಖ ಮಾಡುವುದು ಕಷ್ಟವಾಗಿದೆ. ಹಾಗೆಂದು ಚಿಂತಿಸಬೇಕಿಲ್ಲ. ಅಡುಗೆಮನೆಯಲ್ಲೇ ಸಿಗುವ ವಸ್ತುಗಳಿಂದ ಕಾಲಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಪಾದ ಹಾಗೂ ಉಗುರಿನ ಅಂದ ಹೆಚ್ಚಿಸುವ ಕೆಲವು ನೈಸರ್ಗಿಕ ಪ್ಯಾಕ್‌ಗಳು ಇಲ್ಲಿವೆ.

ಕಾಫಿಪುಡಿ ಹಾಗೂ ತೆಂಗಿನೆಣ್ಣೆ

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಾಫಿಪುಡಿ ಹಾಗೂ ತೆಂಗಿನೆಣ್ಣೆಯನ್ನು ಬಳಸುತ್ತಾರೆ. ಈ ಎರಡರ ಮಿಶ್ರಣ ಕಾಲಿನ ಅಂದವನ್ನು ಹೆಚ್ಚಿಸುತ್ತದೆ. ಈ ಪ್ಯಾಕ್ ಬಳಸುವ ಮೊದಲು ಉಗುರು ಬೆಚ್ಚಗಿನ ನೀರಿಗೆ ಶಾಂಪೂ ಬಳಸಿ ಹದಿನೈದು ನಿಮಿಷ ಪಾದವನ್ನು ಅದ್ದಿ. ನಂತರ ಚೆನ್ನಾಗಿ ಒರೆಸಿಕೊಂಡು ಕಾಫಿಪುಡಿ ಹಾಗೂ ತೆಂಗಿನೆಣ್ಣೆಯ ಮಿಶ್ರಣವನ್ನು ಪಾದ ಹಾಗೂ ಉಗುರುಗಳಿಗೆ ಚೆನ್ನಾಗಿ ಹಚ್ಚಿ. ಅರ್ಧ ತಾಸು ಬಿಟ್ಟು ಸೋಪಿನ ಸಹಾಯದಿಂದ ತೊಳೆದುಕೊಳ್ಳಿ.

ಅಡುಗೆ ಸೋಡಾ ಹಾಗೂ ನಿಂಬೆರಸ

ಅಡುಗೆ ಸೋಡಾದಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಅಧಿಕವಿದೆ. ಆ ಕಾರಣ ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಅಲ್ಲದೇ ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಡುಗೆ ಸೋಡಾಕ್ಕೆ ನಿಂಬೆರಸ ಬೆರೆಸಿ ಪಾದಕ್ಕೆ ಹಚ್ಚಿಕೊಂಡು ಚೆನ್ನಾಗಿ ಉಜ್ಜಿ. ಅದನ್ನು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ.

ಅರಿಸಿನ, ಲೋಳೆಸರ ಹಾಗೂ ಕಾಫಿಪುಡಿ

ಅನೇಕ ದಿನಗಳಿಂದ ಪೆಡಿಕ್ಯೂರ್ ಮಾಡದೇ ನಿಮ್ಮ ಪಾದದ ಅಂದ ಹಾಳಾಗಿದ್ದರೆ ನೀವು ಈ ಪ್ಯಾಕ್ ಪ್ರಯತ್ನಿಸಬಹುದು. ಮೊದಲು ಶಾಂಪೂ ಬೆರೆಸಿದ ನೀರಿನಲ್ಲಿ ಅರ್ಧಗಂಟೆ ಪಾದವನ್ನು ಅದ್ದಿ. ನಂತರ ಚೆನ್ನಾಗಿ ಒರೆಸಿಕೊಂಡು ಅರಿಸಿನ, ಲೋಳೆಸರ, ಸಕ್ಕರೆ ಹಾಗೂ ಕಾಫಿಪುಡಿಯ ಮಿಶ್ರಣದ ಪ್ಯಾಕ್‌ ಅನ್ನು ಹಚ್ಚಿ ಚೆನ್ನಾಗಿ ಉಜ್ಜಿ. ಅದನ್ನು ಅರ್ಧ ಗಂಟೆ ಕಾಲ ಒಣಗಲು ಬಿಡಿ. ತಣ್ಣೀರಿನಿಂದ ಚೆನ್ನಾಗಿ ತೊಳೆದು ತೆಂಗಿನೆಣ್ಣೆಯ ಸಹಾಯದಿಂದ ಉಗುರುಗಳ ಮೇಲೆ ಬ್ರಷ್‌‌ನಿಂದ ಉಜ್ಜಿ. ಇದರಿಂದ
ಪಾದದ ಚರ್ಮ ಹಾಗೂ ಉಗುರು ಎರಡರ ಅಂದವೂ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT