ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನದಲ್ಲಿ ₹41 ಕೋಟಿ ಗಳಿಸಿದ ಹೃತಿಕ್‌ – ದೀಪಿಕಾ ಅಭಿನಯದ ‘ಫೈಟರ್‌’

Published 27 ಜನವರಿ 2024, 11:00 IST
Last Updated 27 ಜನವರಿ 2024, 11:00 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ‘ಫೈಟರ್‌’ ಸಿನಿಮಾವು ಬಿಡುಗಡೆಯಾದ ಎರಡು ದಿನಗಳಲ್ಲಿ ಒಟ್ಟು ₹41.20 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ ತಿಳಿಸಿದ್ದಾರೆ.

‘ಪಠಾಣ್‌’ ಹಾಗೂ ‘ವಾರ್‌’ ಸಿನಿಮಾ ಖ್ಯಾತಿಯ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌ ಅವರು ’ಫೈಟರ್’ ಸಿನಿಮಾ ಮೂಲಕ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ದೇಶಭಕ್ತಿ ಮತ್ತು ತ್ಯಾಗದ ಕಥೆಯನ್ನು ತೆರೆಯ ಮೇಲೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.

ಫೈಟರ್‌ ಚಿತ್ರವು ಗುರುವಾರ ( ಜನವರಿ 25) ತೆರೆಕಂಡಿತ್ತು.

‘ಫೈಟರ್‌’ ಸಿನಿಮಾ ಗಣರಾಜ್ಯೋತ್ಸವದ ಮುನ್ನಾದಿನದಂದು ಬಿಡುಗಡೆಯಾಗಿದ್ದು, ಚಿತ್ರವು ಮೊದಲ ದಿನ ₹24.60 ಕೋಟಿ ಸಂಗ್ರಹಿಸಿದೆ ಎಂದು ನಿರ್ಮಾಪಕರು ಮಾಹಿತಿ ಹಂಚಿಕೊಂಡಿದ್ದರು.

ವಾಯುಪಡೆಯ ಅಧಿಕಾರಿ ಮಿನಲ್‌ ರಾಥೋರ್‌ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೆ, ಶ್ಯಾಮ್‌ಶೇರ್‌ ಪಟಾನಿಯಾ ಪಾತ್ರದಲ್ಲಿ ನಟ ಹೃತಿಕ್‌ ರೋಷನ್‌ ಅಭಿನಯಿಸಿದ್ದಾರೆ. ನಟ ಅನಿಲ್‌ ಕಪೂರ್‌ ವಾಯುಪಡೆಯ ಅಧಿಕಾರಿ (ಐಎಎಫ್) ರಾಕೇಶ್‌ ಜೈ ಸಿಂಗ್‌ (ರಾಕಿ) ಪಾತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರವನ್ನು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರದಲ್ಲಿ ಅಕ್ಷಯ್ ಒಬೆರಾಯ್, ಕರಣ್ ಸಿಂಗ್ ಗ್ರೋವರ್ ಸೇರಿದಂತೆ ಸಂಜೀದಾ ಶೇಖ್ ಸಹ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT