ಮಕ್ಕಳಾಗದೇ ಇರುವ ಎಷ್ಟೋ ದಂಪತಿಗಳಿಗೆ ಇನ್ವಿಟ್ರೊ ಫರ್ಟಿಲೈಸೇಶನ್ (IVF) ವಿಧಾನ ಆಶಾಕಿರಣವಾಗಿದೆ. ಇಂದು ವಿಶ್ವ ಐವಿಎಫ್ ದಿನವಾಗಿದ್ದು, ಐವಿಎಫ್ ಬೆಳೆದು ಬಂದ ದಾರಿ, ಅದರ ಪ್ರಯೋಜನದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಐವಿಎಫ್? ಹಿನ್ನೆಲೆ ಏನು?

ಮಕ್ಕಳಾಗದೇ ಇರುವ ಮಹಿಳೆಯರ ಎಗ್ (ಅಂಡಾಣು) ಹಾಗೂ ಪುರುಷರ ವೀರ್ಯವನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಫಲವತ್ತಾಗಿಸಿ, ನಂತರ ಮಹಿಳೆಯ ಗರ್ಭಕ್ಕೆ ಸೇರಿಸುವ ಕಾರ್ಯವಿಧಾನವನ್ನೇ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಎನ್ನಲಾಗುತ್ತದೆ.

1978 ರಲ್ಲಿ ಯುನೈಟೆಡ್ ಕಿಂಗ್ಡಂನಲ್ಲಿ ಐವಿಎಫ್ ಜನ್ಮತಳೆದಿದ್ದು, "ಲೂಯಿಸ್ ಬ್ರೌನ್" ಮೊದಲ ಐವಿಎಫ್ ಮಗು ಎನ್ನಲಾಗಿದೆ. ಐವಿಎಫ್ನನ್ನು ಡಾ. ರಾಬರ್ಟ್ ಎಡ್ವರ್ಡ್ಸ್ ಮತ್ತು ಡಾ. ಪ್ಯಾಟ್ರಿಕ್ ಸ್ಟೆಪ್ಟೋ ಅಭಿವೃದ್ಧಿಪಡಿಸಿದ್ದು, ದೇಶಾದ್ಯಂತ ಇಂದು ಬಳಕೆಯಲ್ಲಿದೆ. ಜಪಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಡೆನ್ಮಾರ್ಕ್ನಂತಹ ದೇಶಗಳು IVF ಬಳಕೆಯಲ್ಲಿ ಅಗ್ರಸ್ಥಾನದಲ್ಲಿವೆ, ಭಾರತದಲ್ಲಿಯೂ ಐವಿಎಫ್ನ ಬಳಕೆ ಕ್ರಮೇಣವಾಗಿ ಹೆಚ್ಚುತ್ತಿದೆ. ಪ್ರಸ್ತುತ ಸುಮಾರು 28 ಮಿಲಿಯನ್ ದಂಪತಿಗಳು ಬಂಜೆತನದಿಂದ ಬಳಲುತ್ತಿದ್ದು, ಇದರಲ್ಲಿ ಕೇವಲ ಶೇಕಡ ಒಂದರಷ್ಟು ಜನರು ಮಾತ್ರ ಐವಿಎಫ್ನ ಬಳಸುತ್ತಿದ್ದಾರೆ.

ಐವಿಎಫ್ನ ವಿಧಗಳು

ಕಳೆದ 45 ವರ್ಷಗಳಲ್ಲಿ, IVF ಹೆಚ್ಚು ಪರಿಷ್ಕೃತವಾಗುತ್ತಾ ಬಂದಿದ್ದು ಹಲವು ವಿಧಾನಗಳಲ್ಲಿ ಐವಿಎಫ್ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿಯೊಂದೂ ಚಿಕಿತ್ಸೆ ಅಗತ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಸಾಂಪ್ರದಾಯಿಕ IVF, ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ವಿಧಾನ (ICSI), ಮಿನಿ IVF, ನೈಸರ್ಗಿಕ ಸೈಕಲ್ IVF, ಮತ್ತು ದಾನಿ ಅಂಡಾಣುಗಳು ಅಥವಾ ವೀರ್ಯ ಪಡೆಯುವ IVF ವಿಧಾನ, ಘನೀಕೃತ ಭ್ರೂಣ ವರ್ಗಾವಣೆ (FET) ಮತ್ತು ಪ್ರಿ ಇಂಪ್ಲಾಂಟೇಶನ್ ಜೆನೆಟಿಕ್ ಟೆಸ್ಟಿಂಗ್ (PGT) ನಂತಹ ವಿಧಾನಗಳನ್ನು ಬಳಸಿಕೊಂಡು IVF ಪ್ರಕ್ರಿಯೆ ನಡೆಸಲಾಗುತ್ತದೆ.

ಯಾರಲ್ಲಿ ಬಂಜೆತನ ಹೆಚ್ಚು?

ಹಿಂದೆಲ್ಲಾ ಮಕ್ಕಳಾಗಿಲ್ಲವೆಂದರೆ ಕೇವಲ ಮಹಿಳೆಯನ್ನಷ್ಟೇ ದೂರುತಿದ್ದರು. ಆದರೆ, ಬಂಜೆತನಕ್ಕೆ ಪುರುಷ ಹಾಗೂ ಮಹಿಳೆ ಇಬ್ಬರೂ ಸಮಾನರಾಗಿ ಕಾರಣ ಎನ್ನಲಾಗುತ್ತದೆ. ಸುಮಾರು 40 ರಿಂದ 50ರಷ್ಟು ಬಂಜೆತನ ಪ್ರಕರಣಗಳು ಪುರುಷ ಮತ್ತು ಸ್ತ್ರೀ ಸಮಾನವಾಗಿ ಕೊಡುಗೆ ನೀಡುತ್ತಾರೆ ಎಂದು ಅಧ್ಯಯನಗಳು ತೋರುತ್ತವೆ. ಇನ್ನು, 10 ರಿಂದ 20ರಷ್ಟು ಪ್ರಕರಣಗಳು ಅನುವಂಶೀಕ ಸೇರಿದಂತೆ ಇತರೆ ಕಾರಣಗಳಿಂದ ಬರಬಹುದು. ಹೀಗಾಗಿ ಬಂಜೆತನದ ಸುಳಿವು ಸಿಗುತ್ತಿದ್ದಂತೆ ಪ್ರಾರಂಭದಲ್ಲಿಯೇ ಪತ್ತೆ ಹಚ್ಚುವುದು ಅವಶ್ಯಕ.

IVF ಎಷ್ಟು ಸುರಕ್ಷಿತ?

IVF ನನ್ನು ಬಹುತೇಕ ಸುರಕ್ಷಿತ ವೈದ್ಯಕೀಯ ವಿಧಾನವೆಂದು ಪರಿಗಣಿಸಲಾಗಿದ್ದು, ಐವಿಎಫ್ನ ಯಶಸ್ಸಿನ ಪ್ರಮಾಣವು ಹೆಚ್ಚು. IVF ಕಾರ್ಯವಿಧಾನದ ಬಳಿಕ ಮಹಿಳೆಯ ಗರ್ಭಕ್ಕೆ ಅಳವಡಿಸುವುದರಿಂದ ಗರ್ಭಧಾರಣೆ ಮಾಡಿದ ಬಳಿಕ ಅದನ್ನು ತಾಯಿಯ ಗರ್ಭಕ್ಕೆ ಸೇರಿಸುವುದರಿಂದ ಸಾಮಾನ್ಯ ಗರ್ಭಧಾರಣೆಯಂತೆ ಮುಂದುವರಿಯುತ್ತದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಐವಿಎಫ್ನ ಫಲಿತಾಂಶದ ಪ್ರಮಾಣ ಹೆಚ್ಚು.

ಸಾರ್ವಜನಿಕ ಜಾಗೃತಿ ಅಗತ್ಯ

ಭಾರತದ ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳಲ್ಲಿ IVF ಅರಿವು ಇನ್ನೂ ಸೀಮಿತವಾಗಿದೆ. ಸಂಪ್ರದಾಯ ಕಟ್ಟುಪಾಡುಗಳ ಹಾಗೂ ಲೈಂಗಿಕ ಸಂತಾನೋತ್ಪತ್ತಿ ಶಿಕ್ಷಣದ ಕೊರತೆಯಿಂದ ಈ ಭಾಗದ ದಂಪತಿಗಳು ಸಕಾಲಿಕ ವೈದ್ಯಕೀಯ ಹಸ್ತಕ್ಷೇಪಕ್ಕೆ ಒಳಗಾಗದೇ ಶಾಶ್ವತ ಬಂಜೆತನವನ್ನು ಅನುಭವಿಸುತ್ತಿದ್ದಾರೆ.

ಐವಿಎಫ್ಗೆ ಎಷ್ಟು ವೆಚ್ಚವಾಗಬಹುದು?

ದೇಶದಿಂದ ದೇಶಕ್ಕೆ ಐವಿಎಫ್ನ ವೆಚ್ಚ ಬದಲಾಗುತ್ತದೆ. ಭಾರತದಲ್ಲಿ ಐವಿಎಫ್ನ ಚಿಕಿತ್ಸೆಯುವ ₹1.5 ಲಕ್ಷದಿಂದ ಪ್ರಾರಂಭವಾಗುತ್ತದೆ, ಕೆಲವರಿಗೆ ಒಮ್ಮೆಲೇ ಆಗಲಿಲ್ಲವೆಂದರೆ, ಈ ಸೈಕಲ್ ಮುಂದುವರೆಯಲಿದೆ. ಐವಿಎಫ್ನಲ್ಲಿ, FET , ICSI ಅಥವಾ PGT ನಂತಹ ಯಾವುದೇ ಹೆಚ್ಚುವರಿ ಕಾರ್ಯವಿಧಾನಗಳ ಮೇಲೆ ವೆಚ್ಚವು ಹೆಚ್ಚಬಹುದು.

ಲೇಖನ: ಡಾ. ಗೌರವ್ ಗುಜರಾತಿ, ಹಿರಿಯ ಸಲಹೆಗಾರರು ಮತ್ತು ಕೇಂದ್ರ ಮುಖ್ಯಸ್ಥರು, ಬಿರ್ಲಾ ಫರ್ಟಿಲಿಟಿ & IVF, ಮಂಗಳೂರು
.2 ವರ್ಷವಾದರೂ ಸಿದ್ಧವಾಗದ ಸರ್ಕಾರಿ ‘ಐವಿಎಫ್’ ಕ್ಲಿನಿಕ್’.ಐವಿಎಫ್ ವೆಚ್ಚ ತಗ್ಗಿಸುವ ಕಾರ್ಯಾದೇಶಕ್ಕೆ ಟ್ರಂಪ್ ಸಹಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.