ನ್ಯೂಯಾರ್ಕ್/ವಾಷಿಂಗ್ಟನ್: ಇತರ ಕಡುವೈರಿ ರಾಷ್ಟ್ರಗಳ ನಡುವೆ ಒಪ್ಪಂದ ಮಾಡಿಕೊಂಡಂತೆ ಸಂಘರ್ಷದಲ್ಲಿ ಮುಳುಗಿರುವ ಇರಾನ್ ಮತ್ತು ಇಸ್ರೇಲ್ ರಾಷ್ಟ್ರಗಳು ಸಹ ಒಪ್ಪಂದ ಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಕಳೆದ ತಿಂಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ವ್ಯಾಪಾರದ ದೃಷ್ಟಿಕೋನವನ್ನು ಬಳಸಿಕೊಂಡು ನಿಲ್ಲಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.

ಟ್ರೂತ್ ಸೋಷಿಯಲ್ನಲ್ಲಿನ ಪೋಸ್ಟ್ನಲ್ಲಿ, ಟ್ರಂಪ್, ಈ ವಿಷಯದ ಕುರಿತು ಈಗ ಹಲವು ದೂರವಾಣಿ ಕರೆಗಳು ಬರುತ್ತಿದ್ದು, ಸಭೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ನಾನು ಭಾರತ ಮತ್ತು ಪಾಕಿಸ್ತಾನದ ನಡುವೆ ಒಪ್ಪಂದ ಮಾಡಿಸಿದಂತೆ ಇರಾನ್ ಮತ್ತು ಇಸ್ರೇಲ್ ಸಹ ಒಪ್ಪಂದ ಮಾಡಿಕೊಳ್ಳಬೇಕು. ಆ ಸಂದರ್ಭದಲ್ಲಿ, ಅಮೆರಿಕದೊಂದಿಗೆ ವ್ಯಾಪಾರದ ವಿಷಯವನ್ನು ಇಟ್ಟುಕೊಂಡು ಎರಡೂ(ಭಾರತ–ಪಾಕ್) ದೇಶಗಳು ಒಪ್ಪಂದಕ್ಕೆ ಬರುವಂತೆ ಮಾಡಿದೆ ಎಂದಿದ್ದಾರೆ.

ಆದರೆ, ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿದ್ದ ಭಾರತ, ಯಾವುದೇ ಮೂರನೇ ವ್ಯಕ್ತಿಯ ಒಳಗೊಳ್ಳುವಿಕೆ ಇಲ್ಲದೆ ನಾಲ್ಕು ದಿನಗಳ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10ರಂದು ಒಪ್ಪಂದಕ್ಕೆ ಬಂದಿವೆ ಎಂದು ಹೇಳಿತ್ತು.

ಇಸ್ರೇಲ್ ಶುಕ್ರವಾರ ಮುಂಜಾನೆ ಇರಾನ್ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು. ಬಳಿಕ, ಇರಾನ್, ಇಸ್ರೇಲ್ ಮೇಲೆ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿತ್ತು. ಇರಾನಿನ ಕ್ಷಿಪಣಿಗಳು ಟೆಲ್ ಅವಿವ್ನಲ್ಲಿರುವ ಕಟ್ಟಡಗಳಿಗೆ ಅಪ್ಪಳಿಸಿದ್ದವು.

ತಮ್ಮ ಪೋಸ್ಟ್ನಲ್ಲಿ ಇತರೆ ದೇಶಗಳ ನಡುವೆ ಸಂಘರ್ಷ ಅಂತ್ಯಗೊಳಿಸಿದ ವಿಷಯವನ್ನೂ ಟ್ರಂಪ್ ಪ್ರಸ್ತಾಪಿಸಿದ್ದಾರೆ.

ತಮ್ಮ ಮೊದಲ ಅವಧಿಯಲ್ಲಿ ಸೆರ್ಬಿಯಾ ಮತ್ತು ಕೊಸೊವೊ ಯುದ್ಧ ಕೊನೆಗೊಳಿಸಿದ್ದೆ.ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವಿನ ಸಂಘರ್ಷವನ್ನು ಸಹ ನಿಲ್ಲಿಸಿದ್ದೆ ಎಂದಿದ್ದಾರೆ

ಅದೇ ರೀತಿ, ಇಸ್ರೇಲ್ ಮತ್ತು ಇರಾನ್ ನಡುವೆ ಶೀಘ್ರದಲ್ಲೇ ಶಾಂತಿ ಒಪ್ಪಂದ ಆಗುವ ನಿರೀಕ್ಷೆ ಇದೆ. ಈ ಸಂಬಂಧ ಹಲವು ಕರೆಗಳು ಬರುತ್ತಿದ್ದು, ಸಭೆಗಳು ನಡೆಯುತ್ತಿವೆ. ಮಧ್ಯಪ್ರಾಚ್ಯವನ್ನು ಮತ್ತೆ ಶ್ರೇಷ್ಠಗೊಳಿಸಬೇಕಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.