ನವದೆಹಲಿ: ವಿಪಕ್ಷಗಳ ವಿರೋಧದ ನಡುವೆಯು ವಕ್ಫ್ ತಿದ್ದುಪಡಿ ಮಸೂದೆಯನ್ನು ಇಂದು(ಬುಧವಾರ) ಲೋಕಸಭೆಯಲ್ಲಿ ಮಂಡಿಸಲಾಯಿತು.

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಸೂದೆಯನ್ನು ಮಂಡಿಸಿದ್ದಾರೆ.

ಮಸೂದೆ ಮಂಡಿಸಿ ಮಾತನಾಡಿ ರಿಜಿಜು, ‘1995ರಲ್ಲಿ ಈ ಮಸೂದೆಯನ್ನು ಪರಿಚಯಿಸಿದಾಗ ಯಾರು ವಿರೋಧಿಸಿರಲಿಲ್ಲ. ಈ ಹಿಂದೆಯೂ ಹಲವು ಬಾರಿ ತಿದ್ದುಪಡಿಯಾಗಿದ್ದು ವಿರೋಧಗಳು ಬಂದಿರಲಿಲ್ಲ . ಈಗ ನಾವು ತಿದ್ದುಪಡಿ ಮಾಡಿದಾಕ್ಷಣ ಅಸಂವಿಧಾನಿಕ ಎಂದು ಅರಚುತ್ತಿದ್ದಾರೆ’ ಎಂದರು.

‘ಈ ವಿಚಾರವಾಗಿ 25 ರಾಜ್ಯಗಳ ವಕ್ಫ್ ಬೋರ್ಡ್ಗಳ ಅಭಿಪ್ರಾಯ ಕೇಳಲಾಗಿದೆ. ಮಸೂದೆ ಕುರಿತು 96ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಈ ಮಸೂದೆ ಬಗ್ಗೆ ನಡೆದಷ್ಟು ಚರ್ಚೆ ಯಾವುದರಲ್ಲಿಯೂ ನಡೆದಿಲ್ಲ. ಸಂಸದೀಯ ಜಂಟಿ ಸಮಿತಿಯಲ್ಲೂ ವಿಧೇಯಕದ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.