ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಚನ್‌ಜುಂಗಾ ಅಪಘಾತಕ್ಕೆ ನಿರ್ವಹಣಾ ಲೋಪ ಕಾರಣ: ರೈಲ್ವೆ ಸುರಕ್ಷತಾ ಆಯುಕ್ತರ ವರದಿ

Published : 16 ಜುಲೈ 2024, 15:50 IST
Last Updated : 16 ಜುಲೈ 2024, 15:50 IST
ಫಾಲೋ ಮಾಡಿ
Comments

ನವದೆಹಲಿ: ಸ್ವಯಂಚಾಲಿತ ಸಿಗ್ನಲ್ ವಲಯಗಳಲ್ಲಿ ರೈಲು ಕಾರ್ಯಾಚರಣೆ ನಿರ್ವಹಣೆಯಲ್ಲಿನ ಹಲವು ಹಂತಗಳಲ್ಲಿ ಇರುವ ಲೋಪಗಳು, ರೈಲು ಚಾಲಕರು ಹಾಗೂ ಸ್ಟೇಷನ್ ಮಾಸ್ಟರ್‌ಗಳಿಗೆ ಸೂಕ್ತ ಸಮಾಲೋಚನೆ ಸಿಗದೆ ಇರುವುದು ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ ಅಪಘಾತಕ್ಕೆ ಕಾರಣ ಎಂದು ರೈಲ್ವೆ ಸುರಕ್ಷತಾ ಆಯುಕ್ತರ ವರದಿಯು ಹೇಳಿದೆ.

ಜೂನ್‌ 17ರಂದು ನಡೆದ ಅಪಘಾತದ ಬಗ್ಗೆ ಸಿದ್ಧಪಡಿಸಿರುವ ವರದಿಯಲ್ಲಿ ಆಯುಕ್ತರು, ರೈಲುಗಳು ಡಿಕ್ಕಿಯಾಗುವುದನ್ನು ತಪ್ಪಿಸುವ ‘ಕವಚ್’ ವ್ಯವಸ್ಥೆಯನ್ನು ಆದ್ಯತೆಯ ಮೇಲೆ ಅಳವಡಿಸುವ ಕೆಲಸ ಆಗಬೇಕು ಎಂದು ಶಿಫಾರಸು ಮಾಡಿದ್ದಾರೆ. ಈ ಅಪಘಾತದಲ್ಲಿ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಅಪಘಾತಕ್ಕೆ ಕಾರಣಗಳು

  • ಲೋಪ ಇದ್ದ ಸಿಗ್ನಲ್‌ಗಳನ್ನು ದಾಟಲು ಸರಕು ಸಾಗಣೆ ರೈಲಿನ ಚಾಲಕನಿಗೆ ಸಂಬಂಧಪಟ್ಟ ಅಧಿಕಾರಿಗಳು ತಪ್ಪಾಗಿ ಅನುಮತಿ ನೀಡಿದ್ದರು. ಈ ಸಿಗ್ನಲ್‌ಗಳನ್ನು ದಾಟುವಾಗ ವೇಗದ ಮಿತಿ ಎಷ್ಟಿರಬೇಕು ಎಂಬುದನ್ನು ಆ ಚಾಲಕನಿಗೆ ತಿಳಿಸಿರಲಿಲ್ಲ.

  • ಸಿಗ್ನಲ್ ವ್ಯವಸ್ಥೆ ಹಾಳಾದ ನಂತರ, ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಮತ್ತು ಸರಕು ಸಾಗಣೆ ರೈಲು ಮಾತ್ರವಲ್ಲದೆ, ಈ ವಿಭಾಗದ ಮೂಲಕ ಐದು ಇತರ ರೈಲುಗಳು ಸಂಚರಿಸಿವೆ.

  • ವೇಗದ ಮಿತಿ ಹಾಗೂ ನಿಲುಗಡೆಯ ನಿಯಮವನ್ನು ಪಾಲನೆ ಮಾಡಿದ್ದು ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಚಾಲಕ ಮಾತ್ರ. ಇನ್ನುಳಿದ ಆರು ರೈಲುಗಳ ಚಾಲಕರು ನಿಯಮ ಪಾಲಿಸಿಲ್ಲ.

  • ಚಾಲಕರಿಗೆ ನೀಡಿದ್ದ ಅನುಮತಿಯಲ್ಲಿ ಪೂರ್ಣ ಮಾಹಿತಿ ಇರಲಿಲ್ಲ. ಇದರಿಂದಾಗಿ ವೇಗ ಎಷ್ಟಿರಬೇಕು ಎಂಬ ವಿಚಾರದಲ್ಲಿ ಗೊಂದಲ ನಿರ್ಮಾಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT