ರಾಯಪುರ: ಎಡಗೈ ಬ್ಯಾಟರ್ ಇಶಾನ್ ಕಿಶನ್ (76; 32ಎ, 4x11, 6x4) ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಆಟ ಪ್ರದರ್ಶಿಸಿದರು. ನಾಯಕ ಸೂರ್ಯಕುಮಾರ್ ಯಾದವ್ (ಔಟಾಗದೇ 82;37ಎ, 4x9, 6x4) ದೀರ್ಘಕಾಲದ ನಂತರ ಸ್ಮರಣೀಯ ಇನಿಂಗ್ಸ್ ಆಡಿದರು. ಅವರಿಬ್ಬರ ಆಟದ ಬಲದಿಂದ ಭಾರತ ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಏಳು ವಿಕೆಟ್ಗಳ ಸುಲಭ ಜಯ ಗಳಿಸಿತು.

209 ರನ್ಗಳ ಗುರಿಯನ್ನು ಬೆನ್ನತ್ತಿದ ಆತಿಥೇಯ ತಂಡವು ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ಗಡಿ ದಾಟಿತು. ಆಗ ಇನಿಂಗ್ಸ್ನಲ್ಲಿ ಇನ್ನೂ 28 ಎಸೆತಗಳು ಬಾಕಿ ಇದ್ದವು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ 200ಕ್ಕೂ ಅಧಿಕ ರನ್ ಗುರಿ ಇದ್ದಾಗ ಇದು ಅತಿವೇಗದ ರನ್ಚೇಸ್ ದಾಖಲೆ ಎನಿಸಿತು.

ಭಾರತ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. ತಂಡದ ಮೊತ್ತ 6 ರನ್ ಆಗುವಷ್ಟರಲ್ಲಿ ಉತ್ತಮ ಲಯದಲ್ಲಿದ್ದ ಅಭಿಷೇಕ್ ಶರ್ಮಾ (0) ಮತ್ತು ಸಂಜು ಸ್ಯಾಮ್ಸನ್ (6) ಪೆವಿಲಿಯನ್ ಸೇರಿದರು. ಈ ಹಂತದಲ್ಲಿ ಇಶಾನ್ ಮತ್ತು ಸೂರ್ಯಕುಮಾರ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 122 (49ಎ) ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಮೂರನೇ ಕ್ರಮಾಂಕವನ್ನು ಭದ್ರಪಡಿಸುವಂತೆ ಆಟ ಪ್ರದರ್ಶಿಸಿದ ಇಶಾನ್ ಅವರು ಎದುರಾಳಿ ಬೌಲರ್ಗಳ ದಾಳಿಯನ್ನು ಪುಡಿಗಟ್ಟಿದರು. ಅವರ ನಿರ್ಗಮನದ ಬಳಿಕ ಸೂರ್ಯಕುಮಾರ್ ಅಬ್ಬರಿಸಿದರು. ಅವರು ಮತ್ತು ಶಿವಂ ದುಬೆ (ಔಟಾಗದೇ 36;18ಎ) ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 81 (37ಎ) ರನ್ ಸೇರಿಸಿ ತಂಡವನ್ನು ದಡ ಸೇರಿಸಿದರು.

ಟಾಸ್ ಗೆದ್ದ ನಾಯಕ ಸೂರ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ರಚಿನ್ ರವೀಂದ್ರ (44, 26 ಎಸೆತ) ಮತ್ತು ಕೊನೆಯ ಹಂತದಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ (ಅಜೇಯ 47, 27ಎಸೆತ) ಅವರ ಆಕ್ರಮಣಕಾರಿ ಆಟದ ನೆರವಿನಿಂದ ನ್ಯೂಜಿಲೆಂಡ್ 6 ವಿಕೆಟ್ಗೆ 208 ರನ್ ಗಳಿಸಿತು.

ಡೆವಾನ್ ಕಾನ್ವೆ (19, 19ಎ) ಮತ್ತು ಬಿಗ್ಬ್ಯಾಷ್ ಲೀಗ್ನಲ್ಲಿ ಆಡಿ ಬಂದಿದ್ದ ಟಿಮ್ ಸೀಫರ್ಟ್ (24, 13ಎ) ಅವರು ಬಿರುಸಿನ ಆಟವಾಡಿ ಪ್ರವಾಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಇಬ್ಬರೂ 43ರ ಮೊತ್ತಕ್ಕೆ ನಿರ್ಗಮಿಸಿದರು. ಬೂಮ್ರಾ ಅವರಿಗೆ ವಿಶ್ರಾಂತಿ ನೀಡಿದ ಕಾರಣ ಅವಕಾಶ ಪಡೆದ ಹರ್ಷಿತ್ ರಾಣಾ (35ಕ್ಕೆ1) ನಾಲ್ಕನೇ ಓವರಿನಲ್ಲಿ ದಾಳಿಗಿಳಿದು, ತಕ್ಷಣ ಯಶಸ್ಸು ಕಂಡರು. ವರುಣ್ ಚಕ್ರವರ್ತಿ ಮರು ಓವರಿನಲ್ಲಿ ಸೀಫರ್ಟ್ ಅವರ ವಿಕೆಟ್ ಪಡೆದರು.

ರಚಿನ್ ರವೀಂದ್ರ ಕೆಲವು ಆಕರ್ಷಕ ಹೊಡೆತಗಳನ್ನು ಪ್ರದರ್ಶಿಸಿದರು. ಆದರೆ ಕುಲದೀಪ್ ಅವರ ಸ್ಟಂಪ್ನಿಂದ ಆಚೆಯಿದ್ದ ಎಸೆತವನ್ನು ಆಡುವ ಭರದಲ್ಲಿ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಕ್ಯಾಚಿತ್ತರು. ಗಾಯಾಳು ವಾಷಿಂಗ್ಟನ್ ಸುಂದರ್ ಬದಲು ಅವಕಾಶ ಪಡೆದಿದ್ದ ಕುಲದೀಪ್ ಇದಕ್ಕೆ ಮೊದಲು ಗ್ಲೆನ್ ಫಿಲಿಪ್ಸ್ (19) ವಿಕೆಟ್ ಪಡೆದಿದ್ದರು.

ಒಂದು ಹಂತದಲ್ಲಿ 10 ಓವರುಗಳಲ್ಲಿ 3 ವಿಕೆಟ್ಗೆ 110 ರನ್ ಗಳಿಸಿದ್ದ ನ್ಯೂಜಿಲೆಂಡ್ ತಂಡ, ರವೀಂದ್ರ ಅವರು ನಿರ್ಗಮಿಸಿದಾಗ 5 ವಿಕೆಟ್ಗೆ 129 ರನ್ ಗಳಿಸಿದ್ದು, ಕುಸಿತದ ಭೀತಿಗೆ ಒಳಗಾಯಿತು. ಏಳನೇಯವರಾಗಿ ದಾಳಿಗಿಳಿದ ಶಿವಂ ದುಬೆ, ಉತ್ತಮ ಲಯದಲ್ಲಿರುವ ಡ್ಯಾರಿಲ್ ಮಿಚೆಲ್ ವಿಕೆಟ್ ಪಡೆದರು. ಆದರೆ ಸ್ಯಾಂಟ್ನರ್ ಅಜೇಯ ಆಟದಲ್ಲಿ ಒಂದು ಸಿಕ್ಸರ್, ಆರು ಬೌಂಡರಿಗಳನ್ನು ಬಾರಿಸಿದರು. ಝಾಕ್ ಫೌಲ್ಕ್ಸ್ (ಅಜೇಯ 15, 8ಎ) ಬೆಂಬಲ ನೀಡಿದರು. ಕೊನೆಯ ಐದು ಓವರುಗಳಲ್ಲಿ 57 ರನ್ಗಳು ಬಂದವು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರುಗಳಲ್ಲಿ 6 ವಿಕೆಟ್ಗೆ 208 (ಟಿಮ್ ಸೀಫರ್ಟ್ 24, ರಚಿನ್ ರವೀಂದ್ರ 44, ಮಿಚೆಲ್ ಸ್ಯಾಂಟ್ನರ್ ಔಟಾಗದೇ 47, ಹಾರ್ದಿಕ್ ಪಾಂಡ್ಯ 25ಕ್ಕೆ1, ಕುಲದೀಪ್ ಯಾದವ್ 35ಕ್ಕೆ2, ಶಿವಂ ದುಬೆ 7ಕ್ಕೆ1).

ಭಾರತ: 15.2 ಓವರ್ಗಳಲ್ಲಿ 3 ವಿಕೆಟ್ಗೆ 209 (ಇಶಾನ್ ಕಿಶನ್ 76, ಸೂರ್ಯಕುಮಾರ್ ಯಾದವ್ ಔಟಾಗದೇ 82, ಶಿವಂ ದುಬೆ ಔಟಾಗದೇ 36).

ಪಂದ್ಯದ ಆಟಗಾರ: ಇಶಾನ್ ಕಿಶನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.