ನನಗೆ 32 ವರ್ಷ, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಮದುವೆಯಾಗಿ ಮೂರನೇ ವರ್ಷ. ಮೊದಲ ಬಾರಿ ಗರ್ಭ ಧರಿಸಿದ್ದು, 7ನೇ ತಿಂಗಳು ನಡೆಯುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುತ್ತಿರುವೆ. ನನಗೆ ಆಗಾಗ ಹೊಟ್ಟೆನೋವು ಬರುತ್ತಿದ್ದರಿಂದ ಕಳೆದ ವಾರ ಮತ್ತೊಮ್ಮೆ ಸ್ಕ್ಯಾನ್ ಮಾಡಿದರು. ಗರ್ಭಜಲ (ನೆತ್ತಿನೀರು)/ ಆಮ್ನಿಯೋಟಿಕ್ ದ್ರವ ಹೆಚ್ಚಾಗಿದೆ, ಮಗು ಬೇಗ ಬೆಳೆಯುತ್ತಿದೆ, ಸಿಹಿ ತಿನ್ನಬೇಡಿ, ಡಯಾಬಿಟಿಸ್ ಬರಬಹುದು ಎಂದಿದ್ದಾರೆ. ಗಾಬರಿಯಾಗುತ್ತಿದೆ, ಏನು ಮಾಡಲಿ?