ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂಪುರ್ ಶರ್ಮಾ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಅಜ್ಮೀರ್ ದರ್ಗಾ ಮೌಲ್ವಿ ಬಂಧನ

ಅಕ್ಷರ ಗಾತ್ರ

ಜೈಪುರ: ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಅಜ್ಮೀರ್ ದರ್ಗಾದ ಮೌಲ್ವಿ ಸಲ್ಮಾನ್ ಚಿಶ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವಾದಿ ಮಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರ ತಲೆ ಕತ್ತರಿಸಿ ತಂದರೆ ಅವರಿಗೆ ತಮ್ಮ ಮನೆಯನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿಕೆ ನೀಡಿದ್ದ ವಿಡಿಯೊವನ್ನು ಸಲ್ಮಾನ್ ಚಿಶ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಪ್ರವಾದಿ ಮಹಮ್ಮದ್‌ರನ್ನು ಅವಮಾನಿಸಿದ್ದಕ್ಕಾಗಿ ಆಕೆಯನ್ನು (ನೂಪುರ್ ಶರ್ಮಾ) ಗುಂಡಿಟ್ಟು ಸಾಯಿಸಬೇಕಿತ್ತು ಎಂದು ಸಲ್ಮಾನ್ ಚಿಶ್ತಿ ಹೇಳಿಕೊಂಡಿದ್ದರು.

ಈ ವಿಡಿಯೊಗೆ ಸಂಬಂಧಿಸಿದಂತೆ ದರ್ಗಾದ ಮೌಲ್ವಿ ಸಲ್ಮಾನ್ ಚಿಶ್ತಿ ವಿರುದ್ಧ ನೀಡಲಾಗಿರುವ ದೂರಿನ ಅನ್ವಯ ರಾಜಸ್ಥಾನ ಪೊಲೀಸರು ಸೋಮವಾರ ಎಫ್‌ಐಆರ್ ದಾಖಲಿಸಿದ್ದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT