ಸೋಮವಾರ, ಜೂನ್ 27, 2022
28 °C

ಹಣ್ಣಿನ ಜ್ಯೂಸ್‌ಗಿಂತ ಹಣ್ಣೇ ಉತ್ತಮ: ದಿನಕ್ಕೆರಡು ತಿಂದರೆ ಟೈಪ್‌ 2 ಮಧುಮೇಹವಿಲ್ಲ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

DH Photo

ಪ್ರತಿದಿನ ಕನಿಷ್ಠ ಎರಡು ಹಣ್ಣುಗಳ ಸೇವನೆಯಿಂದ ಟೈಪ್‌ 2 ಮಧುಮೇಹವನ್ನು ನಿಯಂತ್ರಿಸಬಹುದು. ಹಣ್ಣುಗಳು ಇನ್ಸುಲಿನ್ಅನ್ನು ಹೆಚ್ಚಾಗಿ ಉತ್ಪಾದಿಸದೆ ರಕ್ತದಲ್ಲಿನ ಗ್ಲೂಕೋಸ್‌ಅನ್ನು ಕಡಿಮೆ ಮಾಡುತ್ತವೆ. ಆದರೆ ಪೂರ್ತಿ ಹಣ್ಣನ್ನು ಕಚ್ಚಿ ತಿನ್ನುವುದಕ್ಕೂ, ಜ್ಯೂಸ್‌ ಮಾಡಿ ಕುಡಿಯುವುದಕ್ಕೂ ವ್ಯತ್ಯಾಸವಿದೆ. ಹಣ್ಣಿನಲ್ಲಿ ಸಿಗುವಂತಹ ಎಲ್ಲ ಪೌಷ್ಟಿಕಾಂಶಗಳು ಜ್ಯೂಸ್‌ನಲ್ಲಿ ಇರುವುದಿಲ್ಲ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. 

ಆಸ್ಟ್ರೇಲಿಯಾದ ರೀಸರ್ಚರ್ಸ್‌ ಅಟ್‌ ಎದಿತ್‌ ಕೊವನ್‌ ಯೂನಿವರ್ಸಿಟಿ (ಇಸಿಯು)ನ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ದಿನಕ್ಕೆ ಕನಿಷ್ಠ ಎರಡು ಹಣ್ಣುಗಳನ್ನು ತಿನ್ನುವವರಲ್ಲಿ ಟೈಪ್‌ 2 ಮಧುಮೇಹ  ಶೇ.36ರಷ್ಟು ಕಡಿಯಿದೆ ಎಂಬುದು ಕಂಡುಬಂದಿದೆ. 

ಹಣ್ಣುಗಳ ಸೇವನೆಯಿಂದ ಇನ್ಸುಲಿನ್‌ ನಿಯಂತ್ರಣದಲ್ಲಿರುತ್ತದೆ. ಇನ್ಸುಲಿನ್‌ ಹೆಚ್ಚಾದರೆ ಮಧುಮೇಹಕ್ಕೆ ಕಾರಣವಾಗುವುದು ಮಾತ್ರವಲ್ಲ ರಕ್ತನಾಳಗಳ ಮೇಲೆಯೂ ಹಾನಿ, ರಕ್ತದೊತ್ತಡಕ್ಕೆ ಕಾರಣ, ಸ್ಥೂಲಕಾಯತೆ ಮತ್ತು ಹೃದಯ ಸಂಬಂಧಿ ರೋಗಗಳಿಗೂ ಕಾರಣವಾಗುತ್ತದೆ ಎಂದು ಇಸಿಯುನ ಸಂಶೋಧಕಿ ನಿಕೊಲಾ ಬೊಂಡೊನ್ನೊ ತಿಳಿಸಿದ್ದಾರೆ. 

ಸುಮಾರು 7,675 ಮಂದಿಯನ್ನು ಪ್ರಯೋಗದಲ್ಲಿ ಬಳಸಿಕೊಳ್ಳಲಾಗಿದ್ದು, ಇವರು ಬೇಕರ್‌ ಹಾರ್ಟ್‌ ಆ್ಯಂಡ್‌ ಡಯಾಬಿಟಿಸ್‌ ಇನ್ಸ್‌ಟಿಟ್ಯೂಟ್‌ನ ಆಸ್‌ಡಿಯಬ್‌ ಸ್ಟಡಿಯಲ್ಲೂ ಪಾಲ್ಗೊಂಡಿದ್ದರು. ಇದು ಹಣ್ಣು ಮತ್ತು ಹಣ್ಣಿನ ಜ್ಯೂಸ್‌ ಸೇವನೆ ಬಗ್ಗೆ 5 ವರ್ಷಗಳ ಕಾಲ ನಡೆಸಿದ ಅಧ್ಯಯನ ವರದಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು