ವಾಷಿಂಗ್ಟನ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೊಂದಿಗೆ ಈಗಲೂ ಉತ್ತಮ ಸಂಬಂಧ ಹೊಂದಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಮೊದಲ ಅವಧಿಗೆ ಅಧ್ಯಕ್ಷರಾಗಿದ್ದ ವೇಳೆ ಕಿಮ್ ಅವರೊಂದಿಗೆ ಹಲವು ಶೃಂಗಸಭೆಗಳನ್ನು ನಡೆಸಿದ್ದ ಟ್ರಂಪ್, ಉತ್ತರ ಕೊರಿಯಾವನ್ನು ಮತ್ತೊಮ್ಮೆ ಪರಮಾಣು ಶಕ್ತಿ ರಾಷ್ಟ್ರ ಎಂದು ಉಲ್ಲೇಖಿಸಿದ್ದಾರೆ.

ಓವಲ್ ಕಚೇರಿಯಲ್ಲಿ ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಟ್ರಂಪ್ ಮಾತನಾಡಿದ್ದಾರೆ.

ಕಿಮ್ ಜೊತೆಗಿನ ಸಂಬಂಧವನ್ನು ಮರುಸ್ಥಾಪಿಸುವ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಕಿಮ್ ಜಾಂಗ್ ಉನ್ ಅವರೊಂದಿಗೆ ಈಗಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಏನಾಗುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ಅವರು ಖಂಡಿತವಾಗಿಯೂ ಪರಮಾಣು ಶಕ್ತಿ ಹೊಂದಿದ್ದಾರೆ' ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಎರಡನೇ ಆವಧಿಗೆ, ಇದೇ ವರ್ಷ ಜನವರಿ 20ರಂದು ಅಧಿಕಾರ ವಹಿಸಿಕೊಂಡ ಟ್ರಂಪ್, ಆಗಲೂ ಉತ್ತರ ಕೊರಿಯಾವನ್ನು 'ಪರಮಾಣು ಶಕ್ತಿ' ಎಂದು ಹೇಳಿದ್ದರು. ಅದರೊಂದಿಗೆ, ಉತ್ತರ ಕೊರಿಯಾ ಜೊತೆಗಿನ ಸಂಬಂಧ ಮರುಸ್ಥಾಪನೆ ಸಂದರ್ಭದಲ್ಲಿ ಪರಮಾಣು ನಿಶ್ಯಸ್ತ್ರೀಕರಣ ಕುರಿತು ಮಾತುಕತೆ ನಡೆಸುವ ಬದಲು, ಶಸ್ತ್ರಾಸ್ತ್ರ ಕಡಿತ ಕುರಿತು ಚರ್ಚೆ ಮುಂದುವರಿಸಲಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು.
.ಉಕ್ರೇನ್ ಯುದ್ಧ ಇತ್ಯರ್ಥಕ್ಕೆ ಯತ್ನ: ಟ್ರಂಪ್, ಮೋದಿಗೆ ಧನ್ಯವಾದ ಹೇಳಿದ ಪುಟಿನ್.ಜನ್ಮದತ್ತ ಪೌರತ್ವ ರದ್ದು: ಅಮೆರಿಕ ಸುಪ್ರೀಂಕೋರ್ಟ್ಗೆ ಟ್ರಂಪ್ ಆಡಳಿತದ ಮೇಲ್ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.