ತಲೆಸುತ್ತು ಕಂಡುಬಂದಾಗ ಮನೆಮದ್ದು ಮಾಡುವುದಕ್ಕಿಂತಲೂ ಅದರ ಹಿಂದಿರುವ ಸೂಕ್ತ ಕಾರಣವನ್ನು ತಿಳಿದುಕೊಂಡು, ಚಿಕಿತ್ಸೆ ಪಡೆಯುವುದು ಉತ್ತಮ

ದೂರದ ಊರಿನಲ್ಲಿದ್ದ ಚಿಕ್ಕಮ್ಮನ ಮಗಳು ಕರೆ ಮಾಡಿ, ‘ಅಕ್ಕ ನೀವು ಕಳೆದ ಸಲ ನನಗೆ ತಲೆಸುತ್ತು ಬಂದಾಗ ಉಪ್ಪುಸಕ್ಕರೆ ಹಾಕಿ ಶರಬತ್ತು ಮಾಡಿ ಕುಡಿ, ಸ್ವಲ್ಪ ಉಪ್ಪಿನಕಾಯಿಯನ್ನು ಚಪ್ಪರಿಸು, ನೀರನ್ನು ಹೆಚ್ಚಾಗಿ ಕುಡಿ, ಸರಿ ಹೋಗಬಹುದು ಎಂದಿದ್ದೀರಿ. ಹಾಗೆ ಮಾಡಿ ಸ್ವಲ್ಪ ಹೊತ್ತಿನ ಬಳಿಕ ತಲೆಸುತ್ತು ಕಡಿಮೆಯಾಗಿ ಸಹಜ ಸ್ಥಿತಿಗೆ ಬಂದಿದ್ದೆ. ಈಗ ಮನೆಯವರು ಬೆಳಿಗ್ಗೆಯಿಂದ ತಲೆ ಸುತ್ತುತ್ತಿದೆ ಎಂದಾಗ ನೀವು ನನಗೆ ಅಂದು ಹೇಳಿದ್ದನ್ನೇ ಪುನರಾವರ್ತಿಸಿದ್ದೆ. ಆದರೆ ಅವರಿಗೆ ತಲೆಸುತ್ತು ಕಡಿಮೆಯಾಗ್ತಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೇ?’ ಎಂದು ಕೇಳಿದ್ದಳು. ನಾನು ‘ತಲೆಸುತ್ತು ಬರುವುದಕ್ಕೆ ಕಾರಣಗಳು ಹಲವು. ನಿರ್ಲಕ್ಷಿಸದೆ ಒಮ್ಮೆ ಹತ್ತಿರದ ವೈದ್ಯರ ಬಳಿ ಕರೆದುಕೊಂಡು ಹೋಗು, ಪರೀಕ್ಷಿಸಿ ಸಲಹೆಯನ್ನು ಕೊಡುತ್ತಾರೆ’ ಎಂದಿದ್ದೆ.
ಹೌದು, ತಲೆಸುತ್ತುವಿಕೆ, ಲಕ್ಷಣ ಒಂದೇ ಆದರೂ ಕಾರಣಗಳು ಹಲವು.

*ಊಟ ಅಥವಾ ಉಪಾಹಾರ ಸೇವಿಸುವ ಸಮಯ ಮೀರುತ್ತಿದ್ದಂತೆ ಎಷ್ಟೋ ಜನರಿಗೆ ತಲೆಸುತ್ತು ಬಂದಂತಾಗುವುದು ಸಹಜ. ಶರೀರದಲ್ಲಿ ರಕ್ತದ ಶರ್ಕರ ಪಿಷ್ಟಾಂಶ ಕಡಿಮೆಯಾದಾಗ ಮಿದುಳಿನ ಜೀವಕೋಶಗಳಿಗೆ ಸಮರ್ಪಕ ಶಕ್ತಿ ದೊರೆಯದೆ ವ್ಯಕ್ತಿಯು ತಲೆಸುತ್ತುವಿಕೆಯಿಂದ ಬಳಲುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಮಧುಮೇಹಿಗಳು ರಕ್ತದ ಶರ್ಕರ ಪಿಷ್ಟಾಂಶವನ್ನು ನಿಯಂತ್ರಿಸಲು ಮಾತ್ರೆ ಅಥವಾ ಇನ್ಸುಲಿನ್ ಬಳಸುವುದರಿಂದ ಸಾಮಾನ್ಯ ರಿಗಿಂತಲೂ ಬಹುಬೇಗನೆ ಶರೀರದಲ್ಲಿ ಆ ಅಂಶ ಕಡಿಮೆಯಾಗಿ ವ್ಯಕ್ತಿಗೆ ತಲೆಸುತ್ತುವಿಕೆ ಜೊತೆಗೆ ಕಣ್ಣು ಕತ್ತಲೆ ಬಂದಂತೆಯೂ ಆಗಬಹುದು. ಕೂಡಲೇ ಅವರಿಗೆ ಚಾಕಲೇಟ್ ಅನ್ನು ಚಪ್ಪರಿಸಲು ತಿಳಿಸಬೇಕು ಅಥವಾ ಸ್ವಲ್ಪವೇ ಸಕ್ಕರೆ ಬೆರೆಸಿದ ನೀರನ್ನು ಕೊಟ್ಟು ನಂತರ ಆಹಾರಸೇವನೆಯನ್ನು ಮಾಡಲು ಸೂಚಿಸಬೇಕು.

*ಶಾಲಾ ವಿದ್ಯಾರ್ಥಿಗಳಲ್ಲಿ ದೀರ್ಘ ಸಮಯದವರೆಗೆ ದೈಹಿಕ ಶಿಕ್ಷಣ ಅಥವಾ ಪ್ರಾರ್ಥನೆಗಾಗಿ ಒಂದೇ ಭಂಗಿಯಲ್ಲಿ ನಿಂತಾಗ ತಲೆಸುತ್ತು ಬರುವುದಿದೆ. ಮಿದುಳಿಗೆ ರಕ್ತಪರಿಚಲನೆಯ ಕೊರತೆ ಉಂಟಾಗುವುದು ಇದಕ್ಕೆ ಕಾರಣ. ಸಾಮಾನ್ಯವಾಗಿ ಆ ಲಕ್ಷಣ ಕಂಡು ಬಂದ ಕೂಡಲೇ ಅವರನ್ನು ಸಮತಟ್ಟಾದ ನೆಲದ ಮೇಲೆ ಅಥವಾ ಬೆಂಚಿನ ಮೇಲೆ ಮಲಗಿಸಿ ಎರಡು ಕಾಲುಗಳನ್ನು ಸ್ವಲ್ಪ ಎತ್ತರಕ್ಕೆ ಎತ್ತುವುದರಿಂದ ಮಿದುಳಿಗೆ ರಕ್ತ ಪರಿಚಲನೆ ಸುಧಾರಿಸಿ ತಲೆಸುತ್ತುವಿಕೆ ಕಡಿಮೆಯಾಗಬಹುದು.

*ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾದಾಗಲೂ ಅಥವಾ ಹೆಚ್ಚಾದಾಗಲೂ ತಲೆಸುತ್ತು ಕಾಣಿಸಿಕೊಳ್ಳ
ಬಹುದು. ರಕ್ತದೊತ್ತಡವನ್ನು ಅಳೆದು ನೋಡದೆಯೆ ಅಥವಾ ರೋಗಿಯ ಪೂರ್ವಾಪರ ಮತ್ತು ಇತರ ಲಕ್ಷಣಗಳನ್ನು ತಿಳಿಯದಿದ್ದರೆ ಇದನ್ನು ಊಹಿಸುವುದು ಸ್ವಲ್ಪ ಕಷ್ಟ. ಹಲವರಲ್ಲಿ ಪದೇ ಪದೇ ರಕ್ತದೊತ್ತಡ ಕಡಿಮೆಯಾಗುವ ಸಮಸ್ಯೆಯನ್ನು ನೋಡುತ್ತೇವೆ. ಇದಕ್ಕೆ ಕೆಲವೊಮ್ಮೆ ನಿಖರವಾದ ಕಾರಣ ತಿಳಿಯದೆ ಹೋಗಬಹುದು. ಅಂತಹವರು ಹೆಚ್ಚು ನೀರು, ಉಪ್ಪಿನಾಂಶವಿರುವ ಬಿಸ್ಕೆಟ್ಟುಗಳು, ಉಪ್ಪಿನಕಾಯಿ, ಉಪ್ಪು-ಸಕ್ಕರೆ ಹಾಕಿದ ಶರಬತ್ತುಗಳನ್ನು ಸೇವಿಸುವುದರಿಂದ ತಲೆಸುತ್ತಿನ ಲಕ್ಷಣಗಳು ನಿಯಂತ್ರಣಕ್ಕೆ ಬರಬಹುದು.

*ರಕ್ತದೊತ್ತಡ ಹೆಚ್ಚಾದಾಗ ಕಾಣಿಸಿಕೊಳ್ಳುವ ತಲೆಸುತ್ತುವಿಕೆಗೆ ವೈದ್ಯರ ತಪಾಸಣೆ, ಸಲಹೆ ಮತ್ತು ಚಿಕಿತ್ಸೆ ಅತ್ಯಗತ್ಯ. ಅಧಿಕ ರಕ್ತದೊತ್ತಡದಿಂದ ಬಳಲುವ ವ್ಯಕ್ತಿ ಅದಕ್ಕಾಗಿ ತೆಗೆದುಕೊಳ್ಳುವ ಮಾತ್ರೆಯನ್ನು ತಪ್ಪಿಸಿದಾಗಲೂ ಈ ರೀತಿಯ ತಲೆ ಸುತ್ತು ಕಾಣಿಸಿ ಕೊಳ್ಳಬಹುದು. ಸಮಯಕ್ಕೆ ಸರಿಯಾಗಿ ಬಿ.ಪಿ. ಮಾತ್ರೆಗಳನ್ನು ಸೇವಿಸುವುದು ಬಹಳ ಮುಖ್ಯ.

*ವ್ಯಕ್ತಿ ನಿರ್ಜಲೀಕರಣ ಸಮಸ್ಯೆಯಿಂದ ಬಳಲುವಾಗಲೂ ತಲೆ ಸುತ್ತು ಕಾಣಿಸಿಕೊಳ್ಳುವುದಿದೆ. ಬಿಸಿಲಿನಲ್ಲಿ ನೀರು ಅಥವಾ ದ್ರವಾಂಶವನ್ನು ಸಾಕಷ್ಟು ಸೇವಿಸದೆಯೇ ಹೆಚ್ಚು ಸಮಯ ಅಡ್ಡಾಡಿದಾಗ ತಲೆ ಸುತ್ತು ಬಂದು ವ್ಯಕ್ತಿ ನಿತ್ರಾಣಗೊಳ್ಳ
ಬಹುದು. ಕೂಡಲೇ ನೀರು, ಶರಬತ್ತು ಹಾಗೂ ಎಳನೀರಿನ ಸೇವನೆ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

*ಶರೀರದ ಸಮತೋಲನವನ್ನು ಕಾಪಾಡುವ ಅಂಗಾಂಶಗಳಲ್ಲಿ ಒಳಕಿವಿಯ ಪಾತ್ರ ಮಹತ್ವದ್ದು. ಒಳಕಿವಿಯಲ್ಲಿರುವ ಅಂಗಾಂಶಗಳಲ್ಲಿ ಉರಿಯೂತ ಅಥವಾ ಮತ್ತಿತರ ದೋಷಗಳು ಕಂಡು ಬಂದಾಗಲೂ ವ್ಯಕ್ತಿ ತಲೆಸುತ್ತುವಿಕೆಯಿಂದ ಬಳಲುತ್ತಾನೆ. ಜೊತೆಯಲ್ಲಿ ವಾಂತಿ, ವಾಕರಿಕೆ, ನಡೆಯುವಾಗ ಸಮತೋಲನ ತಪ್ಪಿದಂತೆಯೂ ಆಗಬಹುದು. ತಲೆಯನ್ನು ಆಚೀಚೆ ಚಲಿಸಿದಾಗ ಸಮಸ್ಯೆ ತೀವ್ರವಾಗುವುದು ಕೂಡ ಇಲ್ಲಿ ಸಾಮಾನ್ಯ. ಇಂತಹ ಲಕ್ಷಣಗಳು ಕಂಡು ಬಂದಾಗ ಕಿವಿ ಮೂಗು ಗಂಟಲು ತಜ್ಞರ ಬಳಿ ಸಲಹೆ ಮತ್ತು ಚಿಕಿತ್ಸೆ ಅತ್ಯಗತ್ಯ. ತಜ್ಞರು ಮಾಡುವ ಕೆಲವು ಸರಳ ತಂತ್ರಗಳಿಂದ ಸಮಸ್ಯೆ ಶಾಶ್ವತವಾಗಿ ನಿಯಂತ್ರಣಕ್ಕೆ ಬರಬಹುದು.

*ಮಿದುಳಿನ ಒಂದು ಭಾಗವಾದ ಕಿರು ಮಿದುಳು ಕೂಡ ಶರೀರದ ಸಮತೋಲನವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆ ಭಾಗದಲ್ಲಿ ಉರಿಯೂತ, ಗಡ್ಡೆ ಅಥವಾ ರಕ್ತಪರಿಚಲನೆಯಲ್ಲಿ ವ್ಯತ್ಯಯವಾದಾಗಲೂ ಈ ಸಮಸ್ಯೆ ಕಾಣಿಸಬಹುದು. ಒಮ್ಮೊಮ್ಮೆ ಇದು ಪಾರ್ಶ್ವವಾಯುವಿನ ಲಕ್ಷಣವೂ ಇರಬಹುದು. ಇಂತಹ ಸಂದರ್ಭದಲ್ಲಿ ನರರೋಗ ತಜ್ಞರನ್ನು ಭೇಟಿ ಮಾಡಿ ತಪಾಸಣೆಗೆ ಒಳಗಾಗಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಸಮಸ್ಯೆಗೆ ನಿಖರವಾಧ ಕಾರಣವನ್ನು ತಿಳಿಯಲು ಸಿ.ಟಿ. ಸ್ಕ್ಯಾನ್ ಮತ್ತು ಎಂ. ಆರ್. ಐ. ಸ್ಕ್ಯಾನ್ ಪರೀಕ್ಷೆಗಳು ಅಗತ್ಯವೆನಿಸುತ್ತವೆ. ಸರಿಯಾದ ಕಾರಣವನ್ನು ತಿಳಿದ ನಂತರವೇ ತಜ್ಞರು ಚಿಕಿತ್ಸೆಗೆ ಮುಂದಾಗುತ್ತಾರೆ.

*ರಕ್ತ ಹೀನತೆ, ಮೈಗ್ರೇನ್ನಿಂದ ಬಳಲುವವರಲ್ಲಿ ಸಹ ತಲೆಸುತ್ತುವಿಕೆ ಕಾಣಿಸಿಕೊಳ್ಳುತ್ತದೆ. ಮೂಲ ಕಾರಣದ ಚಿಕಿತ್ಸೆ ಸಮಸ್ಯೆಯನ್ನು ಸರಿಪಡಿಸುತ್ತದೆ.

*ಕೆಲವು ಔಷಧಗಳ ಅಡ್ಡಪರಿಣಾಮವೂ ಇರಬಹುದು. ನೀವು ಹೊಸದಾಗಿ ತೆಗೆದುಕೊಳ್ಳಲು ಆರಂಭಿಸಿದ ಮಾತ್ರೆ, ಔಷಧಗಳ ಬಗ್ಗೆಯೂ ನಿಗಾ ಇರಲಿ.

*ಹಿಂದಿನ ರಾತ್ರಿ ಸರಿಯಾದ ನಿದ್ರೆಯಿಲ್ಲದಿದ್ದಾಗಲೂ ವ್ಯಕ್ತಿ ತಲೆಸುತ್ತುವಿಕೆ ಎಂದು ದೂರಬಹುದು.

*ಹೃದಯಾಘಾತವಾಗುವಾಗ ಎದೆನೋವು, ಎದೆಯಲ್ಲಿ ಒತ್ತಿದಂತಹ ಅನುಭವದ ಜೊತೆಯಲ್ಲಿ ತಲೆಸುತ್ತಿದಂತೆಯೂ ಆಗಬಹುದು. ಕೂಡಲೇ ಹತ್ತಿರದ ಸುಸಜ್ಜಿತ ಆಸ್ಪತ್ರೆಗೆ ವ್ಯಕ್ತಿಯನ್ನು ಕರೆದೊಯ್ಯಬೇಕು.

ತಲೆಸುತ್ತುವಿಕೆ ಜೊತೆಯಲ್ಲಿ ಕಾಣಿಸಿಕೊಳ್ಳುವ ಇತರ ಲಕ್ಷಣಗಳನ್ನೂ ಮತ್ತು ಪೂರ್ವಾಪರವನ್ನೂ ವೈದ್ಯರ ಬಳಿ ತಿಳಿಸುವುದು ಬಹಳ ಮುಖ್ಯ. ಇದು ಸಮಸ್ಯೆಯ ಮೂಲಕಾರಣವನ್ನು ತಿಳಿದು ಚಿಕಿತ್ಸೆಯನ್ನು ಸೂಚಿಸಲು ನೆರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.