ಮಂಗಳವಾರ, ಏಪ್ರಿಲ್ 20, 2021
32 °C

ಬಾಲಾಕೋಟ್‌ ದಾಳಿಗೆ 2 ವರ್ಷ: ಸಶಸ್ತ್ರ ಪಡೆಗಳನ್ನು ಕೊಂಡಾಡಿದ ಶಾ, ರಾಜನಾಥ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪುಲ್ವಾಮ ಉಗ್ರ ದಾಳಿಗೆ ಪ್ರತಿಯಾಗಿ, ಭಾರತದ ವಾಯುಪಡೆ ನಡೆಸಿದ ಬಾಲಾಕೋಟ್‌ ವೈಮಾನಿಕ ದಾಳಿ ನಡೆದು ಇಂದಿಗೆ ಎರಡು ವರ್ಷ. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಭಾರತೀಯ ಸಶಸ್ತ್ರ ಪಡೆಗಳನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: 

'ಬಾಲಾಕೋಟ್ ವೈಮಾನಿಕದಾಳಿಗೆ ಎರಡು ವರ್ಷ ತುಂಬಿದ ಈ ದಿನದಂದು, ಭಾರತೀಯ ವಾಯುಪಡೆಯ ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಗೆ ನಾನು ನಮನ ಸಲ್ಲಿಸುತ್ತೇನೆ. ಬಾಲಾಕೋಟ್ ದಾಳಿಯ ಯಶಸ್ಸು ಭಯೋತ್ಪಾದನೆ ವಿರುದ್ಧದ ಭಾರತದ ಬಲವಾದ ಇಚ್ಚಾಶಕ್ತಿಯನ್ನು ತೋರಿಸುತ್ತದೆ. ಭಾರತವನ್ನು ಸುರಕ್ಷಿತವಾಗಿರಿಸಿರುವ ಸಶಸ್ತ್ರಪಡೆಗಳ ಬಗ್ಗೆ ಹಮ್ಮೆಯಾಗುತ್ತದೆ,' ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಇದನ್ನೂ ಓದಿ: 

'2019ರ ಈ ದಿನ, ಭಾರತೀಯ ವಾಯುಪಡೆಯು ಪುಲ್ವಾಮ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆ ನೀಡುವ ಮೂಲಕ, ಭಯೋತ್ಪಾದನೆ ವಿರುದ್ಧದ ಭಾರತದ ಹೊಸ ನೀತಿಗಳನ್ನು ಸ್ಪಷ್ಟಪಡಿಸಿತು,' ಎಂದು ಗೃಹ ಸಚಿವ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

2019ರ ಫೆ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆದ ನಂತರ ಭಾರತವು ಪಾಕಿಸ್ತಾನದಲ್ಲಿ ಕಾರ್ಯನಿರತವಾಗಿರುವ ಉಗ್ರರ ಅಡಗುದಾಣಗಳ ಕುರಿತು ಆ ದೇಶಕ್ಕೆ ದಾಖಲೆಗಳನ್ನು ನೀಡಿತ್ತು. ಅದರ ಪ್ರಕಾರ ಬಾಲಾಕೋಟ್‌ನಲ್ಲಿ 600 ಉಗ್ರರು ತಂಗಬಹುದಾದ ಆರು ಎಕರೆ ವಿಸ್ತೀರ್ಣದ ಉಗ್ರ ತರಬೇತಿ ಕೇಂದ್ರವಿರುವುದಾಗಿ ತಿಳಿಸಿತ್ತು. ಇದೇ ಜಾಗದ ಮೇಲೆ ಭಾರತೀಯ ವಾಯುಪಡೆ ಫೆ.26ರಂದು ವೈಮಾನಿಕ ದಾಳಿ ನಡೆಸಿತ್ತು. ‘ದಾಳಿಯಿಂದ ಉಗ್ರರ ನೆಲೆಗೆ ಭಾರಿ ಹಾನಿಯಾಗಿದೆ. 350ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ಹೇಳಿತ್ತು.

ಇವುಗಳನ್ನೂ ಓದಿ

ಬಾಲಾಕೋಟ್‌ನಿಂದ ಬಂದ ಉಗ್ರರು ಹೇಳಿದ ಕಥೆ, ಮಾಡಿದ ಅನಾಹುತ

ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಸೈನಿಕರ ವಶಕ್ಕೆ ಸಿಗುವ ಮುನ್ನಾ

ಬಾಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ

ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’​

ಪಾಕ್‌ ದುಸ್ಸಾಹಸ; ಹಿಮ್ಮೆಟಿಸಿದ ಸೇನೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು