ದುಬೈ: ವಿರಾಟ್ ಕೊಹ್ಲಿ ಅವರ ಸಮಯೋಚಿತ ಅರ್ಧಶತಕದ (84) ನೆರವಿನಿಂದ ಭಾರತ ತಂಡವು ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ನಾಲ್ಕು ವಿಕೆಟ್ ಅಂತರದ ಜಯ ಗಳಿಸಿದ್ದು, ಫೈನಲ್ಗೆ ಪ್ರವೇಶಿಸಿದೆ.

ಆ ಮೂಲಕ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಐದನೇ ಸಲ ಫೈನಲ್ಗೆ ಲಗ್ಗೆ ಇಟ್ಟಿದೆ. 2002 ಹಾಗೂ 2013ನೇ ಸಾಲಿನಲ್ಲಿ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೆ 2000 ಹಾಗೂ 2017ರಲ್ಲಿ ರನ್ನರ್-ಅಪ್ ಎನಿಸಿಕೊಂಡಿತ್ತು. ಈ ಪೈಕಿ ಸತತ ಮೂರನೇ ಸಲ ಫೈನಲ್ಗೇರಿದ ಸಾಧನೆ ಮಾಡಿದೆ.

ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ನಾಯಕ ಸ್ಟೀವ್ ಸ್ಮಿತ್ (73) ಹಾಗೂ ಅಲೆಕ್ಸ್ ಕ್ಯಾರಿ (61) ಅರ್ಧಶತಕಗಳ ಹೊರತಾಗಿಯೂ 49.3 ಓವರ್ಗಳಲ್ಲಿ 264 ರನ್ಗಳಿಗೆ ಆಲೌಟ್ ಆಯಿತು.

ಈ ಗುರಿ ಬೆನ್ನಟ್ಟಿದ ಭಾರತ, ಚೇಸ್ ಮಾಸ್ಟರ್ ಖ್ಯಾತಿಯ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ನೆರವಿನಿಂದ 48.1 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಶ್ರೇಯಸ್ ಅಯ್ಯರ್ (45), ಕೆ.ಎಲ್. ರಾಹುಲ್ (42*), ನಾಯಕ ರೋಹಿತ್ ಶರ್ಮಾ (28), ಅಕ್ಷರ್ ಪಟೇಲ್ (27) ಹಾಗೂ ಹಾರ್ದಿಕ್ ಪಾಂಡ್ಯ (8) ಸಹ ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ 98 ಎಸೆತಗಳಲ್ಲಿ ಐದು ಬೌಂಡರಿಗಳ ನೆರವಿನಿಂದ 84 ರನ್ ಗಳಿಸಿದರು. ಆದರೆ ಗೆಲವಿನ ಸನಿಹದಲ್ಲಿ ಔಟ್ ಆಗಿ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು.

ಆಸ್ಟ್ರೇಲಿಯಾದ ಪರ ಆ್ಯಡಂ ಜಂಪಾ ಹಾಗೂ ನೇಥನ್ ಎಲ್ಲಿಸ್ ತಲಾ ಎರಡು ವಿಕೆಟ್ ಗಳಿಸಿದರು.

ನಾಳೆ (ಮಾ.5) ಲಾಹೋರ್ನಲ್ಲಿ ನಡೆಯಲಿರುವ ದ್ವಿತೀಯ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದ ತಂಡವು ಭಾನುವಾರ (ಮಾ.9) ದುಬೈನಲ್ಲಿ ನಡೆಯಲಿರುವ ಫೈನಲ್ನಲ್ಲಿ ಟ್ರೋಫಿಗಾಗಿ ಭಾರತ ತಂಡದ ವಿರುದ್ಧ ಸೆಣಸಲಿದೆ.

ಸ್ಮಿತ್, ಕ್ಯಾರಿ ಫಿಫ್ಟಿ; ಆಸೀಸ್ 264ಕ್ಕೆ ಆಲೌಟ್...

ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ, ನಾಯಕ ಸ್ಟೀವ್ ಸ್ಮಿತ್ (73) ಹಾಗೂ ಅಲೆಕ್ಸ್ ಕ್ಯಾರಿ (61) ಆಕರ್ಷಕ ಅರ್ಧಶತಕಗಳ ಹೊರತಾಗಿಯೂ 49.3 ಓವರ್ಗಳಲ್ಲಿ 264 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಆರಂಭದಲ್ಲೇ ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಆಸೀಸ್ ಆರಂಭಿಕ ಬ್ಯಾಟರ್ ಕೂಪರ್ ಕೊನೊಲ್ಲಿ ಖಾತೆ ತೆರೆಯುವಲ್ಲಿ ವಿಫಲರಾದರು.

ಈ ಹಂತದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ಭಾರತಕ್ಕೆ ತಲೆನೋವಾದರು. ಆದರೆ ಅವರನ್ನು ವರುಣ್ ಚಕ್ರವರ್ತಿ ಹೊರದಬ್ಬಿದರು. ಹೆಡ್ 33 ಎಸೆತಗಳಲ್ಲಿ 39 ರನ್ (5 ಬೌಂಡರಿ, 2 ಸಿಕ್ಸರ್) ಗಳಿಸಿದರು.

ಮಾರ್ನಸ್ ಲಾಬುಷೇನ್ (29) ಹಾಗೂ ಜೋಶ್ ಇಂಗ್ಲಿಸ್ (11) ವಿಕೆಟ್ ಸ್ಪಿನ್ನರ್ ರವೀಂದ್ರ ಜಡೇಜ ಪಾಲಾಯಿತು. ಈ ಹಂತದಲ್ಲಿ ಅಲೆಕ್ಸ್ ಕ್ಯಾರಿ ಅವರೊಂದಿಗೆ ಜೊತೆಗೂಡಿದ ಸ್ಮಿತ್ ತಂಡವನ್ನು ಮುನ್ನಡೆಸಿದರು.

ಭಾರತದ ವಿರುದ್ಧ ಮಗದೊಮ್ಮೆ ಮಿಂಚಿದ ಸ್ಮಿತ್ 73 ರನ್ ಗಳಿಸಿದರು. ಸ್ಮಿತ್ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದರು. 96 ಎಸೆತಗಳ ಇನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಗಳಿಸಿದರು.

ಈ ಮಧ್ಯೆ ಗ್ಲೆನ್ ಮ್ಯಾಕ್ಸ್ವೆಲ್ (7) ಅವರನ್ನು ಅಕ್ಷರ್ ಪಟೇಲ್ ಕ್ಲೀನ್ ಬೌಲ್ಡ್ ಮಾಡಿದರು. ಕೆಳ ಕ್ರಮಾಂಕದಲ್ಲಿ ಬೆನ್ ದ್ವಾರ್ಶಿಸ್ 19 ರನ್ ಗಳಿಸಿದರು. ಇನ್ನುಳಿದಂತೆ ಆ್ಯಡಂ ಜಂಪಾ 7 ಹಾಗೂ ನೇಥನ್ ಎಲ್ಲಿಸ್ 10 ರನ್ ಗಳಿಸಿದರು.

ಅತ್ತ ಶ್ರೇಯಸ್ ಅಯ್ಯರ್ ಅದ್ಭುತ ಫೀಲ್ಡಿಂಗ್ನಿಂದಾಗಿ ರನೌಟ್ ಆದ ಅಲೆಕ್ಸ್ ಕ್ಯಾರಿ, 57 ಎಸೆತಗಳಲ್ಲಿ 61 ರನ್ (8 ಬೌಂಡರಿ, 1 ಸಿಕ್ಸರ್) ಗಳಿಸಿದರು.

ಭಾರತದ ಪರ ಮೊಹಮ್ಮದ್ ಶಮಿ ಮೂರು, ವರುಣ್ ಚಕ್ರವರ್ತಿ ಹಾಗೂ ರವೀಂದ್ರ ಜಡೇಜ ತಲಾ ಎರಡು ಮತ್ತು ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಗಳಿಸಿದರು.

ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ...

ಈ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ದುಬೈನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಟಾಸ್ ವೇಳೆಯಲ್ಲಿ ನಾಯಕ ರೋಹಿತ್ ಶರ್ಮಾ ತಿಳಿಸಿದ್ದಾರೆ.

ಇದರೊಂದಿಗೆ ನಾಲ್ವರು ಸ್ಪಿನ್ನರ್ಗಳ ರಣತಂತ್ರದೊಂದಿಗೆ ಭಾರತ ಕಣಕ್ಕಿಳಿದಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದಲ್ಲಿ ಎರಡು ಬದಲಾವಣೆ ತರಲಾಗಿದೆ.

'ಎ' ಗುಂಪಿನ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಗುಂಪಿನ ಅಗ್ರಸ್ಥಾನಿಯಾಗಿ ಭಾರತ ಸೆಮಿಫೈನಲ್ಗೆ ಲಗ್ಗೆ ಇಟ್ಟಿತ್ತು. ಅತ್ತ ಆಸ್ಟ್ರೇಲಿಯಾ 'ಬಿ' ಗುಂಪಿನ ಎರಡನೇ ತಂಡವಾಗಿ ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿತ್ತು.

ಭಾರತ ತಂಡ ಇಂತಿದೆ:

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ.

ಆಸ್ಟ್ರೇಲಿಯಾ ತಂಡ ಇಂತಿದೆ:

ಕೂಪರ್ ಕೊನೊಲ್ಲಿ, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ (ನಾಯಕ), ಮಾರ್ನಸ್ ಲಾಬುಷೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್ವೆಲ್, ಬೆನ್ ದ್ವಾರ್ಶಿಸ್, ನೇಥನ್ ಎಲ್ಲಿಸ್, ಆ್ಯಡಂ ಜಂಪಾ, ತನ್ವೀರ್ ಸಂಗಾ.
.Champions Trophy: ಆಸ್ಟ್ರೇಲಿಯಾಕ್ಕೆ ‘ನಾಕೌಟ್ ಪಂಚ್’ ಕೊಡುವುದೇ ಭಾರತ?.Champions Trophy: ವರುಣ್ ಸ್ಪಿನ್ ಮೋಡಿ; ಕಿವೀಸ್ ವಿರುದ್ಧ ಗೆದ್ದ ಭಾರತ ಅಜೇಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.