ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಅರ್ದಂಬರ್ಧ ಪ್ರೇಮಕಥೆ’ಯ ನಟಿ ದಿವ್ಯಾ ಉರುಡುಗ ಸಂದರ್ಶನ

Published : 21 ಸೆಪ್ಟೆಂಬರ್ 2023, 23:30 IST
Last Updated : 21 ಸೆಪ್ಟೆಂಬರ್ 2023, 23:30 IST
ಫಾಲೋ ಮಾಡಿ
Comments
ಅರವಿಂದ್ ಕೌಶಿಕ್ ನಿರ್ದೇಶನದ `ಹುಲಿರಾಯ' ಚಿತ್ರದಿಂದ ತಮ್ಮ ಸಿನಿಪಯಣ ಆರಂಭಿಸಿದ್ದ ನಟಿ ದಿವ್ಯಾ ಉರುಡುಗ, ಇದೀಗ ಮತ್ತೆ ಅರವಿಂದ್‌ ಸಾರಥ್ಯದ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್‌ನಲ್ಲಿ ಜೊತೆಯಾದ ಅರವಿಂದ್‌ ಕೆ.ಪಿ.–ದಿವ್ಯಾ ಜೋಡಿ ಇದೀಗ ‘ಅರ್ದಂಬರ್ಧ ಪ್ರೇಮಕಥೆ’ ಮೂಲಕ ಬೆಳ್ಳಿತೆರೆಗೂ ಹೆಜ್ಜೆ ಇಡುತ್ತಿದೆ. ಈ ಕುರಿತು ದಿವ್ಯಾ ಜೊತೆ ಮಾತಿಗಿಳಿದಾಗ...
ಆನ್‌ಸ್ಕ್ರೀನ್‌ ಜೋಡಿ ಆಫ್‌ಸ್ಕ್ರೀನ್‌ನಲ್ಲಿ ಜೋಡಿಯಾಗೋದು ಯಾವಾಗ?
ಪ್ರೀತಿಯ ನಿವೇದನೆ(ಪ್ರಪೋಸ್‌) ಮಾಡಿಕೊಳ್ಳುವ ಕ್ಷಣ ತುಂಬಾ ವಿಶೇಷವಾಗಿರಬೇಕು ಎನ್ನುವ ಯೋಚನೆ ನನ್ನಲ್ಲಿ ಇತ್ತು. ಯಾರೋ ಹೇಳಿಸಿ ಮಾಡಿಸಿ ಅಥವಾ ನಾನು ಕೇಳಿ ಮಾಡಿಕೊಳ್ಳಬಾರದು ಎನ್ನುವುದು ನನ್ನ ಯೋಚನೆಯಾಗಿತ್ತು. ಆದರೆ ಇತ್ತೀಚೆಗೆ ರಿಯಾಲಿಟಿ ಶೋದಲ್ಲಿ ಹೇಳಿ ಮಾಡಿಸಿದ್ದು ನಿಜವಾಗಿಯೂ ಇಷ್ಟ ಆಗಲಿಲ್ಲ. ಆ ಕ್ಷಣ ಇಷ್ಟವಾದರೂ ಹೇಳಿಸಿ ಮಾಡಿಸಬಾರದು ಎಂದೆನಿಸಿತು. ವೇದಿಕೆಯಲ್ಲಿ ಒತ್ತಾಯಕ್ಕೆ ಅವರು ಹೇಳಿದ ಹಾಗೆ ಮಾಡಬೇಕಾಗಿ ಬರುತ್ತದೆ. ಅಲ್ಲಿಯೂ ನಾವು ‘ಐ ಲವ್‌ ಯೂ’ ಎಂದಿಲ್ಲ. ಮನಸಾರೆ ಪ್ರಪೋಸ್‌ ಮಾಡುವ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೇನೆ. ಅದುವೇ ನೈಜ. ನಿಜ ಹೇಳಬೇಕೆಂದರೆ ನಾನು ಹಾಗೂ ಅವಿ ಇಲ್ಲಿಯವರೆಗೂ ಒಬ್ಬರಿಗೊಬ್ಬರು ‘ಐ ಲವ್‌ ಯು’ ಎಂದಿಲ್ಲ. ಹೋದಲ್ಲೆಲ್ಲಾ ‘ಮದುವೆ ಯಾವಾಗ?’ ಎನ್ನುವ ಪ್ರಶ್ನೆ ಸಾಮಾನ್ಯವಾಗಿದೆ. ಮನೆಯ ಕಡೆಯಿಂದಲೂ ಮದುವೆಗೆ ಒತ್ತಾಯವಿದೆ. ಅರವಿಂದ್‌ಗೆ ಮದುವೆ ಕುರಿತಾಗಿ ಯಾರಾದರೂ ಪ್ರಶ್ನಿಸಿದರೆ ಅವರು ಹೇಳುವ ಉತ್ತರವೇ ನನ್ನ ಉತ್ತರ ಆಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT