ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವಿದ್ಯಾಭ್ಯಾಸದಲ್ಲಿನ ಸಾಧನೆಗೆ ಗುರುಗಳ ಪ್ರೋತ್ಸಾಹ ಸಿಗುವುದು
Published 9 ಜೂನ್ 2024, 0:09 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಇಂದಿನ ದಿನದಲ್ಲಿ ಸಂಭವಿಸುವ ಹಲವಾರು ಘಟನೆಗಳಿಂದ ದಿವ್ಯಶಕ್ತಿಯ ಅನುಭೂತಿ ಸಿಗುತ್ತದೆ. ನೀವು ನಿರ್ಧರಿಸಿದ ರೀತಿಯಲ್ಲಿ ನಿಮ್ಮ ಜೀವನ ಇರುವುದು. ಈ ದಿನವು ನೆಮ್ಮದಿಯ ದಿನವೆನಿಸುವುದು.
ವೃಷಭ
ಸಹೋದರರಲ್ಲಿರುವ ವೈಷಮ್ಯಗಳು ಗಮನಕ್ಕೆ ಬರಲಿದೆ. ಜೀವನದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಳ್ಳುವ ಅನಿವಾರ್ಯತೆ ಕಂಡುಬರುತ್ತದೆ. ಹಣಕಾಸಿನ ವಿಚಾರದಲ್ಲಿ ನೀವು ಇನ್ನೊಂದು ಮೆಟ್ಟಿಲು ಹತ್ತುವಂತಾಗಲಿದೆ.
ಮಿಥುನ
ಮಕ್ಕಳು ತಪ್ಪು ಮಾಡಿದಾಗ ಸಿಟ್ಟು ಬಂದರೂ, ತಿಳಿವಳಿಕೆ ಹೇಳುವುದರಿಂದ ಅವರನ್ನು ಸರಿದಾರಿಗೆ ತನ್ನಿ. ಮುಕ್ತ ಮಾತುಕತೆಯಿಂದಾಗಿ ವ್ಯವಹಾರಗಳು ನೀವು ಅಂದುಕೊಂಡ ರೀತಿಯಲ್ಲಿ ನಡೆಯಲಿವೆ.
ಕರ್ಕಾಟಕ
ನಿಮ್ಮ ಜೀವನದ ಸಂಕ್ರಮಣ ಕಾಲದಲ್ಲಿ ಎದುರಿಸಬಹುದಾದ ಗೊಂದಲಗಳಲ್ಲಿ ಸಂಗಾತಿಯು ನಿಮ್ಮ ಬೆನ್ನೆಲುಬಾಗಲಿದ್ದಾರೆ. ನಿಮ್ಮ ಕೆಟ್ಟ ಹಾಗೂ ಅನಾವಶ್ಯಕ ಆಲೋಚನೆಗಳು ಅನಾರೋಗ್ಯವನ್ನು ಅಧಿಕಗೊಳಿಸುವುದು.
ಸಿಂಹ
ಮುಂದಿನ ದಿನಗಳಲ್ಲಿ ನಿಮ್ಮ ಎಲ್ಲಾ ಯೋಜನೆಗಳಲ್ಲಿ ಪ್ರಾಬಲ್ಯ ಸಾಧಿಸುವಿರಿ. ದುಡುಕು ನಿರ್ಧಾರದಿಂದ ವ್ಯವಹಾರದಲ್ಲಿ ಸೋಲಬೇಕಾಗುತ್ತದೆ. ಪ್ರೇಮಿಗಳ ಮನೋಕಾಮನೆಗಳು ಪೂರ್ಣಗೊಳ್ಳುವುದು.
ಕನ್ಯಾ
ಅನಾರೋಗ್ಯದ ಹೊರತಾಗಿಯೂ ಜವಾಬ್ದಾರಿಗಳನ್ನು ನಿಭಾಯಿಸಲೇ ಬೇಕಾದುದು ಮಾನಸಿಕ ಸಂಕಟಕ್ಕೆ ಕಾರಣವಾಗಬಹುದು. ಮಾತೃವರ್ಗದ ಸಂಬಂಧಿಗಳ ಮನೆಯಲ್ಲಿ ಮಂಗಳ ಕಾರ್ಯ ಜರುಗಲಿದೆ.
ತುಲಾ
ನಿಮ್ಮ ಸಹವರ್ತಿಗಳು ಕೆಲವು ಸನ್ನಿವೇಶಗಳಲ್ಲಿ ನಿಮ್ಮ ಪರವಾಗಿರುವಂತೆ ತೋರಿದರೂ, ಆತ ನಂಬಿಕೆಗೆ ಅರ್ಹನಾಗಿರುವುದಿಲ್ಲ. ದಾಂಪತ್ಯದಲ್ಲಿನ ಸಣ್ಣ ಪುಟ್ಟ ವಿಚಾರಗಳಿಂದ ಮಾನಸಿಕ ಅಸಮಾಧಾನ ಮಾಡಿಕೊಳ್ಳದಿರಿ.
ವೃಶ್ಚಿಕ
ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ನೀವು ಸುಲಭವಾಗಿ ಸ್ಥಾನಗಳಿಸಲು ಸಫಲರಾಗುವಿರಿ. ತಾಳ್ಮೆ-ಸಮಾದಾನದಿಂದಾಗಿ ದಾಂಪತ್ಯ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರಕುವುದು.
ಧನು
ವೃತ್ತಿ ಜೀವನದಲ್ಲಿನ ಅಡೆತಡೆಗಳನ್ನು ಸುಲಭವಾಗಿ ನಿವಾರಿಸುವಿರಿ. ಮೇಲಧಿಕಾರಿಯ ಅಪರೂಪದ ಮೃದು ವರ್ತನೆಯಿಂದ ಕೆಲಸ ಕಾರ್ಯಗಳಲ್ಲಿ ತೃಪ್ತಿಯುಂಟಾಗುವುದು. ತಪ್ಪುಗಳನ್ನು ಮಾಡದಿರಿ.
ಮಕರ
ಮರಗೆಲಸ ಮಾಡುವವರಿಗೆ ಹೆಚ್ಚಿನ ಅವಕಾಶಗಳು ಬಂದರೂ, ಕೆಲಸಕ್ಕೆ ಸೋಮಾರಿತನ ಅಡ್ಡಿಯಾಗುವುದು. ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಆಶಾಕಿರಣ ದೊರೆಯಲಿದೆ.
ಕುಂಭ
ವಿದ್ಯಾಭ್ಯಾಸದಲ್ಲಿನ ನಿಮ್ಮ ಸಾಧನೆಗೆ ನಿಮ್ಮ ಗುರುಗಳ ಕಡೆಯಿಂದ ಪ್ರೋತ್ಸಾಹ ಸಿಗುವುದು. ಹೊಸ ಸ್ಥಳದಲ್ಲಿ ಹೊಂದಾಣಿಕೆ ಕಷ್ಟವಾಗಬಹುದು. ಮಕ್ಕಳೊಂದಿಗಿನ ಸುತ್ತಾಟ, ಮಾತುಕತೆ ಮನಸ್ಸಿಗೆ ಹಿತ ತರಲಿದೆ.
ಮೀನ
ಸಂಗಾತಿಯ ಅಪರೂಪದ ಹೊಗಳಿಕೆಯ ಮಾತುಗಳನ್ನು ಕೇಳಿ ಸಂತೋಷಪಡುವಿರಿ. ಶಾಂತ ಚಿತ್ತದಿಂದ ಕೆಲಸ ಮಾಡಿ. ಹಳೆಯ ದುರ್ಘಟನೆಗಳನ್ನು ಮರೆತು ಭವಿಷ್ಯದತ್ತ ಗಮನ ಹರಿಸುವುದು ಉತ್ತಮ.