ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ– ಕಮಲಾ ಮೌಲಾ ಮಸೀದಿಯಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ (ಇದೇ 23) ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.

ಇದೇ ವೇಳೆ ಅಂದು ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಮುಸ್ಲಿಮರಿಗೆ ನಮಾಜ್ ಮಾಡಲೂ ನ್ಯಾಯಾಲಯ ಸಮ್ಮತಿಸಿದೆ. ಎರಡೂ ಧರ್ಮದವರು ಪರಸ್ಪರ ಗೌರವ, ಸೌಹಾರ್ದದಿಂದ ಇರಬೇಕು ಮತ್ತು ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕು ಎಂದೂ ಅದು ಸೂಚಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠವು, ಅಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ನಮಾಜ್ ಮಾಡುವವರ ಪಟ್ಟಿ ಸಲ್ಲಿಸಲು ಸೂಚನೆ

ಅಂದು, ಈ ಮಸೀದಿಯಲ್ಲಿ ನಮಾಜ್ ಮಾಡಲು ಬರುವ ಮುಸ್ಲಿಂ ಸಮುದಾಯದ ವ್ಯಕ್ತಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಪೀಠ ಸೂಚನೆ ನೀಡಿದೆ.

ಭೋಜಶಾಲಾ ಆವರಣದಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ ಸರಸ್ವತಿ ಪೂಜೆ ಸೇರಿದಂತೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವಂತೆ ಹಿಂದೂ ಗುಂಪು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಶುಕ್ರವಾರ ನಮಾಜ್ಗೆ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಮುಸ್ಲಿಂ ಗುಂಪು ಸಹ ಮನವಿ ಮಾಡಿತ್ತು.

ಹಿಂದೂ ಅರ್ಜಿದಾರರ ಪರ ವಾದ ಮಾಡಿದ ಹಿರಿಯ ವಕೀಲ ವಿಷ್ಣುಶಂಕರ್ ಜೈನ್, ‘ಬಸಂತ ಪಂಚಮಿ ಶುಕ್ರವಾರವೇ ಬಂದಿರುವುದು ಕಾಕತಾಳೀಯ. ಅಂದು ಬೋಜಶಾಲಾದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಬೇಕು’ ಎಂದು ಕೋರಿದರು.

ಮಸೀದಿ ಸಮಿತಿ ಪರ ವಾದಿಸಿದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್, ‘ಶುಕ್ರವಾರ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ನಮಾಜ್ ನಡೆಯಲಿದ್ದು, ಆ ಬಳಿಕ ಸ್ಥಳವನ್ನು ಖಾಲಿ ಮಾಡಲಾಗುವುದು’ ಎಂದು ಹೇಳಿದರು. ಇದಕ್ಕೂ ಮುನ್ನ ಸಂಜೆ ಐದು ಗಂಟೆ ಬಳಿಕ ನಮಾಜ್ ಮಾಡಲು ಸಾಧ್ಯವೇ ಎಂದು ಖುರ್ಷಿದ್ ಅವರನ್ನು ಕೇಳಲಾಯಿತು. ‘ನಮಾಜ್ ವೇಳಾಪಟ್ಟಿಯನ್ನು ಬದಲಿಸಲಾಗದು’ ಎಂದು ಅವರು ಪೀಠದ ಗಮನಕ್ಕೆ ತಂದರು.

ಉಳಿದಂತೆ ಪ್ರಸ್ತಾವವನ್ನು ಒಪ್ಪಿಕೊಂಡ ಖುರ್ಷಿದ್ ಅವರು, ನಮಾಜ್ ಮಾಡಲು ಎಷ್ಟು ಜನ ಬರಬಹುದು ಎಂಬುದರ ಪಟ್ಟಿಯನ್ನು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಜತೆ ಹಂಚಿಕೊಳ್ಳಲಾಗುವುದು ಎಂದರು.
.ಭೋಜಶಾಲಾ ಸಮೀಕ್ಷೆ: ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ.ಮಧ್ಯಪ್ರದೇಶ ಲೋಕಸಭಾ ಚುನಾವಣೆ | ಭೋಜಶಾಲಾ ವಿವಾದ: ಮತದಾರರ ಭಿನ್ನ ಅಭಿಪ್ರಾಯ.
11ನೇ ಶತಮಾನದ ಸ್ಮಾರಕ

ಭೋಜಶಾಲಾ 11ನೇ ಶತಮಾನದ ಐತಿಹಾಸಿಕ ಸ್ಮಾರಕವಾಗಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಅದನ್ನು ಸಂರಕ್ಷಿತ ತಾಣ ಎಂದು ಗುರುತಿಸಿದೆ. ಈ ಸ್ಮಾರಕವು ವಾಗ್ದೇವಿಗೆ (ಸರಸ್ವತಿ ದೇವಿ) ಸಮರ್ಪಿತವಾದದ್ದು ಎಂದು ಹಿಂದೂಗಳು ನಂಬಿದ್ದರೆ, ಮುಸ್ಲಿಮರು ಅದನ್ನು ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸಿದ್ದಾರೆ.

ಭೋಜಶಾಲಾ ಆವರಣದಲ್ಲಿ ಹಿಂದೂಗಳಿಗೆ ಮಂಗಳವಾರ ಪೂಜೆ ಸಲ್ಲಿಸಲು ಮತ್ತು ಮುಸ್ಲಿಂರಿಗೆ ಶುಕ್ರವಾರ ನಮಾಜ್ ಮಾಡಲು ವ್ಯವಸ್ಥೆ ಮಾಡಿ ಎಎಸ್ಐ 2003ರ ಏಪ್ರಿಲ್ 7ರಂದು ಆದೇಶಿಸಿದೆ.

ಭೋಜಶಾಲಾ ತಮ್ಮದು ಎಂದು ಹಿಂದೂಗಳು ಹಾಗೂ ಮುಸ್ಲಿಮರು ಹಕ್ಕು ಪ್ರತಿಪಾದಿಸುತ್ತಾ ಬಂದಿದ್ದಾರೆ. ಇದು ಯಾವ ಸಮುದಾಯಕ್ಕೆ ಸೇರಿದ್ದು ಎಂಬುದನ್ನು ತೀರ್ಮಾನಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದ ಮೇರೆಗೆ ಅಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ. ಆದರೆ ಈ ವಿವಾದ ಕುರಿತು ಹೈಕೋರ್ಟ್ ನಿರ್ಧರಿಸುವವರೆಗೆ ಅಲ್ಲಿ ಯಾವುದೇ ಭೌತಿಕ ಉತ್ಖನನ ನಡೆಸಬಾರದು ಮತ್ತು ವೈಜ್ಞಾನಿಕ ಸಮೀಕ್ಷೆಯ ವರದಿ ಆಧರಿಸಿ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಪೀಠ, ತಾನು 2024ರ ಏಪ್ರಿಲ್ 1ರಂದು ನೀಡಿದ್ದ ತೀರ್ಪನ್ನು ಗುರುವಾರ ಪುನರುಚ್ಚರಿಸಿತು.

ಹೈಕೋರ್ಟ್ ಮುಂದೆ ಬಾಕಿ ಇರುವ ರಿಟ್ ಅರ್ಜಿಗಳನ್ನು ಎರಡು ವಾರಗಳೊಳಗೆ ಹಿರಿಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಕೈಗೆತ್ತಿಕೊಳ್ಳಬೇಕು ಎಂದೂ ನಿರ್ದೇಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.