ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರನ್ನು ಗುರುವಾರ ಬೆಳಿಗ್ಗೆ 9.55ರ ವೇಳೆಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು.
ಮುಂಜಾನೆ 4ರ ಸುಮಾರಿನಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆ ಅರಂಭವಾಗಿತ್ತು. ಐದು ಗಂಟೆಗಳ ಪ್ರಯಾಣದ ನಂತರ ದರ್ಶನ್ ಜೈಲು ತಲುಪಿದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಜೈಲು ಅಧೀಕ್ಷಕರು ಸಮಾಲೋಚನೆ ನಡೆಸಿದರು.