ಕರಾಚಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ತಂಡವು ಸೂಪರ್ ಎಂಟರ ಹಂತದಲ್ಲೇ ಹೊರಬಿದ್ದಿರುವುದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಕ್ರೋಶಗೊಂಡಿದ್ದು, ಕಳಪೆ ಪ್ರದರ್ಶನಕ್ಕಾಗಿ ಆಟಗಾರರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.

‘ಮಂಡಳಿಯು ಆಟಗಾರರ ಸಂಭಾವನೆ ಕಡಿತಗೊಳಿಸುತ್ತಿದೆ ಎಂಬ ವರದಿಗಳು ಸರಿಯಲ್ಲ. ಆದರೆ ಈ ಟೂರ್ನಿಯಲ್ಲಿ ಬೇಗನೆ ನಿರ್ಗಮಿಸಿದ ಕಾರಣ ತಂಡದ ಆಟಗಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸುತ್ತಿದೆ’ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

‘ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ ಆಟಗಾರರಿಗೆ ಆರ್ಥಿಕವಾಗಿ ದಂಡ ವಿಧಿಸುವ ಕ್ರಮವೂ ಪರಿಶೀಲನೆಯಲ್ಲಿದೆ. ಆಟಗಾರರಿಗೆ ಪಾಠ ಕಲಿಸಲು ಈ ಕ್ರಮ ಸರಿಯೇ ಎಂಬ ಬಗ್ಗೆ ಚರ್ಚೆ ನಡೆದಿದೆ’ ಎಂದು ಮೂಲಗಳು ದೃಢಪಡಿಸಿವೆ.

ಪಾಕ್ ತಂಡದ ಆಟಗಾರರು ಶ್ರೀಲಂಕಾದಿಂದ ಭಾನುವಾರ ರಾತ್ರಿ ಸದ್ದುಗದ್ದಲವಿಲ್ಲದೇ ತವರಿಗೆ ಮರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.