ಹೊಸಕೋಟೆ: ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ ವೇಯಲ್ಲಿ ಹೊಸಕೋಟೆ ಎಂ.ಸತ್ಯವಾರ ಬಳಿ ಶುಕ್ರವಾರ ಮುಂಜಾನೆ 4.30ಕ್ಕೆ ಸಂಭವಿಸಿದ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಆರು ವಿದ್ಯಾರ್ಥಿಗಳು, ಬೈಕ್ ಸವಾರ ಸೇರಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದೇವನಹಳ್ಳಿ ತಾಲ್ಲೂಕಿನ ದೇವನಾಯಕನಹಳ್ಳಿ ನಿವಾಸಿ, ಬೈಕ್ ಸವಾರ ಗಗನ್ (26), ಎಕ್ಸ್ಯುವಿ 700 ಕಾರಿನಲ್ಲಿದ್ದ ಕೇರಳ ಮೂಲದ ಬೆಂಗಳೂರು ಕೊತ್ತನೂರು ನಿವಾಸಿಗಳಾದ ಅಶ್ವಿನ್ ನಾಯರ್ (17), ಅಯಾನ್ ಅಲಿ (17), ಹುಳಿಮಾವು ಈಥನ್ ಜಾರ್ಜ್ (17), ಫ್ರೇಜರ್ ಟೌನ್ ಭರತ್ (17), ಎಚ್ಬಿಆರ್ ಬಡಾವಣೆಯ ಆಶ್ರಮ್ ಷರೀಫ್ (16), ಕಮ್ಮನಹಳ್ಳಿ ಫರಾನ್ ಶೇಖ್ (18) ಮೃತರು.

ಆಗಿದ್ದು ಏನು?:

ಹೊಸಕೋಟೆಯಿಂದ ದೇವನಹಳ್ಳಿ ಕಡೆಗೆ ಜಾಲಿ ರೈಡ್ ಹೋಗಲು ವಿದ್ಯಾರ್ಥಿಗಳು ನಿರ್ಧರಿ ಸಿದ್ದರು. ಅದರಂತೆ ಅಯಾನ್ ಅಲಿ ಪೋಷಕರ ಎಕ್ಸ್ಯುವಿ 700ರಲ್ಲಿ ತೆರಳಿದ್ದು, ಅದನ್ನು ಅತಿ ವೇಗದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೈಕ್ಗೆ ಕಾರು ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿ ಮುಂದಿದ್ದ ಕ್ಯಾಂಟರ್ ಗೂ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕ್ಯಾಂಟರ್ ಚಾಲಕ ಬಾಲಸುಬ್ರಮಣ್ಯ ಅವರನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ವಿದ್ಯಾರ್ಥಿಗಳು ಬೆಂಗಳೂರಿನ ವಿವಿಧ ಶಾಲೆ ಹಾಗೂ ಕಾಲೇಜುಗಳಲ್ಲಿ ಪ್ರಥಮ ಪಿಯು, ಎಸ್ಎಸ್ಎಲ್ಸಿ ಓದುತ್ತಿದ್ದರು. ಅಶ್ವಿನ್ ನಾಯರ್, ಈಥನ್ ಜಾರ್ಜ್ ಸ್ನೇಹಿತರು. ಇಬ್ಬರು ಯಲಹಂಕ ಆರ್.ವಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದರು. ಅಯಾನ್ ಅಲಿ, ಆಶ್ರಮ್ ಷರಿಫ್ ಸಿಎಂಆರ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದರು. ಭರತ್ ಫ್ರೇಜರ್ ಟೌನ್ ಶೋಭನಾ ಮೆಮೋರಿಯಲ್ ಶಾಲೆಯಲ್ಲಿ ಎಸ್ಎಸ್ಎಲ್ಸಿ, ಫರಾನ್ ಶೇಖ್ ಕಮ್ಮನಹಳ್ಳಿಯಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದ.

‘ಮೃತರು ಒಂದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಲ್ಲ. ಪರಸ್ಪರ ಪರಿಚಯ ಹೇಗಾಯಿತು ಎಂಬುದರ ಮಾಹಿತಿ ತಿಳಿದಿಲ್ಲ. ಇವರೆಲ್ಲರೂ ಜಾಲಿ ರೈಡ್ಗೆ ಹೋಗಿರುವುದು ಪೋಷಕರಿಗೆ ತಿಳಿದಿರಲಿಲ್ಲ’ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಅಪಘಾತದ ತೀವ್ರತೆಗೆ ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿದ್ದವು. ಕಾರಿನಿಂದ ಹೊರತೆಗೆಯುವುದೇ ಸವಾಲಾಗಿತ್ತು. ಮೊಬೈಲ್ ಟವರ್ ಪತ್ತೆ ಹಚ್ಚಿ ಪೋಷಕರಿಗೆ ಮಾಹಿತಿ ನೀಡಲಾಯಿತು. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಟೈರ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಾರು ಡಿಕ್ಕಿ ಹೊಡೆದಿದ್ದ ರಭಸಕ್ಕೆ ಕ್ಯಾಂಟರ್ ಪಲ್ಟಿ ಹೊಡೆದು ರಸ್ತೆ ಬದಿಗೆ ಉರುಳಿ ಬಿದ್ದಿತ್ತು. ಇದೇ ರಸ್ತೆಯಲ್ಲಿ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಆದರೆ, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅತಿವೇಗ ಹಾಗೂ ದಟ್ಟ ಮಂಜು ಆವರಿಸಿದ್ದರಿಂದ ಅಪಘಾತ ಸಂಭವಿಸಿದೆ. ಯಾರು ಕಾರು ಚಲಾಯಿಸುತ್ತಿದ್ದರು ಎಂಬುದು ಪತ್ತೆಯಾಗಿಲ್ಲ. ಕಾರು ಓಡಿಸುತ್ತಿದ್ದವರು ಅಪ್ರಾಪ್ತರು ಎಂದು ಪತ್ತೆಯಾದರೆ ಕಾರಿನ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.