ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ್‌ ಹಾಸನ್‌, ವಿಜಯ್‌ ಸೇತುಪತಿ ನಟನೆಯ ’ವಿಕ್ರಮ್‘ ಸಿನಿಮಾ ಜೂನ್‌ 3ಕ್ಕೆ ತೆರೆಗೆ

Last Updated 14 ಮಾರ್ಚ್ 2022, 8:35 IST
ಅಕ್ಷರ ಗಾತ್ರ

ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಅಭಿನಯದ ಮೂಲಕ ಜನಪ್ರಿಯರಾಗಿರುವ ನಟ ಕಮಲ್‌ ಹಾಸನ್‌ ಅವರ 'ವಿಕ್ರಮ್'ಸಿನಿಮಾಜೂನ್‌ 3ರಂದು ಬಿಡುಗಡೆಯಾಗಲಿದೆ.

ಜೂನ್‌ 3ರಂದು 'ವಿಕ್ರಮ್'ಸಿನಿಮಾ ಬಿಡುಗಡೆಯಾಗಲಿದೆ ಎಂದು ನಟ ಕಮಲ್ ಹಾಸನ್‌ ಟ್ವೀಟ್‌ ಮಾಡಿದ್ದಾರೆ. ಹಾಗೇ ಚಿತ್ರತಂಡ ಕೂಡ ಭಾನುವಾರ ಸಿನಿಮಾ ಮೇಕಿಂಗ್‌ ವಿಡಿಯೊ ಬಿಡುಗಡೆ ಮಾಡಿ ಸಿನಿಮಾ ತೆರೆಗೆ ಬರುವ ದಿನಾಂಕವನ್ನು ಖಚಿತಪಡಿಸಿದೆ.

ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತಮಿಳಿನ ಮತ್ತೊಬ್ಬ ಸ್ಟಾರ್‌ ನಟ ವಿಜಯ್‌ ಸೇತುಪತಿ, ಮಲಯಾಳಂ ನಟ ಫಹಾದ್‌ ಫಾಸಿಲ್‌ ಕೂಡ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ವಿಕ್ರಮ್'ಸಿನಿಮಾವನ್ನು ಲೋಕೇಶ್‌ ಕನಕರಾಜುನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT