ದಿನ ಭವಿಷ್ಯ: ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ ಮೂಡಲಿದೆ
Published 13 ಮೇ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಂಚನೆಯ ಕಡೆಗೆ ಕರೆದೊಯ್ಯುವ ಪ್ರಯತ್ನ ಸ್ನೇಹಿತರ ಬಳಗದಲ್ಲಿ ನಡೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯವಹಾರ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ.
ವೃಷಭ
ಜೀವನದ ಬಗ್ಗೆ ನಿರುತ್ಸಾಹ ತಾಳದಿರಿ. ಲೇವಾದೇವಿ ವ್ಯವಹಾರದಲ್ಲಿ ಭಾಗಶಃ ಅನುಕೂಲವಿದೆ. ರೈತರು ಪ್ರಾಯೋಗಿಕವಾಗಿ ಬೆಳೆದ ಬೆಳೆಯಿಂದ ಸಂತೋಷವನ್ನು ಹೊಂದುವರು.
ಮಿಥುನ
ಮಸಾಲೆ ಪದಾರ್ಥ ಅಥವಾ ಖಾದ್ಯ ವಸ್ತುಗಳ ಮಾರಾಟದಿಂದ ನೆಮ್ಮದಿ ಕಾಣಬಹುದು. ಮಕ್ಕಳ ಅಗತ್ಯಗಳನ್ನು ಪೂರೈಸಿ. ನೂತನ ವಾಹನ ಖರೀದಿಯ ಆಲೋಚನೆ ಮುಂದೂಡುವುದು ಉತ್ತಮ.
ಕರ್ಕಾಟಕ
ಬಹಳ ದಿನದ ಹುಡುಕಾಟದ ನಂತರ ಖಾಸಗಿ ಕಂಪನಿಯೊಂದರಲ್ಲಿ ನೌಕರಿ ಪ್ರಾಪ್ತಿಯಾಗಿ ಮನೆಯಲ್ಲಿ ಸಂತಸ ಮೂಡಲಿದೆ. ರಾಜಕೀಯ ರಂಗದಲ್ಲಿ ಸೇವಾಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ದೊರೆಯಲಿದೆ.
ಸಿಂಹ
ಪ್ರಯತ್ನ ಪಟ್ಟ ಕೆಲಸಗಳು ಫಲ ನೀಡಲಿವೆ. ಧಾರ್ಮಿಕ ವ್ಯಕ್ತಿಯ ಸ್ನೇಹ ಸಂಬಂಧ ಅಥವಾ ಧಾರ್ಮಿಕ ಉಪನ್ಯಾಸಗಳಿಂದ ಜೀವನ ಶೈಲಿ ಬದಲಾಗಲಿದೆ. ಮನೆಯವರ ಆರೋಗ್ಯ ಸುಧಾರಣೆಯಾಗುತ್ತದೆ.
ಕನ್ಯಾ
ಕೌಟುಂಬಿಕ ಸುಖದೊಂದಿಗೆ ಸರ್ವತೋಮುಖ ಅಭಿವೃದ್ಧಿ ಪಡೆಯುವಿರಿ. ಹೊಸ ಕೆಲಸಗಳ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಬಹುದು. ಮೆಕಾನಿಕಲ್ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮ ಅಗತ್ಯ. ಶ್ರೀವಿಷ್ಣು ಸಹಸ್ರನಾಮ ಪಠಿಸಿರಿ.
ತುಲಾ
ಮಕ್ಕಳ ಮಾನಸಿಕ ಬೆಳವಣಿಗೆಯ ಬಗ್ಗೆ ಪೋಷಕರು ಗಮನವಹಿಸಿ. ನೂತನ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಇಂದು ಸೂಕ್ತ ಕಾಲ. ಖಾದಿ ಉದ್ಯಮದವರು ಸರ್ಕಾರದಿಂದ ಸಹಾಯ ಅಪೇಕ್ಷಿಸಬಹುದು.
ವೃಶ್ಚಿಕ
ಕೋರ್ಟು ವ್ಯವಹಾರಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ಬಗ್ಗೆ ಪ್ರಯತ್ನವಿರಲಿ. ಒಬ್ಬೊಬ್ಬರ ಮುಂದೆ ಒಂದೊಂದು ರೀತಿಯಲ್ಲಿ ಮುಖಸ್ತುತಿ ಮಾಡುವ ಬದಲು ಸತ್ಯವನ್ನಾಡುವ ತೀರ್ಮಾನ ಮಾಡಿ.
ಧನು
ಕಾರ್ಮಿಕ ವರ್ಗದವರಲ್ಲಿ ಜನ ಸಂಪತ್ತಿನ ಕೊರತೆಯ ಕಾರಣದಿಂದಾಗಿ ಅಧಿಕ ಶ್ರಮ ಉಂಟಾಗುವುದು. ಪುಸ್ತಕ ಪ್ರಕಾಶಕರಿಗೆ ಏಕಾಗ್ರತೆ ಕೊರತೆಯಿಂದಾಗಿ ಹಲವು ಅಡಚಣೆಗಳು ಎದುರಾಗಲಿವೆ.
ಮಕರ
ಸಂಶೋಧನಾ ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮುನ್ನಡೆ ಸಾಧಿಸುವರು. ಕೃಷಿ ಕೆಲಸಗಳಿಗೆ ಸಹೋದರರಿಂದ, ಮಕ್ಕಳಿಂದ ಆರ್ಥಿಕ ಸಹಾಯ ಪಡೆಯುವ ಬದಲು ಸಂಘ ಸಂಸ್ಥೆಯಲ್ಲಿ ಸಾಲ ತೆಗೆದುಕೊಳ್ಳುವುದು ಉತ್ತಮ.
ಕುಂಭ
ಕ್ರೀಡೆಯಲ್ಲಿ ಅಥವಾ ಮನರಂಜನೆಯ ಕಾರ್ಯಕ್ರಮದಲ್ಲಿ ಸಮಯ ಕಳೆಯುವಿರಿ. ಹಿರಿಯರ ಇಚ್ಛೆಯಂತೆ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಂತೋಷಕ್ಕೆ ಕಾರಣವಾಗುತ್ತದೆ.
ಮೀನ
ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ ಮೂಡಲಿದೆ. ರಾಜಕೀಯ ವಿಷಯಗಳಿಗಾಗಿ ದಿಢೀರ್ ಪ್ರಯಾಣದ ಸಂಭವವಿದೆ. ಈ ದಿನದ ನಿಮ್ಮ ಜೀವನ ಶೈಲಿಯ ಬದಲಾಗಲಿದೆ.