ಚಂಡೀಗಡ: ಹಂತಕರ ಗುಂಡೇಟುಗಳಿಂದ ಹತ್ಯೆಗೊಳಗಾದ ಪಂಜಾಬ್‌ನ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಅವರ ದೇಹದೊಳಗೆ 19 ಗುಂಡುಗಳು ಹೊಕ್ಕಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ.
ಸಿಧು ಅವರ ದೇಹದ ಬಲ ಭಾಗಕ್ಕೆ ಹೆಚ್ಚಿನ ಗುಂಡುಗಳು ಹೊಕ್ಕಿವೆ. ಗುಂಡುಗಳು ಅವರ ದೇಹ ಹೊಕ್ಕಿದ ಕೇವಲ 15 ನಿಮಿಷಗಳ ಅವಧಿಯಲ್ಲಿ ಅವರ ಜೀವ ಹಾರಿಹೋಗಿರುವ ಸಾಧ್ಯತೆ ಇದೆ ಎಂದು ಐವರು ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.
ಪಂಜಾಬ್‌ನ ಆಮ್ ಆದ್ಮಿಸರ್ಕಾರವು ಗಣ್ಯ ವಕ್ತಿಗಳಿಗೆ ನೀಡಿದ್ದಭದ್ರತೆ ವಾಪಸ್ ಪಡೆದ ಮರು ದಿನವೇಮೇ 29ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಮೂಸೆವಾಲಾ ಅವರ ಕಾರನ್ನು ಅಡ್ಡಗಟ್ಟಿ ಗುಂಡಿನ ಸುರಿಮಳೆ ಗರೆದು ಪರಾರಿಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.