ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆಪ್ಟೆಂಬರ್ 2 ಸೋಮವಾರ 2024– ಹೊಸ ವಾಹನ ಖರೀದಿಸುವ ಯೋಗವಿದೆ
Published 1 ಸೆಪ್ಟೆಂಬರ್ 2024, 18:51 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಶ್ಚಿತ ಕಾರ್ಯಗಳು ಪ್ರಕೃತಿಯಲ್ಲಿನ ಅನಿಶ್ಚಿತ ಬದಲಾವಣೆಗಳಿಂದಾಗಿ ಹಿಂದುಮುಂದಾಗಬಹುದು. ಹೊಸ ಕೆಲಸವನ್ನು ಆರಂಭ ಮಾಡುವುದು ಸರಿಯಲ್ಲ. ರಾಜಕೀಯ ರಂಗದಲ್ಲಿ ಉತ್ತಮ ಅನುಕೂಲಗಳ ಸಂಭವವಿದೆ.
ವೃಷಭ
ಅಣ್ಣ-ತಮ್ಮಂದಿರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಮನೆಯಲ್ಲಿ ಆಗಾಗ ಅಶಾಂತಿಯ ವಾತಾವರಣ ಸೃಷ್ಟಿಯಾಗಬಹುದು. ನಿವೇಶನ ಖರೀದಿಸುವ ಯೋಜನೆ ಹಾಕಿಕೊಳ್ಳಬಹುದು.
ಮಿಥುನ
ಕನ್ನಡ ಅಥವಾ ಮಾತೃಭಾಷೆಯ ಸಾಹಿತ್ಯದಲ್ಲಿ ಸಂಶೋಧನೆ ನಡೆಸುತ್ತಿರುವವರಿಗೆ ಸಮ್ಮಾನವಾಗುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ ಪರಿಶ್ರಮ ಮತ್ತು ದೇವರ ಕೃಪಾಕಟಾಕ್ಷ ಪಡೆಯಬೇಕಾಗುವುದು.
ಕರ್ಕಾಟಕ
ನಿಮ್ಮ ಜತೆ ಸ್ಪರ್ಧಿಸುತ್ತಿದ್ದವರಿಗೆ ನೀವು ಎಚ್ಚರ ತಪ್ಪಿದಲ್ಲಿ ಜಯ ಸಿಗುವುದು. ಸಮಯವನ್ನು ಅರಿತು ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ. ಹೆಚ್ಚಿನ ಉತ್ಸಾಹವಿರುವುದು.
ಸಿಂಹ
ಮನೆಯ ಹಿರಿಯರ ಮಧ್ಯಸ್ಥಿಕೆಯಿಂದ ವಿವಾದಗಳು ಬಗೆಹರಿದು ಪುನಃ ಮೊದಲಿನಂತೆ ಸಂಬಂಧ ಗಟ್ಟಿಯಾಗಲಿದೆ. ಹತ್ತಾರು ಜನರಿಗೆ ಮಾರ್ಗದರ್ಶಕ ವ್ಯಕ್ತಿಯಾಗಿ ನೇಮಕಗೊಳ್ಳುವ ಯೋಗವಿದೆ.
ಕನ್ಯಾ
ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂಥ ಸಂದರ್ಭಗಳಿವೆ. ಸತ್ಯ ಮಾರ್ಗದಿಂದ ಕಾರ್ಯ ಪ್ರವೃತ್ತರಾದಲ್ಲಿ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ಹೊಸ ವಾಹನ ಖರೀದಿಸುವ ಯೋಗವಿದೆ.
ತುಲಾ
ಪ್ರಕೃತಿಸಹಜವಾದ ಅವಿನಾಭಾವ ಸಂಬಂಧಗಳನ್ನು ಕಂಡು ನಿಮ್ಮಲ್ಲಿನ ಸಾಹಿತ್ಯ ಅಥವಾ ಚಿತ್ರಕಲಾ ಪ್ರಜ್ಞೆಯು ಎಚ್ಚೆತ್ತುಕೊಳ್ಳುವುದು. ಪುಸ್ತಕ ಮುದ್ರಕ ಹಾಗೂ ಮಾರಾಟಗಾರರಿಗೆ ಅಧಿಕ ಕೆಲಸ ಇರುತ್ತದೆ.
ವೃಶ್ಚಿಕ
ವಾತ ಅಥವಾ ಪಿತ್ತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಾಣಾಯಾಮ ಯೋಗದಂಥ ಮಾರ್ಗ ಉತ್ತಮ . ದುರ್ಗಾ ದೇವಿಯನ್ನು ಆರಾಧಿಸಿದಲ್ಲಿ ಶುಭವು ಪ್ರಾಪ್ತಿಯಾಗುವುದು.
ಧನು
ಪತ್ನಿಯ ಮೇಲೆ ಗೌರವ ಹೆಚ್ಚಾಗುವುದು. ಇಷ್ಟ ಬಂಧುಗಳಿಂದ ವಿಶೇಷ ವಸ್ತು ಉಡುಗೊರೆಯ ರೂಪದಲ್ಲಿ ದೊರೆಯುವುದು. ಹಾಲು ಮಾರಾಟಗಾರರಿಗೆ ಲಾಭ ಇರುವುದು.
ಮಕರ
ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಮನೆಯಲ್ಲಿ ನಡೆಯಲಿದೆ. ಔದ್ಯೋಗಿಕವಾಗಿ ಅನುಭವಸ್ಥರಿಂದ ಕೇಳಿ ಪಡೆದ ಸಲಹೆ ಸೂಚನೆಗಳಿಂದಾಗಿ ಅಭಿವೃದ್ಧಿ ಹೊಂದುವಿರಿ.
ಕುಂಭ
ಮನೆಯಲ್ಲಿ ದೇವರ ಪ್ರಾರ್ಥನೆಯನ್ನು ನಡೆಸಿದ ನಂತರ ದೊರೆತ ಸಂತಾನಭಾಗ್ಯದ ಫಲವಾಗಿ ಹರ್ಷ ತುಂಬಿರುತ್ತದೆ. ವಾತಾವರಣದ ಫಲವಾಗಿ ಮಂಡಿಯಲ್ಲಿ ನೋವು ಕಾಣಿಸುತ್ತದೆ. ಹಸಿರು ಬಣ್ಣ ಶುಭ ತರುವುದು.
ಮೀನ
ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ತರಬೇತಿಗಳನ್ನು ತೆಗೆದುಕೊಳ್ಳಲು ಯೋಚನೆ ನಡೆಸುವಿರಿ. ಮಗನಿಗೆ ಹೆಚ್ಚಿನ ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಕುಟುಂಬ ಸಂತಸದಲ್ಲಿರುವುದು.