ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

115 ದಿನಗಳ ಬಳಿಕ ಎಎಪಿ MP ರಾಘವ್‌ ಛಡ್ಡಾ ಅಮಾನತು ಆದೇಶ ಹಿಂಪಡೆದ ರಾಜ್ಯಸಭೆ

Published 4 ಡಿಸೆಂಬರ್ 2023, 10:22 IST
Last Updated 4 ಡಿಸೆಂಬರ್ 2023, 10:22 IST
ಅಕ್ಷರ ಗಾತ್ರ

ನವದೆಹಲಿ: ಎಎಪಿ ಸಂಸದ, ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಅವರು ಸಂಸತ್ತಿಗೆ ವಾಪಸ್‌ ಬಂದಿದ್ದಾರೆ. ಈವರೆಗೆ ನೀಡಿದ್ದ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಮತ್ತು ರಾಜ್ಯ ಸಭಾಧ್ಯಕ್ಷರಿಗೆ ವಿಡಿಯೊ ಸಂದೇಶದ ಮೂಲಕ ರಾಘವ್‌ ಧನ್ಯವಾದ ಹೇಳಿದ್ದಾರೆ. 

ಅಮಾನತನ್ನು ರದ್ದುಗೊಳಿಸಬೇಕೆಂದು ಸುಪ್ರೀಂಕೋರ್ಟ್‌ ಬಳಿ ಮನವಿ ಮಾಡಿದ್ದೆ. ಬರೋಬ್ಬರಿ 115 ದಿನಗಳ ಬಳಿಕ ಅಮಾನತು ಕೊನೆಗೊಂಡಿದೆ. ಈ ಅವಧಿಯಲ್ಲಿ ಹಲವರು ಪ್ರೀತಿ ಮತ್ತು ಧೈರ್ಯ ತುಂಬಿದ್ದೀರಿ. ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.

ಅಮಾನತಿನಲ್ಲಿರುವಾಗ ಸಂಸತ್ತಿನ ಒಳಗೆ ನಿಮ್ಮ (ಜನರ) ಪ್ರಶ್ನೆಗಳನ್ನು ಕೇಳಲು ಮತ್ತು ಸದನದಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತಲು ಸಾಧ್ಯವಾಗಲಿಲ್ಲ ಎಂದು ವಿಡಿಯೊ ಸಂದೇಶದಲ್ಲಿ ಜನರ ಕ್ಷಮೆ ಕೋರಿದ್ದಾರೆ

ಸವಲತ್ತುಗಳ ಉಲ್ಲಂಘನೆಯ ಆರೋಪದ ಮೇರೆಗೆ ರಾಘವ್ ಛಡ್ಡಾ ಅವರನ್ನು ರಾಜ್ಯಸಭೆಯಿಂದ ಆಗಸ್ಟ್‌ನಲ್ಲಿ ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT