ವಾಷಿಂಗ್ಟನ್: ‘ದೇಶದ ವಿವಿಧ ಭಾಗಗಳಲ್ಲಿ ಹಾರಾಡುತ್ತಿರುವ ‘ನಿಗೂಢ ಡ್ರೋನ್’ಗಳನ್ನು ಹೊಡೆದುರುಳಿಸಬೇಕು’ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ನ್ಯೂಜೆರ್ಸಿಯಲ್ಲಿ ಡ್ರೋನ್ಗಳು ಹಾರಾಟ ನಡೆಸಿದ್ದು ಪತ್ತೆಯಾಗಿತ್ತು. ಇದಾದ ಬಳಿಕ ಬೇರೆ ಸ್ಥಳಗಳಲ್ಲಿ ಹಾರಾಡಿದ್ದು ಕಂಡುಬಂದಿದೆ.

ದೇಶದ ಒಳಗೆ ಹಾರಾಡಿರುವ ಡ್ರೋನ್ಗಳಿಂದ ದೇಶದ ಭದ್ರತೆಗೆ ಯಾವುದೇ ಅಪಾಯವಿಲ್ಲ ಎಂದು ಅಮೆರಿಕ ಸರ್ಕಾರ ಹಾಗೂ ಶ್ವೇತಭವನದ ಅಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಇದರ ಹಿಂದೆ ವಿದೇಶಿ ಕೈವಾಡವಿರುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಹೀಗಿದ್ದರೂ, ರಹಸ್ಯವಾಗಿ ಹಾರಾಡಿದ ಡ್ರೋನ್ಗಳ ಕುರಿತು ತನಿಖೆಗೆ ಆದೇಶಿಸಲಾಗಿದೆ.

‘ದೇಶದಾದ್ಯಂತ ರಹಸ್ಯವಾಗಿ ಡ್ರೋನ್ಗಳು ಹಾರಾಟ ನಡೆಸಿದ್ದು ಪತ್ತೆಯಾಗಿದೆ. ಸರ್ಕಾರದ ಗಮನಕ್ಕೆ ಬಾರದೇ ಇವುಗಳು ಹಾರಾಟ ನಡೆಸಿದ್ದವೇ? ನನ್ನ ಪ್ರಕಾರ, ಆ ರೀತಿ ಇಲ್ಲ’ ಎಂದು ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣ ‘ಟ್ರೂಥ್ ಸೋಷಿಯಲ್’ನಲ್ಲಿ ಬರೆದುಕೊಂಡಿದ್ದಾರೆ.

‘ಈ ವಿಚಾರವು ಜನರಿಗೆ ತಿಳಿಯಬೇಕು, ಇಲ್ಲದಿದ್ದರೆ ಅವುಗಳನ್ನು ಹೊಡೆದು ಉರುಳಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.