ನವದೆಹಲಿ: ಸೇವೆ ರದ್ದು ಮಾಡಿದ ವಿಮಾನಗಳ ಟಿಕೆಟ್ನ ಸಂಪೂರ್ಣ ದರವನ್ನು ಭಾನುವಾರ ಸಂಜೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಬೇಕು ಎಂದು ಇಂಡಿಗೊ ಸಂಸ್ಥೆಗೆ ಕೇಂದ್ರ ವಿಮಾನಯಾನ ಸಚಿವಾಲಯ ನಿರ್ದೇಶಿಸಿದೆ. ಅಲ್ಲದೆ ಎರಡು ದಿನಗಳ ಒಳಗಾಗಿ ಪ್ರಯಾಣಿಕರ ಬ್ಯಾಗೇಜುಗಳನ್ನು ಹಿಂದಿರುಗಿಸಬೇಕು ಎಂದಿದೆ.
.ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ.
ಅಲ್ಲದೆ ಮರುಪಾವತಿ ವಿಳಂಬ ಅಥವಾ ಮರುಪಾವತಿ ಆದೇಶವನ್ನು ಉಲ್ಲಂಘಿಸಿದರೆ ತಕ್ಷಣವೇ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದೆ.

ಕಳೆದ ಐದು ದಿನಗಳಿಂದ ಇಂಡಿಗೊದ ಸಾವಿರಕ್ಕೂ ಅಧಿಕ ವಿಮಾನಗಳು ರದ್ದಾಗಿದ್ದರಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು.

ರದ್ದುಗೊಂಡ ಎಲ್ಲಾ ವಿಮಾನಗಳ ಟಿಕೆಟ್ ದರವನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಮರುಪಾವತಿ ಮಾಡಬೇಕು ಎಂದು ಹೇಳಿದೆ.
.ವಿಮಾನ ಸಂಚಾರದಲ್ಲಿ ವ್ಯತ್ಯಯ: ಇಂಡಿಗೊ ಮಾಲೀಕರು ಯಾರು?.
‘ವಿಮಾನ ರದ್ದಾಗಿದ್ದರಿಂದ ಪ್ರಯಾಣ ಮರುನಿಗದಿ ಮಾಡಿರುವ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ’ ಎಂದು ಪ್ರಕಟಣೆ ತಿಳಿಸಿದೆ.

ಸಮರ್ಪಿತ ಪ್ರಯಾಣಿಕರ ಸೇವೆ ಹಾಗೂ ಮರುಪಾವತಿ ವ್ಯವಸ್ಥೆಯನ್ನು ಸ್ಥಾಪಿಸಬೇಕು ಎಂದೂ ಇಂಡಿಗೊಗೆ ನೀಡಿದ ನಿರ್ದೇಶನದಲ್ಲಿ ಹೇಳಲಾಗಿದೆ.

ಶನಿವಾರ ಇಂಡಿಗೊದ 400ಕ್ಕೂ ಅಧಿಕ ವಿಮಾನಗಳು ರದ್ದುಗೊಂಡಿವೆ.
.ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.