ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರ ಮನೆಯಲ್ಲಿ ಸಡಗರದ ವಾತಾವರಣವಿರುತ್ತದೆ
Published 2 ಡಿಸೆಂಬರ್ 2023, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೇವಲ ಯಶಸ್ಸಿನ ಮೇಲೆ ಗಮನವಹಿಸುವುದಕ್ಕಿಂತ ಪರಿಶ್ರಮದ ಮೇಲೂ ಗಮನಹರಿಸಬೇಕು. ನಿಮ್ಮ ಯಾಂತ್ರಿಕ ಬದುಕಿನಿಂದ ತುಸು ವಿರಾಮ ಪಡೆಯಲು ಸಾಧ್ಯವಾಗುತ್ತದೆ. ಮನೆ ಕಡೆಗೂ ಗಮನಹರಿಸಬೇಕು.
ವೃಷಭ
ವಾದ ಮಾಡುವ ಬದಲು ಕುಟುಂಬದ ನೆಮ್ಮದಿಗಾಗಿ ಸೋಲು ಒಪ್ಪಿಕೊಳ್ಳುವುದು ಉತ್ತಮ. ದ್ವಿಚಕ್ರ ವಾಹನಗಳ ಮಾರಾಟಗಾರರು ಭರ್ಜರಿ ವಹಿವಾಟು ನಡೆಸಲಿದ್ದಾರೆ. ಬರಹಗಾರರಿಗೆ ವಿಫುಲ ಅವಕಾಶಗಳಿವೆ.
ಮಿಥುನ
ಕಳೆದು ಹೋದ ಅತಿ ಅಮೂಲ್ಯ ವಸ್ತು ಬಹಳ ದಿನದ ನಂತರ ನಿಮ್ಮ ಕೈ ಸೇರಲಿದೆ. ಮಕ್ಕಳ ಒಡನಾಟದಿಂದ ಹೆಚ್ಚಿನ ಸಂತೃಪ್ತಿ ಸಿಗಲಿದೆ. ಸಾಂಸ್ಕೃತಿಕ ರಂಗದಲ್ಲಿ ಮೇಲ್ಮಟ್ಟದ ಸಾಧನೆ ಮಾಡಬಹುದು.
ಕರ್ಕಾಟಕ
ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದು ಕೃಷಿಕರ ಬಾಳಿನಲ್ಲಿ ಆಶಾಕಿರಣ ಮೂಡಲಿದೆ. ಅಬಕಾರಿ ಗುತ್ತಿಗೆದಾರರಿಗೆ ಉತ್ತಮ ಆದಾಯವಿರಲಿದೆ. ವಿರೋಧಿಗಳ ಉಪಟಳದ ನಡುವೆ ಬದುಕು ಕಷ್ಟ.
ಸಿಂಹ
ಪದೇಪದೇ ಎದುರಾಗುವ ಅಡ್ಡಿ–ಆತಂಕ, ಭೀತಿ, ಮನೋವ್ಯಾಕುಲಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಪತಿ–ಪತ್ನಿಯರು ತಾಳ್ಮೆ, ಸಮಾಧಾನದಿಂ ಇರುವುದು ಉತ್ತಮ. ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರುವುದಿಲ್ಲ.
ಕನ್ಯಾ
ಸ್ನೇಹಿತನ ಮೇಲಿದ್ದ ಸಂಶಯ, ಅಪನಂಬಿಕೆಯ ಮನಸ್ಥಿತಿಗೆ ಪುಷ್ಟಿ ಸಿಗುವ ಸನ್ನಿವೇಶಗಳು ನಡೆಯಲಿದೆ. ರೈಲ್ವೆ ಕಾರ್ಮಿಕರಿಗೆ ವೇತನ ಹೆಚ್ಚಳವಾಗುವ ಸಾಧ್ಯತೆಗಳಿವೆ. ತರಕಾರಿ ಬೆಳೆಗಾರರಿಗೆ ದುಪ್ಪಟ್ಟು ಲಾಭವಾಗಲಿದೆ.
ತುಲಾ
ಜಾಣ್ಮೆಯಿಂದ ವ್ಯವಹರಿಸುವ ಫಲವಾಗಿ ಸಮಾಜದಲ್ಲಿ ಹೆಚ್ಚಿನ ಗೌರವ ಪಡೆಯುವಿರಿ. ವೈಯಕ್ತಿಕ ಪ್ರಗತಿ, ಅಭಿವೃದ್ಧಿಯಿಂದ ಮನಸ್ಸಿಗೆ ಸಂತೋಷವಿರಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮದ ಅಗತ್ಯವಿದೆ.
ವೃಶ್ಚಿಕ
ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಜ್ಞಾನಾರ್ಜನೆಯಾಗುತ್ತದೆ. ಹವ್ಯಾಸಿ ಛಾಯಾಗ್ರಾಹಕರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಮನೆಯಲ್ಲಿ ಸಡಗರದ ವಾತಾವರಣವಿರುತ್ತದೆ.
ಧನು
ಮಕ್ಕಳ ಭವಿಷ್ಯದ ಮಾರ್ಗ ಗಮನಿಸಿ, ಪ್ರೋತ್ಸಾಹಿಸಬೇಕು. ದಾನ-ಧರ್ಮ ಪ್ರವೃತ್ತಿ ರೂಢಿಸಿಕೊಳ್ಳುವುದರಿಂದ ಕೆಲವು ಶುಭ ಫಲಗಳು ನಿಮ್ಮ ಅನುಭವಕ್ಕೆ ಬರಲಿವೆ. ಹಳೆಯ ಭೀತಿಗಳಿಂದ ಹೊರಬರಲಿದ್ದೀರಿ.
ಮಕರ
ನಿಮ್ಮ ಸಂಗಡಿಗರು ಮಾಡಿದ ತಪ್ಪಿನಿಂದ ನೀವು ಹೊಸ ನಿರ್ಧಾರ ಕೈಗೊಳ್ಳಬೇಕಾಗಲಿದೆ. ಆಸ್ತಿ ಮಾರಾಟಗಳ ವಹಿವಾಟುಗಳಲ್ಲಿ ಎಣಿಕೆಗೂ ಮೀರಿದ ಲಾಭ ಬರಲಿದೆ. ಜವಳಿ ವ್ಯಾಪಾರಿಗಳಿಗೆ ಲಾಭವಾಗಲಿದೆ.
ಕುಂಭ
ಮರದ ವ್ಯವಹಾರ ಮಾಡುವವರಿಗೆ ಉತ್ತಮ ಆರ್ಥಿಕ ಮುನ್ನಡೆ ತೋರಿಬರುತ್ತದೆ. ವೈವಾಹಿಕ ಮಾತುಕತೆಗಳಲ್ಲಿ ಹಿತಕರವಾದ ಬೆಳವಣಿಗೆ ಇರುವುದು. ಪುತ್ರರೊಡನೆ ಕೆಲಸದ ಬಗ್ಗೆ ಸಮಾಲೋಚನೆ ನಡೆಸಬೇಕು.
ಮೀನ
ಹೆಚ್ಚಿನ ಅಧ್ಯಯನಕ್ಕೆ ಮನೆಯವರಿಂದ ಉತ್ತೇಜನ ಸಿಗಲಿದೆ. ತಂದೆ ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಣ್ಣುಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಸುಬ್ರಮಣ್ಯನ ಸೇವೆ ಮಾಡಿರಿ.